ಪವಾಡಗಳಿಂದ ಸರ್ಕಾರ ಉಳಿಯಬಹುದು! -ಧರಂ
ಪವಾಡಗಳಿಂದ ಸರ್ಕಾರ ಉಳಿಯಬಹುದು! -ಧರಂ
ದೇವೇಗೌಡರ ಜೊತೆ ಮಹತ್ವದ ಮಾತುಕತೆ, ಹೈಕಮಾಂಡ್ ಆದೇಶದ ನಿರೀಕ್ಷೆಯಲ್ಲಿ ಮುಖ್ಯಮಂತ್ರಿ
ಬೆಂಗಳೂರು : ವಿಶ್ವಾಸಮತ ಸಾಬೀತಿಗೆ ಮುನ್ನವೇ, ಸರ್ಕಾರದಿಂದ ದೂರಸರಿಯುವ(ರಾಜೀನಾಮೆ) ಅವಕಾಶ ನನ್ನ ಮುಂದೆ ಮುಕ್ತವಾಗಿದೆ ಎಂದು ಮುಖ್ಯಮಂತ್ರಿ ಎನ್.ಧರ್ಮಸಿಂಗ್ ಶುಕ್ರವಾರ ಹೇಳಿದರು.
ಜ.27ರಂದು ಬಹುಮತ ಸಾಬೀತಿಗೆ ರಾಜ್ಯಪಾಲರು ಗಡುವು ನೀಡಿರುವ ಬೆನ್ನಲ್ಲಿ ಮುಖ್ಯಮಂತ್ರಿಗಳ ಈ ಹೇಳಿಕೆ ಕುತೂಹಲ ಕೆರಳಿಸಿದೆ. ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಮುಕ್ತ ಅವಕಾಶ ನನ್ನ ಮುಂದಿದ್ದರೂ, ನಾನು ವೈಯುಕ್ತಿಕ ನಿರ್ಧಾರವನ್ನು ತೆಗೆದುಕೊಳ್ಳುವುದಿಲ್ಲ. ಪಕ್ಷದ ಹೈಕಮಾಂಡ್‌ನ ಆದೇಶದಂತೆ ನಿರೀಕ್ಷಿಸುತ್ತಿದ್ದೇನೆ. ಹೈಕಮಾಂಡ್ ಆದೇಶವನ್ನು ಪಾಲಿಸುತ್ತೇನೆ ಎಂದರು.
ಶನಿವಾರದಿಂದ ಹೈದರಾಬಾದ್‌ನಲ್ಲಿ ಎಐಸಿಸಿ ಅಧಿವೇಶನ ಆರಂಭವಾಗುತ್ತಿದ್ದು, ತಾವು ಜ.23ರಂದು ಮಾತ್ರ ಅಧಿವೇಶನಕ್ಕೆ ಹಾಜರಾಗುವುದಾಗಿ ಧರ್ಮಸಿಂಗ್ ಹೇಳಿದರು.
ಜೆಡಿಎಸ್ ಮುಖಂಡ ಎಚ್.ಡಿ.ದೇವೇಗೌಡ ಅವರೊಂದಿಗೆ ಸುದೀರ್ಘ ಮಾತುಕತೆ ನಡೆಸಿರುವುದಾಗಿ ಹೇಳಿದ ಧರ್ಮಸಿಂಗ್, ಪವಾಡ ನಡೆದು ಸರ್ಕಾರ ಉಳಿಯ ಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
(ಪಿಟಿಐ)
ಮುಖಪುಟ / ಧರ್ಮ-ಕಾರಣ