ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಪ್ರೋ ಸಂಸ್ಥೆ ಲಾಭಾಂಶದಲ್ಲಿ ಶೇ.27.34ರಷ್ಟು ಏರಿಕೆ

By Staff
|
Google Oneindia Kannada News

ವಿಪ್ರೋ ಸಂಸ್ಥೆ ಲಾಭಾಂಶದಲ್ಲಿ ಶೇ.27.34ರಷ್ಟು ಏರಿಕೆ
ಕಳೆದ ವರ್ಷದ ಡಿ.31ಕ್ಕೆ ಕೊನೆಯಾದ ಮೂರನೇ ತ್ರೆೃಮಾಸಿಕದಲ್ಲಿ 505.1ಕೋಟಿ ಲಾಭ

ಬೆಂಗಳೂರು : ಮಾಹಿತಿ ತಂತ್ರಜ್ಞಾನ ಕ್ಷೇತ್ರದ ದಿಗ್ಗಜ ವಿಪ್ರೋ ಸಂಸ್ಥೆ, ತನ್ನ ಮೂರನೇ ತ್ರೆೃಮಾಸಿಕ ವ್ಯವಹಾರದ ಲಾಭದಲ್ಲಿ ಶೇ.27.34ರಷ್ಟು ಏರಿಕೆ ದಾಖಲಿಸಿದೆ.

ಡಿಸೆಂಬರ್‌ 31, 2004ರಂದು ಅಂತ್ಯವಾದ ಮೂರನೇ ತ್ರೆೃಮಾಸಿಕದಲ್ಲಿ ಸಂಸ್ಥೆಯ ಲಾಭ 376.5ಕೋಟಿಯಾಗಿದ್ದರೆ, ಡಿಸೆಂಬರ್‌ 31, 2005ರಂದು ಕೊನೆಗೊಂಡ ಮೂರನೇ ತ್ರೆೃಮಾಸಿಕ ವ್ಯವಹಾರದಲ್ಲಿ 505.1ಕೋಟಿ ರೂಪಾಯಿಗಳ ಲಾಭವಾಗಿದೆ.

2004ನೇ ಸಾಲಿನ ಮೊದಲ ಮೂರೂ ತ್ರೆೃಮಾಸಿಕಗಳ ಒಟ್ಟು ಲಾಭ 1892.2 ಕೋಟಿಯಾದರೆ, 2005ನೇ ಸಾಲಿನ ಮೊದಲ ಮೂರೂ ತ್ರೆೃಮಾಸಿಕಗಳ ಲಾಭ 2503.7ಕೋಟಿ ರೂಪಾಯಿಯಾಗಿದೆ.

ವಿಪ್ರೋ ಸಮೂಹ ಸಂಸ್ಥೆ, ಡಿಸೆಂಬರ್‌ 31, 2004ರಂದು ಅಂತ್ಯವಾದ ಮೂರನೇ ತ್ರೆೃಮಾಸಿಕದಲ್ಲಿ 426.8ಕೋಟಿ ಲಾಭ ದಾಖಲಿಸಿದ್ದರೆ, ಡಿಸೆಂಬರ್‌ 31, 2005ರಂದು ಅಂತ್ಯವಾದ ತ್ರೆೃಮಾಸಿಕದಲ್ಲಿ 543.5ಕೋಟಿ ಲಾಭ ಗಳಿಸಿದೆ.

2004ನೇ ಸಾಲಿನ ಮೊದಲ ಮೂರೂ ತ್ರೆೃಮಾಸಿಕಗಳ ಒಟ್ಟು ಲಾಭ 2110.1ಕೋಟಿ ರೂಪಾಯಿಯಾಗಿದ್ದರೆ, 2005ನೇ ಸಾಲಿನ ಮೊದಲ ಮೂರೂ ತ್ರೆೃಮಾಸಿಕಗಳ ಲಾಭ 2743.9ಕೋಟಿ ರೂಪಾಯಿಯಾಗಿದೆ.

(ಪಿಟಿಐ)

ಮುಖಪುಟ / ಐಟಿ - ಬಿಟಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X