ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತೀಯ ಆಸ್ಟ್ರೋಫಿಸಿಕ್ಸ್‌ ಸಂಸ್ಥೆಗೆ ಸಿರಾಜ್‌ ಹಸನ್‌ ಸಾರಥ್ಯ

By Staff
|
Google Oneindia Kannada News

ಭಾರತೀಯ ಆಸ್ಟ್ರೋಫಿಸಿಕ್ಸ್‌ ಸಂಸ್ಥೆಗೆ ಸಿರಾಜ್‌ ಹಸನ್‌ ಸಾರಥ್ಯ
ಖ್ಯಾತ ವಿಜ್ಞಾನ ಪ್ರೊ.ಸಿರಾಜ್‌ ಹಸನ್‌ ಆಯ್ಕೆ, ಪ್ರತಿಭಾವಂತನಿಗೆ ದೊರೆತ ಮನ್ನಣೆ...

ಬೆಂಗಳೂರು : ಭಾರತೀಯ ಆಸ್ಟ್ರೋಫಿಸಿಕ್ಸ್‌ ಸಂಸ್ಥೆಯ ನೂತನ ಅಧ್ಯಕ್ಷರಾಗಿ, ಪ್ರೊ.ಸಿರಾಜ್‌ ಹಸನ್‌ ಮಂಗಳವಾರ ಅಧಿಕಾರ ವಹಿಸಿಕೊಂಡಿದ್ದಾರೆ.

ಈ ಸಂಸ್ಥೆಯ ಸೂರ್ಯ ಮತ್ತು ಸೌರವ್ಯೂಹ ವ್ಯವಸ್ಥೆ ಅಧ್ಯಯನಗಳ ಗುಂಪಿನ ಅಧ್ಯಕ್ಷರಾಗಿರುವ ಅವರು, ಭಾರತೀಯ ಖಗೋಳ ವಿಜ್ಞಾನ ಸಂಘದ ಉಪಾಧ್ಯಕ್ಷರೂ ಆಗಿದ್ದಾರೆ. ಆಸ್ಟ್ರೋಫಿಸಿಕ್ಸ್‌ನಲ್ಲಿ ಆಳವಾದ ಜ್ಞಾನ ಹೊಂದಿರುವ ಹಸನ್‌ ತಮ್ಮ ಸಂಶೋಧನೆಗಳ ಮೂಲಕ ಭಾರತ ಮತ್ತು ಜಗತ್ತಿನಾದ್ಯಂತ ಅಪಾರ ಮನ್ನಣೆ ಗಳಿಸಿದ್ದಾರೆ.

ಅಂತಾರಾಷ್ಟ್ರೀಯ ಖ್ಯಾತಿ ಹೊಂದಿರುವ ಹಾರ್ವರ್ಡ್‌ ವಿಶ್ವವಿದ್ಯಾಲಯ ಮತ್ತು ಆಕ್ಸ್‌ಫರ್ಡ್‌ ವಿದ್ಯಾಲಯಗಳಲ್ಲಿ ಅವರು ಸಂದರ್ಶಕ ಪ್ರಾಧ್ಯಾಪಕರಾಗಿ ಕೆಲಸಮಾಡಿದ್ದಾರೆ. ಅಲೀಗಢ ಮತ್ತು ದೆಹಲಿ ವಿಶ್ವವಿದ್ಯಾಲಯಗಳಲ್ಲಿ ಕ್ರಮವಾಗಿ ಪದವಿ ಹಾಗೂ ಸ್ನಾತಕೋತ್ತರ ಓದಿರುವ ಇವರು ವಿದ್ಯಾರ್ಥಿ ದೆಶೆಯಲ್ಲೇ ಪ್ರತಿಭಾವಂತರಾಗಿದ್ದರು.

ಆಸ್ಟ್ರೋಫಿಸಿಕ್ಸ್‌ ಸಿದ್ಧಾಂತಕ್ಕೆ, 1977ರಲ್ಲಿ ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್‌ ಪದವಿ ಪಡೆದಿದ್ದಾರೆ. ಅಲ್ಲದೆ, ಕಾಮನ್‌ವೆಲ್ತ್‌, ಅಲೆಕ್ಸಾಂಡರ್‌ ವೊನ್‌ ಹಮ್‌ಬೋಲ್ಟ್‌ ಮತ್ತು ಸ್ಮಿತ್‌ಸೋನಿಯನ್‌ ಫೆಲೋಶಿಪ್‌ ಗೌರವ ಸಹ ಪಡೆದಿದ್ದಾರೆ.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X