ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಒಡಲಾಳ’ ಸೇರಿದ ರಂಗಭೂಮಿ ನಿರ್ದೇಶಕ ಸಿಜಿಕೆ

By Staff
|
Google Oneindia Kannada News

‘ಒಡಲಾಳ’ ಸೇರಿದ ರಂಗಭೂಮಿ ನಿರ್ದೇಶಕ ಸಿಜಿಕೆ
ರಂಗಭೂಮಿಯಲ್ಲಿ ತೆರೆಬಿದ್ದ ಹೊತ್ತು... ರಂಗಸಂತನಿಗೆ ಅಭಿಮಾನಿಗಳ ನಮನ

ಬೆಂಗಳೂರು : ಸಿಜಿಕೆ ಎಂದೇ ಖ್ಯಾತರಾಗಿದ್ದ ರಂಗಭೂಮಿ ನಿರ್ದೇಶಕ ಸಿ.ಜಿ.ಕೃಷ್ಣ ಸ್ವಾಮಿ ಅವರು, ಬುಧವಾರ ಬೆಳಗ್ಗೆ ಹೃದಯಾಘಾತದಿಂದ ನಿಧನರಾದರು.

ಚಿತ್ರದುರ್ಗ ಜಿಲ್ಲೆಯ ಸಿರಿಗೆರೆಯಲ್ಲಿ ಮೃತಪಟ್ಟ ಸಿ.ಜಿ.ಕೃಷ್ಣಸ್ವಾಮಿ, ಮೂರು ದಶಕಗಳ ಕಾಲ ರಂಗಭೂಮಿಯಲ್ಲಿ ದುಡಿದಿದ್ದರು. ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಸಂಜೆ 4ಗಂಟೆಗೆ ಸಿಜಿಕೆ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕಾಗಿ ಇಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ನಾಟಕ ನಿರ್ದೇಶನ ಹಾಗೂ ಬೆಳಕು ಸಂಯೋಜನೆಯಲ್ಲಿ ಪಳಗಿದ್ದ ಅವರು, ರಂಗಭೂಮಿ ಕ್ಷೇತ್ರದಲ್ಲಿ ಸಿಜಿಕೆ ಎಂದೇ ಪರಿಚಿತರು. ಸಿರಿಗಿರಿ, ರಂಗಸಂಪದ, ಸಮುದಾಯ, ನಟರಂಗ ಸೇರಿದಂತೆ ಹಲವು ರಂಗ ತಂಡಗಳ ಮೂಲಕ ಗುರ್ತಿಸಿಕೊಂಡಿದ್ದರು.

ಸಿಜಿಕೆ ನಿರ್ದೇಶನದ ‘ಒಡಲಾಳ’ ನಾಟಕ ಅತ್ಯಂತ ಜನಪ್ರಿಯ. ಈ ನಾಟಕದ ಮೂಲಕ ನಟಿ ಉಮಾಶ್ರೀ ಅವರ ಜನಪ್ರಿಯತೆ ಮತ್ತಷ್ಟು ಹೆಚ್ಚಿ, ಸಿನಿಮಾ ರಂಗಕ್ಕೆ ಪ್ರವೇಶ ಪಡೆದರು. ‘ವೀರಪ್ಪನಾಯಕ’ ಸೇರಿದಂತೆ ಹಲವು ಚಲನಚಿತ್ರಗಳಿಗೆ ಸಿಜಿಕೆ ಸಂಭಾಷಣೆ ಬರೆದಿದ್ದರು.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಉಪಾನ್ಯಾಸಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಸಿಜಿಕೆ, ಗಾಂಧಿ ಅಧ್ಯಯನ ಪೀಠದ ನಿರ್ದೇಶಕರಾಗಿ ಪ್ರಸ್ತುತ ಸೇವೆ ಸಲ್ಲಿಸುತ್ತಿದ್ದರು. ತಮ್ಮ ಸರಳ ಮತ್ತು ಸಭ್ಯ ವ್ಯಕ್ತಿತ್ವದಿಂದ ಸಿಜಿಕೆ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X