ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜ.27 : ಏಕಕಾಲದಲ್ಲಿ ಕನ್ನಡ-ಮರಾಠಿ ಸಾಹಿತ್ಯ ಸಮ್ಮೇಳನ!?

By Staff
|
Google Oneindia Kannada News

ಜ.27 : ಏಕಕಾಲದಲ್ಲಿ ಕನ್ನಡ-ಮರಾಠಿ ಸಾಹಿತ್ಯ ಸಮ್ಮೇಳನ!?
ಮರಾಠಿ ಸಮ್ಮೇಳನ : ಗಡಿ ವಿಷಯಕ್ಕೆ ಆದ್ಯತೆ, ಕನ್ನಡ ಸಮ್ಮೇಳನ : ಗಡಿ ವಿಷಯವೇ ನಾಪತ್ತೆ...!

ಬೆಂಗಳೂರು : ಕನ್ನಡ ಹಾಗೂ ಮರಾಠಿ ಸಾಹಿತ್ಯ ಸಮ್ಮೇಳನಗಳು ಏಕಕಾಲದಲ್ಲೇ ನಡೆಯಲಿದ್ದು, ಉಭಯ ರಾಜ್ಯಗಳ ನಾಗರಿಕರಲ್ಲಿ ಕುತೂಹಲ ಉಂಟುಮಾಡಿವೆ.

72ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹಲವು ಬಾರಿ ಮುಂದಕ್ಕೆ ಹೋಗಿ, ಕೊನೆಗೂ ಜನವರಿ 27ರಂದು ಬೀದರ್‌ನಲ್ಲಿ ನಡೆಯಲಿದೆ. ಅದೇ ದಿನ 79ನೇ ಅಖಿಲ ಭಾರತ ಮರಾಠಿ ಸಾಹಿತ್ಯ ಸಮ್ಮೇಳನವೂ ನಡೆಯುತ್ತಿದೆ. ಮಹಾರಾಷ್ಟ್ರದ ಗಡಿ ಪ್ರದೇಶವಾದ ಸೊಲ್ಲಾಪುರದಲ್ಲಿ ಮರಾಠಿ ಸಮ್ಮೇಳನಕ್ಕೆ ಸಿದ್ಧತೆಗಳು ನಡೆದಿವೆ. ಈ ಬೆಳವಣಿಗೆಗಳು ಸಹಜವಾಗಿ ಉಭಯ ರಾಜ್ಯಗಳ ಜನರಲ್ಲಿ ಕುತೂಹಲ ಉಂಟುಮಾಡಿದೆ.

ಮರಾಠಿ ಸಾಹಿತ್ಯ ಸಮ್ಮೇಳನ ರಾಜಕಾರಣಿಗಳನ್ನು ದೂರವಿಡುವ ತನ್ನ ಸಂಪ್ರದಾಯ ಮುಂದುವರಿಸಿದೆ. ಆದರೆ ಕನ್ನಡ ಸಾಹಿತ್ಯ ಸಮ್ಮೇಳನವನ್ನು ರಾಜ್ಯದ ಮುಖ್ಯಮಂತ್ರಿ ಧರ್ಮಸಿಂಗ್‌ ಅವರೇ ಉದ್ಘಾಟಿಸಲಿದ್ದಾರೆ.

ಮರಾಠಿ ಸಾಹಿತ್ಯ ಸಮ್ಮೇಳನದಲ್ಲಿ ಗಡಿವಿವಾದ ಕುರಿತ ಚರ್ಚೆಗೆ ಆದ್ಯತೆ ನೀಡಲಾಗಿದೆ. ಆದರೆ ಕನ್ನಡ ಸಾಹಿತ್ಯ ಸಮ್ಮೇಳನದ ವಿಷಯ ಪಟ್ಟಿಯಲ್ಲಿ ಗಡಿ ವಿವಾದದ ಪ್ರಸ್ತಾವನೆಯೇ ಇಲ್ಲ!

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X