ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಎಂಶ್ರೀ ಸ್ಮಾರಕ ನಿರ್ಮಾಣಕ್ಕೆ ಮೀನಾಮೇಷ, ಹೈಕೋರ್ಟ್‌ ಆಕ್ರೋಶ

By Staff
|
Google Oneindia Kannada News

ಬಿಎಂಶ್ರೀ ಸ್ಮಾರಕ ನಿರ್ಮಾಣಕ್ಕೆ ಮೀನಾಮೇಷ, ಹೈಕೋರ್ಟ್‌ ಆಕ್ರೋಶ
ತಿಂಗಳೊಳಗೆ ಸಂಪಿಗೆ ಗ್ರಾಮದಲ್ಲಿ ಶ್ರೀಭವನ ಕಾಮಗಾರಿ ಆರಂಭಿಸಿಸಲು ಸೂಚನೆ

ಬೆಂಗಳೂರು : ಹಿರಿಯ ಕವಿ ಬಿ.ಎಂ.ಶ್ರೀಕಂಠಯ್ಯ ಅವರ ಸ್ಮಾರಕ ಕಾಮಗಾರಿಯನ್ನು, ಜನವರಿ ಅಂತ್ಯದೊಳಗೆ ಆರಂಭಿಸುವಂತೆ ಹೈಕೋರ್ಟ್‌ ಆದೇಶಿಸಿದೆ.

ಸ್ಮಾರಕ ನಿರ್ಮಾಣದಲ್ಲಿ ಸರ್ಕಾರದ ನಿರಾಸಕ್ತಿಯನ್ನು ನ್ಯಾಯಾಲಯ ಪ್ರಶ್ನಿಸಿದ್ದು, ಮುಂದಿನ ಎರಡು ವರ್ಷಗಳಲ್ಲಿ ಸ್ಮಾರಕವನ್ನು ಪೂರ್ಣಗೊಳಿಸುವಂತೆ ಸೂಚಿಸಿದೆ.

ಹಿನ್ನೆಲೆ : ತುಮಕೂರು ಜಿಲ್ಲೆಯ ಸಂಪಿಗೆ(ಬಿಎಂಶ್ರೀ ಜನ್ಮಸ್ಥಳ) ಗ್ರಾಮದಲ್ಲಿ , ಬಿಎಂಶ್ರೀ ಅವರ ಸ್ಮರಣಾರ್ಥ, ಶ್ರೀಭವನ ನಿರ್ಮಾಣ ಮಾಡಲು ಸರ್ಕಾರ ನಿರ್ಧರಿಸಿತ್ತು. ಈ ಹಿನ್ನೆಲೆಯಲ್ಲಿ ಬಿಎಂಶ್ರೀ ಅವರಿಗೆ ಸೇರಿದ ಮನೆಯನ್ನು ಸರ್ಕಾರ ಪಡೆದು, ಅನೇಕ ವರ್ಷಗಳಾಗಿವೆ. ಆದರೆ ಭವನ ನಿರ್ಮಾಣದ ಯೋಜನೆ ಅನುಷ್ಠಾನಕ್ಕೆ ಬಂದಿಲ್ಲ ಎನ್ನುವ ದೂರುಗಳಿವೆ.

ಈ ಮಧ್ಯೆ ಬಿಎಂಶ್ರೀ ಅವರ ಸಂಬಂಧಿ ಕೆ.ಎಲ್‌.ಸತ್ಯನಾರಾಯಣ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಾಲಯ, ಈ ಆದೇಶ ನೀಡಿದೆ.

ಹಣದ ಕೊರತೆಯಿಂದ ಶ್ರೀಭವನ ಕಾಮಗಾರಿ, ಈವರೆಗೆ ನೆನೆಗುದಿಗೆ ಬಿದ್ದಿತ್ತು ಎಂದು ಸರ್ಕಾರ ತಿಳಿಸಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X