ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್‌ ಪ್ರತಿಪಕ್ಷದಲ್ಲಿ ಕೂತರೆ, ಡಿಕೆಶಿಗೆ ನಾಯಕತ್ವ?

By Staff
|
Google Oneindia Kannada News

ಕಾಂಗ್ರೆಸ್‌ ಪ್ರತಿಪಕ್ಷದಲ್ಲಿ ಕೂತರೆ, ಡಿಕೆಶಿಗೆ ನಾಯಕತ್ವ?
ಯಾವ ಪತ್ರವೂ ಈ ಸರ್ಕಾರವನ್ನು ಕದಲಿಸದು ; ಮೇಡಂ ತೀರ್ಮಾನವೇ ಅಂತಿಮ -ಡಿ.ಕೆ.ಶಿವಕುಮಾರ್‌

ಬೆಂಗಳೂರು : ಜೆಡಿಎಸ್‌ ಬಹುತೇಕ ಶಾಸಕರು ಕಾಂಗ್ರೆಸ್‌ನೊಂದಿಗಿದ್ದು, ಅಗತ್ಯ ಕಾಲದಲ್ಲಿ ಸಹಕಾರಕ್ಕೆ ಬರಲಿದ್ದಾರೆ ಎಂದು ಕಾಂಗ್ರೆಸ್‌ ಮುಖಂಡ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡುತ್ತಿದ್ದ ಅವರು, ಕಾಂಗ್ರೆಸ್‌ ಹೈಕಮಾಂಡ್‌ ನಿರ್ಧಾರವೇ ಅಂತಿಮ. ಯಾವ ಪತ್ರಗಳೂ ಸಮ್ಮಿಶ್ರ ಸರ್ಕಾರದ ಭವಿಷ್ಯಕ್ಕೆ ಅಡ್ಡಿಯಾಗಲಾರವು. ವಿಶ್ವಾಸ ಮತ ಸಾಬೀತು ಪಡಿಸುವುದು ನಮಗೆ ಗೊತ್ತು ಎಂದರು.

ಸರ್ಕಾರ ಬಿದ್ದರೆ? : ಸಾಧ್ಯವಿರುವ ಪ್ರಯತ್ನಗಳ ಮೂಲಕ ಸಮ್ಮಿಶ್ರ ಸರ್ಕಾರವನ್ನು ಉಳಿಸಿಕೊಳ್ಳಲು ಕಾಂಗ್ರೆಸ್‌ ಯತ್ನಿಸುತ್ತಿದೆ. ಮತ್ತೊಂದು ಕಡೆ, ಅವಿಶ್ವಾಸದಿಂದ ಸರ್ಕಾರ ಉರುಳಿದರೆ ಪ್ರತಿಪಕ್ಷ ಸ್ಥಾನದಲ್ಲಿ ಕೂರಲು ಸಿದ್ಧವಾಗುತ್ತಿದೆ.

ಕಾಂಗ್ರೆಸ್‌ ಪ್ರತಿಪಕ್ಷದ ನಾಯಕ ಸ್ಥಾನಕ್ಕೆ ಡಿ.ಕೆ.ಶಿವಕುಮಾರ್‌ ಹೆಸರು ಕೇಳಿಬರುತ್ತಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X