ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಂದಹಾರ್‌ ಅಪಹರಣ : ಆರೋಪಿ ಮತ್ತೆ ಪೊಲೀಸ್‌ ವಶಕ್ಕೆ

By Staff
|
Google Oneindia Kannada News

ಕಂದಹಾರ್‌ ಅಪಹರಣ : ಆರೋಪಿ ಮತ್ತೆ ಪೊಲೀಸ್‌ ವಶಕ್ಕೆ
ಸುಳ್ಳು ಮಾಹಿತಿಯಿಂದ ಪಾಸ್‌ಪೋರ್ಟ್‌ ಪಡೆಯುವ ಯತ್ನ, ಬಲಿಗೆ ಬಿದ್ದ ಮೊಹಮ್ಮದ್‌ ಹಾಜಿ...

ಮಂಗಳೂರು : 1999ರಲ್ಲಿ ಕಂದಹಾರ್‌ನಲ್ಲಿ ನಡೆದ ವಿಮಾನ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ, ಜಾಮೀನು ಮೇಲೆ ಬಿಡುಗಡೆಯಾಗಿದ್ದ ವ್ಯಕ್ತಿಯನ್ನು ಪೊಲೀಸರು ಮತ್ತೆ ಬಂಧಿಸಿದ್ದಾರೆ.

ಜಿಲ್ಲಾ ಪೊಲೀಸ್‌ ವರಿಷ್ಠ ಬಿ.ದಯಾನಂದ್‌ ಮಂಗಳವಾರ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡುತ್ತ, ಕಂದಹಾರ್‌ ವಿಮಾನ ಅಪಹರಣ ಪ್ರಕರಣದಲ್ಲಿ ಪಾಂಡೇಶ್ವರ ಪೊಲೀಸರು ಮೊಹಮ್ಮದ್‌ ಹಾಜಿ ಅಲಿಯಾಸ್‌ ಮೊಹಮ್ಮದ್‌ ಕಾಕರ್‌ನನ್ನು ಸೋಮವಾರ ಪುನಃ ಬಂಧಿಸಿದ್ದಾರೆ ಎಂದರು.

ಅಪಹರಣಕಾರರಿಗೆ ನಕಲಿ ಪಾಸ್‌ಪೋರ್ಟ್‌ ಒದಗಿಸಿದ ಆರೋಪದ ಮೇಲೆ ಈ ವ್ಯಕ್ತಿಯನ್ನು ಈ ಮೊದಲು ಬಂಧಿಸಲಾಗಿತ್ತು. ಆನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು. ಈತ ಹೊಸ ಪಾಸ್‌ಪೋರ್ಟ್‌ ಪಡೆಯುವಾಗ ಮಾಹಿತಿಯನ್ನು ಮುಚ್ಚಿಹಾಕುವ ಯತ್ನ ಮಾಡಿರುವುದು ಪತ್ತೆಯಾಗಿದೆ. ಆದ್ದರಿಂದ ಪಾಂಡೇಶ್ವರ ಪೊಲೀಸರು ವಿಚಾರಣೆ ಕೈಗೆತ್ತಿಕೊಂಡಿದ್ದಾರೆ ಎಂದು ದಯಾನಂದ್‌ ತಿಳಿಸಿದರು.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X