ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರ್‌ ಸ್ಯಾಂಡಲ್‌ ಸೋಪಿಗೆ ಧೋನಿಯ ರಾಯಭಾರ

By Staff
|
Google Oneindia Kannada News

ಮೈಸೂರ್‌ ಸ್ಯಾಂಡಲ್‌ ಸೋಪಿಗೆ ಧೋನಿಯ ರಾಯಭಾರ
ಮಾರುಕಟ್ಟೆ ವಿಸ್ತರಣೆಗೆ ಎಂಎಸ್‌ಐಎಲ್‌ ತಂತ್ರ, ಎರಡು ವರ್ಷದ ಒಪ್ಪಂದ

ಬೆಂಗಳೂರು : ಮೈಸೂರು ಸ್ಯಾಂಡಲ್‌ ಸಾಬೂನಿನ ಪ್ರಚಾರ ರಾಯಭಾರಿಯಾಗಿ, ಭಾರತದ ಕ್ರಿಕೆಟ್‌ಪಟು ಮಹೇಂದ್ರ ಸಿಂಗ್‌ ಧೋನಿ ಅವರು ಕಾರ್ಯನಿರ್ವಹಿಸಲಿದ್ದಾರೆ.

ಸರ್ಕಾರಿ ಸ್ವಾಮ್ಯದ ಕರ್ನಾಟಕ ಸೋಪ್ಸ್‌ ಅಂಡ್‌ ಡಿಟರ್ಜೆಂಟ್‌ ಲಿಮಿಟೆಡ್‌ನ, ಮೈಸೂರು ಸ್ಯಾಂಡಲ್‌ ಸಾಬೂನು ಮತ್ತಿತರ ಉತ್ಪನ್ನಗಳ ರೂಪದರ್ಶಿ ಮತ್ತು ಬ್ರಾಂಡ್‌ ರಾಯಭಾರಿಯಾಗಿ ಕಾರ್ಯ ನಿರ್ವಹಿಸುವ ಒಪ್ಪಂದಕ್ಕೆ ಧೋನಿ ಸಹಿ ಹಾಕಿದ್ದಾರೆ. ಇದು ಎರಡು ವರ್ಷಗಳ ಅವಧಿಗೆ ಮಾಡಿಕೊಂಡ ಒಪ್ಪಂದ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಎಂಎಸ್‌ಐಎಲ್‌ನ ವ್ಯವಸ್ಥಾಪಕ ನಿರ್ದೇಶಕ ಐ.ಆರ್‌.ಪೆರುಮಾಳ್‌, ಸದ್ಯಕ್ಕೆ ಮೈಸೂರ್‌ ಸ್ಯಾಂಡಲ್‌ ದಕ್ಷಿಣ ರಾಜ್ಯಗಳಿಗಷ್ಟೇ ಸೀಮಿತಗೊಂಡಿದೆ. ಮಾರುಕಟ್ಟೆ ವೃದ್ಧಿಗೆ, ಧೋನಿ ನೆರವಾಗುವ ವಿಶ್ವಾಸವಿದೆ ಎಂದರು.

ಗಂಧದ ಮರಗಳ ಸಂಖ್ಯೆ ಕ್ಷಿಣಿಸುತ್ತಿರುವ ಹಿನ್ನೆಲೆಯಲ್ಲಿ , ಶ್ರೀಗಂಧ ರಹಿತ ಜನಪ್ರಿಯ ಸಾಬೂನು ಉತ್ಪಾದಿಸುವ ಗುರಿಯನ್ನು ಸಂಸ್ಥೆ ಹೊಂದಿದೆ ಎಂದು ಪೆರುಮಾಳ್‌ ಹೇಳಿದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X