ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಜ್‌ ದುರಂತ : ಸತ್ತ ಯಾತ್ರಿಗಳ ಸಂಖ್ಯೆ 400ಕ್ಕೆ ಹೆಚ್ಚಳ

By Staff
|
Google Oneindia Kannada News

ಹಜ್‌ ದುರಂತ : ಸತ್ತ ಯಾತ್ರಿಗಳ ಸಂಖ್ಯೆ 400ಕ್ಕೆ ಹೆಚ್ಚಳ
ಪವಿತ್ರಯಾತ್ರೆ ಸಾವಿನಲ್ಲಿ ಅಂತ್ಯ, ಆರು ಮಂದಿ ಭಾರತೀಯರೂ ಬಲಿ

ಮೆಕ್ಕಾ : ಸೌದಿ ಅರೇಬಿಯಾದ ಮೆಕ್ಕಾದಲ್ಲಿ ಸಂಭವಿಸಿದ ದುರಂತದಲ್ಲಿ, ಸತ್ತವರ ಸಂಖ್ಯೆ ಶುಕ್ರವಾರ 400ಕ್ಕೆ ಏರಿದೆ. ಈ ಘಟನೆಯಲ್ಲಿ ಸಾವಿರಾರು ಮಂದಿ ಗಾಯಗೊಂಡಿದ್ದಾರೆ.

ಮಿನಾಜಮಾರತ್‌ ಸೇತುವೆ ಬಳಿ ಗುರುವಾರ ಈ ದುರ್ಘಟನೆ ನಡೆದಿದೆ. ಪವಿತ್ರ ಹಜ್‌ಯಾತ್ರೆಯ ಅಂಗವಾಗಿ ಸೈತಾನನಿಗೆ ಕಲ್ಲು ಹೊಡೆಯುವ ಕಾರ್ಯಕ್ರಮದಲ್ಲಿ ಉಂಟಾದ ಕಾಲ್ತುಳಿತದಿಂದ, ಭಕ್ತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಸಂಪ್ರದಾಯಿಕ ಆಚರಣೆಯಲ್ಲಿ 20ಲಕ್ಷಕ್ಕೂ ಅಧಿಕ ಯಾತ್ರಿಗಳು ಪಾಲ್ಗೊಂಡಿದ್ದರು.

ದುರಂತದಲ್ಲಿ ಇಬ್ಬರು ಪುರುಷರು ಮತ್ತು ನಾಲ್ವರು ಮಹಿಳೆಯರು ಸೇರಿದಂತೆ ಆರು ಮಂದಿ ಭಾರತೀಯರು ಮೃತಪಟ್ಟಿದ್ದಾರೆ. ದುರಂತದಲ್ಲಿ ಸಿಲುಕಿದ ಭಾರತೀಯ ಹಜ್‌ಯಾತ್ರಿಗಳ ಯೋಗಕ್ಷೇಮದ ಬಗ್ಗೆ ಮಾಹಿತಿ ಪಡೆಯಲು ಸಹಾಯವಾಣಿಯನ್ನು ಸ್ಥಾಪಿಸಲಾಗಿದೆ.

ಸಹಾಯವಾಣಿಯ ಸಂಖ್ಯೆಗಳು ಹೀಗಿವೆ : 98440 17862, 0096625592528, 9448606783, 22244434,
22240113.

ಸಾವಿನ ಯಾತ್ರೆ? : ಮೆಕ್ಕಾದಲ್ಲಿ ಹಜ್‌ಯಾತ್ರಿಕರು ಕಾಲ್ತುಳಿತಕ್ಕೆ ಬಲಿಯಾಗುವುದು ಹೊಸತೇನಲ್ಲ. 1990ರಲ್ಲಿ ಸಂಭವಿಸಿದ ದುರಂತದಲ್ಲಿ 1426ಮಂದಿ, 2004ರಲ್ಲಿ 244 ಮಂದಿ ಭಕ್ತರು ಸಾವನ್ನಪ್ಪಿದ್ದರು.

(ಏಜನ್ಸೀಸ್‌)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X