ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಕಲಾದರ್ಶನ’ಕ್ಕೆ ಇನ್ಫೋಸಿಸ್‌-ವಿದ್ಯಾಭವನ ಸಾರಥ್ಯ

By Staff
|
Google Oneindia Kannada News

‘ಕಲಾದರ್ಶನ’ಕ್ಕೆ ಇನ್ಫೋಸಿಸ್‌-ವಿದ್ಯಾಭವನ ಸಾರಥ್ಯ
ಅವಕಾಶ ವಂಚಿತ ಗ್ರಾಮೀಣ ಮಕ್ಕಳು-ಯುವಕಲಾವಿದರಿಗೆ ಉತ್ತೇಜನ...

ಬೆಂಗಳೂರು : ಇನ್‌ಫೋಸಿಸ್‌ ಪ್ರತಿಷ್ಠಾನ ಹಾಗೂ ಭಾರತೀಯ ವಿದ್ಯಾಭವನ ಜಂಟಿಯಾಗಿ ರಾಜ್ಯಾದ್ಯಂತ ‘ಕಲಾದರ್ಶನ’ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಂಡಿವೆ.

ಜನವರಿ 13ರಂದು, ಬಸವನಗುಡಿಯ ವಿದ್ಯಾಭವನದಲ್ಲಿ ನಡೆಯುವ ಕಾರ್ಯಕ್ರಮವನ್ನು ಇನ್ಫೋಸಿಸ್‌ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಅವರು ಉದ್ಘಾಟಿಸುವರು. ಕಾರ್ಯಕ್ರಮದಡಿಯಲ್ಲ್ಲಿ ರಾಜ್ಯದ 16ಜಿಲ್ಲೆಗಳಲ್ಲಿ ಪ್ರತಿ ಶನಿವಾರ ಸುಗಮ ಸಂಗೀತ, ನಾಟ್ಯ, ನಾಟಕ, ಜಾನಪದ, ದೃಶ್ಯ ಹಾಗೂ ಪ್ರದರ್ಶನ ಕಲೆಗಳನ್ನು ಹಮ್ಮಿಕೊಳ್ಳಲಾಗುವುದು. ಜನವರಿ 2006ರಿಂದ ಏಪ್ರಿಲ್‌ 2007ರವರೆಗೆ ಒಟ್ಟು 71 ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನಗೊಳ್ಳಲಿದ್ದು, ಪ್ರತಿ ಕಾರ್ಯಕ್ರಮ 90 ನಿಮಿಷವನ್ನೊಳಗೊಂಡಿದೆ.

ಈ ಕಾರ್ಯಕ್ರಮದಲ್ಲಿ 355 ಕಲಾವಿದರು ಪಾಲ್ಗೊಳ್ಳುವರು. ವಸಂತ ಋತುವಿನಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ವಸಂತದರ್ಶನ ಎಂದು ಕರೆಯಲಾಗುವುದು. ಅದರಂತೆಯೇ ಆಯಾ ಋತುಗಳಲ್ಲಿ ನಡೆಯುವ ಕಾರ್ಯಕ್ರಮಗಳನ್ನು ಆಯಾ ಋತುಗಳ ಹೆಸರಿನೊಂದಿಗೆ ಕರೆಯಲಾಗುವುದು. ಅವಕಾಶ ವಂಚಿತ ಗ್ರಾಮೀಣ ಮಕ್ಕಳು ಹಾಗೂ ಯುವಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುವುದು ಕಲಾದರ್ಶನದ ಮುಖ್ಯ ಉದ್ದೇಶವಾಗಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಭಾರತೀಯ ವಿದ್ಯಾಭವನ, ರೇಸ್‌ ಕೋರ್ಸ್‌ ರಸ್ತೆ, ಬೆಂಗಳೂರು-1. ಫೋನ್‌: 080-22267421

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X