ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶುಕ್ರವಾರದಿಂದ ಲಾಲ್‌ಬಾಗ್‌ನಲ್ಲಿ ಫಲಪುಷ್ಪಗಳ ಮೇಳ

By Staff
|
Google Oneindia Kannada News

ಶುಕ್ರವಾರದಿಂದ ಲಾಲ್‌ಬಾಗ್‌ನಲ್ಲಿ ಫಲಪುಷ್ಪಗಳ ಮೇಳ
ಕೆಂಪು ತೋಟದಲ್ಲಿ ಸುತ್ತಾಡಲು ವಿನೂತನ ವಾಹನ, ಬನ್ನಿ ಒಂದ್ಸಲ...

ಬೆಂಗಳೂರು : ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಲಾಲ್‌ಬಾಗ್‌ನ ಗಾಜಿನ ಮನೆಯಲ್ಲಿ ಶುಕ್ರವಾರ(ಜ.20)ದಿಂದ ‘ಫಲಪುಷ್ಪ ಪ್ರದರ್ಶನ’ ಆರಂಭಗೊಳ್ಳಲಿದೆ.

ಈ ಫಲಪುಷ್ಪ ಪ್ರದರ್ಶನವನ್ನು ಶುಕ್ರವಾರ ಮೇಯರ್‌ ಮಮ್ತಾಜ್‌ ಬೇಗಂ ಉದ್ಘಾಟಿಸಲಿದ್ದು, ಈ ಪ್ರದರ್ಶನವು 6ದಿನಗಳ ಕಾಲ ಅಂದರೆ ಜ.26ರವರೆಗೆ ನಡೆಯಲಿದೆ.

ಪ್ರದರ್ಶನದಲ್ಲಿ 329 ಬಗೆಯ ವೈವಿಧ್ಯಮಯ ಫಲ ಪುಷ್ಪಗಳು ಪ್ರದರ್ಶನವಾಗಲಿದೆ. ಜನವರಿ 25ರಂದು ಶಾಲಾ ಮಕ್ಕಳಿಗೆ ಉಚಿತ ಪ್ರವೇಶವಿದೆ. ಬೆಳಗ್ಗೆ 8ರಿಂದ ರಾತ್ರಿ 7.30ರವರೆಗೆ ಪ್ರದರ್ಶನ ತೆರೆದಿಡುತ್ತದೆ. ಪ್ರವೇಶ ಶುಲ್ಕ ರೂ.15. ಮಕ್ಕಳಿಗೆ ರೂ.5.

ಲಾಲ್‌ಬಾಗ್‌ನ ಬಗ್ಗೆ ಜನಸಾಮಾನ್ಯರಿಗೆ ತಿಳಿಸಿಕೊಡುವ ಸಲುವಾಗಿ ರೇವಾ ಕಂಪನಿಯು, ಪರಿಸರ ಸ್ನೇಹಿ ವಾಹನ ಸೇವೆಯನ್ನು ಆರಂಭಿಸಲಿದೆ. ಲಾಲ್‌ಬಾಗನ್ನು ಈ ವಾಹನದ ಮೂಲಕ ಸಂದರ್ಶಿಸಲು ಅನುಕೂಲಕರ.

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ -26576781

(ಇನ್ಫೋ ವಾರ್ತೆ)

ಮುಖಪುಟ / ಬೆಂಗಳೂರು ಡೈರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X