ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏರ್‌ ಸಹಾರಾ ಈಗ ಜೆಟ್‌ ಏರ್‌ವೇಸ್‌ನ ಕೈವಶ...

By Staff
|
Google Oneindia Kannada News

ಏರ್‌ ಸಹಾರಾ ಈಗ ಜೆಟ್‌ ಏರ್‌ವೇಸ್‌ನ ಕೈವಶ...
ರೂ.2300ಕೋಟಿಗೆ ಸಂಸ್ಥೆ ಮಾರಾಟ, ಏರ್‌ ಸಹಾರಾ ಉದ್ಯೋಗಿಗಳು ಬೀದಿಪಾಲು...!?

ಮುಂಬೈ: ಪ್ರತಿಷ್ಠಿತ ವಿಮಾನಯಾನ ಸಂಸ್ಥೆ ಜೆಟ್‌ ಏರವೇಸ್‌, ಏರ್‌ ಸಹಾರಾ ವಿಮಾನಯಾನ ಸಂಸ್ಥೆಯನ್ನು ಖರೀದಿಸಿದೆ.

ಗುರುವಾರ ನಡೆದ ಜೆಟ್‌ ಏರ್‌ವೇಸ್‌ ನಿರ್ದೇಶಕ ಮಂಡಳಿಯ ಸಭೆಯ ನಂತರ, ಈ ವಿಷಯ ಪ್ರಕಟಿಸಲಾಯಿತು. ಏರ್‌ ಸಹಾರಾವನ್ನು 2,300ಕೋಟಿ ರೂಪಾಯಿಗಳಿಗೆ ಖರೀದಿಸಿರುವುದಾಗಿ ಜೆಟ್‌ ಏರ್‌ವೇಸ್‌ ಹೇಳಿಕೊಂಡಿದೆ. ಈ ಸಂಬಂಧ ಒಪ್ಪಂದಕ್ಕೆ ಜೆಟ್‌ ಏರ್‌ವೇಸ್‌ ಅಧ್ಯಕ್ಷ ನರೇಶ್‌ ಗೋಯಲ್‌ ಮತ್ತು ಸಹಾರಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಸುಬ್ರತೋ ರಾಯ್‌ ಸಹಿ ಹಾಕಿದ್ದಾರೆ.

ಇನ್ನು ಮುಂದೆ ಏರ್‌ ಸಹಾರಾದ 27 ವಿಮಾನಗಳು ಜೆಟ್‌ ಹೆಸರಿನಲ್ಲೇ ಆಕಾಶದಲ್ಲಿ ಸಂಚರಿಸಲಿವೆ. ಆದರೆ ಏರ್‌ ಸಹಾರಾದಲ್ಲಿ ಕೆಲಸ ಮಾಡುವ ಎಲ್ಲ ಉದ್ಯೋಗಿಗಳನ್ನು ಜಟ್‌ಏರ್‌ವೇಸ್‌ ಸ್ವೀಕರಿಸುತ್ತಿಲ್ಲ. ಬದಲಿಗೆ ತಮಗೆ ಎಷ್ಟು ಸಿಬ್ಬಂದಿಯ ಅವಶ್ಯಕತೆ ಇದೆಯೋ ಅಷ್ಟನ್ನು ಮಾತ್ರ ಆಯ್ಕೆ ಮಾಡಿಕೊಳ್ಳುವುದಾಗಿ ಸಂಸ್ಥೆ ತಿಳಿಸಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X