ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2005ನೇ ಇಸವಿಯಲ್ಲಿ ನಡೆದ ಗಮನಾರ್ಹ ಘಟನೆಗಳು

By Staff
|
Google Oneindia Kannada News

2005ನೇ ಇಸವಿಯಲ್ಲಿ ನಡೆದ ಗಮನಾರ್ಹ ಘಟನೆಗಳು
ಕಾಲಚಕ್ರ ಉರುಳುತ್ತಲೇ ಇರುತ್ತದೆ. ಆದರೆ ಮನುಷ್ಯರಾದ ನಾವು ದಿನಗಳನ್ನು-ವರ್ಷಗಳನ್ನು ಹೆಸರಿಸುತ್ತಾ ಗುಣಿಸುತ್ತಾ ಅನನ್ಯ ಅನುಭವಕ್ಕೊಳಗಾಗುತ್ತೇವೆ. ಕಾಲ ಸಿಹಿ-ಕಹಿಗಳನ್ನು ಒಟ್ಟಿಗೇ ನೀಡುತ್ತದೆ. ಬನ್ನಿ... ಹೊಸವರ್ಷದ ಸಂದರ್ಭದಲ್ಲಿ ಕಳೆದ ವರ್ಷದ ಸಿಹಿಕಹಿ ಘಟನೆಗಳತ್ತ ಒಂದು ಹಿನ್ನೋಟ ಬೀರೋಣ...

ಹೆಮ್ಮೆಯ ಸಂದರ್ಭ:
  • ಕರ್ನಾಟಕ ವಿಧಾನಮಂಡಲವನ್ನು ಉದ್ದೇಶಿಸಿ ರಾಷ್ಟ್ರಪತಿ ಅಬ್ದುಲ್‌ ಕಲಾಂ ಭಾಷಣ
  • ಕರ್ನಾಟಕ ಸುವರ್ಣ ರಾಜ್ಯೋತ್ಸವ
  • ಚಿತ್ರನಟಿ ತಾರಾ ಅವರಿಗೆ ‘ಹಸೀನಾ’ ಚಿತ್ರದಲ್ಲಿನ ಅಭಿನಯಕ್ಕಾಗಿ ಶ್ರೇಷ್ಠ ನಟಿ ಪ್ರಶಸ್ತಿ

    ಗಮನಾರ್ಹ ಘಟನೆಗಳು:

  • ಮೂರು ದಶಕಗಳಿಂದ ಗಣಿಕಾರಿಕೆ ನಡೆಸಿದ ಕುದುರೆಮುಖ ಕಬ್ಬಿಣ ಅದಿರು ಕಂಪನಿ31.12.2005 ರಿಂದ ಸ್ತಬ್ಧ
  • ಹೈಕೋರ್ಟ್‌ ಸಂಚಾರಿ ಪೀಠಕ್ಕೆ ಸಾಂಕೇತಿಕ ಚಾಲನೆ
  • 11 ವರ್ಷಗಳ ಬಳಿಕ ಮೈದುಂಬಿದ ಲಿಂಗನಮಕ್ಕಿ ಜಲಾಶಯ
  • ಬೆಂಗಳೂರು-ಮೈಸೂರು ಕಾರಿಡಾರ್‌ ಯೋಜನೆಗೆ ಸುಪ್ರೀಂ ಕೋರ್ಟ್‌ ಹಸಿರು ನಿಶಾನೆ

    ಗಣ್ಯರ ಕಣ್ಮರೆ:

  • ಶಿಕ್ಷಣ ತಜ್ಞ ಡಾ. ಎಚ್‌.ನರಸಿಂಹಯ್ಯ
  • ರಂಗಭೂಮಿಯ ಸವ್ಯಸಾಚಿ ಕೆ.ವಿ.ಸುಬ್ಬಣ್ಣ
  • ಬರಹಗಾರ ಎನ್ಕೆ ಕುಲಕರ್ಣಿ
  • ಸಾಹಿತಿ ಶಾಂತಾದೇವಿ ಮಾಳವಾಡ
  • ರಾಮಕೃಷ್ಣ ಮಠದ ಸ್ವಾಮಿ ಪುರುಷೋತ್ತ ಮಾನಂದ
  • ದಕ್ಷ ಆಡಳಿತಗಾರ ಡಾ.ಡಿ.ಎಂ.ನಂಜುಂಡಪ್ಪ
  • ಎವರೆಸ್ಟ್‌ ಏರಿದ ಮೊದಲ ಕನ್ನಡಿಗ ಚೈತನ್ಯ
  • ಮತ್ತೆ ಮರುಕಳಿಸದಿರಲಿ

    ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್‌ನಲ್ಲಿ ವಿಜ್ಞಾನಿಯ ಹತ್ಯೆ:

  • ಬೆಂಗಳೂರಿನ ಐಐಎಸ್‌ಸಿ ಮೇಲೆ ಉಗ್ರಗಾಮಿಗಳ ಗುಂಡಿನ ದಾಳಿ. ವಿಚಾರ ಸಂಕಿರಣದಲ್ಲಿ ಪಾಲ್ಗೊಳ್ಳಲು ಬಂದಿದ್ದ ದೆಹಲಿ ಐಐಟಿಯ ನಿವೃತ್ತ ಪ್ರಾಧ್ಯಾಪಕ-ವಿಜ್ಞಾನಿ ಎಂ.ಸಿ.ಪುರಿ ಬಲಿ. ಇತರ ನಾಲ್ವರಿಗೆ ತೀವ್ರ ಗಾಯ. ಸುರಕ್ಷಿತ ತಾಣವೆಂಬ ಬೆಂಗಳೂರಿನ ಪ್ರತಿಷ್ಠೆ ಮುಕ್ಕು.

  • ತೈಲ ಮಾಫಿಯಾ ಅಕ್ರಮ ಬಯಲಿಗೆಳೆದು ಪ್ರಾಣತೆತ್ತ ಪ್ರಾಮಾಣಿಕ ಅಧಿಕಾರಿ:
    ಉತ್ತರ ಪ್ರದೇಶದಲ್ಲಿ ಐಐಎಂ ಪದವೀಧರ ಕರ್ನಾಟಕದ ಕೆಜಿಎಫ್‌ ಮೂಲದ ಮಂಜುನಾಥ್‌ ಷಣ್ಮುಗಂ ಹತ್ಯೆ. ಲರ್ಖೀಪುರಿ - ಖೇರಿ ಜಿಲ್ಲೆಯಲ್ಲಿನ ಪೆಟ್ರೋಲ್‌ ಬಂಕ್‌ ಒಂದರಲ್ಲಿ ನಡೆಯುತ್ತಿದ್ದ ಕಲಬೆರಕೆ ದಂಧೆ ಪತ್ತೆ ಮಾಡಿದ್ದೇ ಕೊಲೆಗೆ ಕಾರಣ.

  • ನಿಲ್ಲದ ನಕ್ಸಲ್‌ ಹಿಂಸಾಚಾರ:
    ನಕ್ಸಲ್‌ ನಾಯಕ ಸಾಕೇತ ರಾಜನ್‌ ಹತ್ಯೆಗೆ ಮಾವೋವಾದಿಗಳ ಪ್ರತೀಕಾರ. ಕರ್ನಾಟಕ- ಆಂಧ್ರಪ್ರದೇಶ ಗಡಿಯಲ್ಲಿನ ವೆಂಕಟಮ್ಮನಹಳ್ಳಿಯಲ್ಲಿ ನಕ್ಸಲರ ಗುಂಡಿನ ದಾಳಿ. ಆರು ಮಂದಿ ಕೆಎಸ್‌ಆರ್‌ಪಿ ಪೊಲೀಸರು ಹಾಗೂ ಒಬ್ಬ ನಾಗರಿಕನ ಹತ್ಯೆ.

  • ಆಹಾರಕ್ಕಾಗಿ ತೈಲ ಹಗರಣದಲ್ಲಿ ಕೇಂದ್ರ ಸಚಿವ ನಟವರ್‌ ಸಿಂಗ್‌:
    ಇರಾಕ್‌ನ ಆಹಾರಕ್ಕಾಗಿ ತೈಲ ಹಗರಣ ಕುರಿತು ವೋಲ್ಕರ್‌ ಸಮಿತಿ ವರದಿ. ಫಲಾನುಭವಿಗಳ ಪಟ್ಟಿಯಲ್ಲಿ ಭಾರತದ ಕಾಂಗ್ರೆಸ್‌ ಪಕ್ಷ ಹಾಗೂ ವಿದೇಶಾಂಗ ಸಚಿವ ನಟವರ್‌ ಸಿಂಗ್‌. ಸಂಸತ್ತಿನಲ್ಲಿ ಪ್ರತಿಪಕ್ಷಗಳ ತೀವ್ರ ಪ್ರತಿಭಟನೆ. ನಡೆಯದ ಕಲಾಪ. ರಾಜೀನಾಮೆಗೆ ಸಚಿವರ ನಕಾರ. ರಾಜೀನಾಮೆ ನೀಡಿದರೆ ಸ್ವೀಕರಿಸುವುದಾಗಿ ಪ್ರಧಾನಿ ನೀಡಿದ ಮರ್ಮಾಘಾತ. ಕೊನೆಗೆ ಮಣಿದ ನಟವರ್‌.

  • ಆಪರೇಷನ್‌ ದುರ್ಯೋಧನ - ಸಂಸದರ ವಜಾ:
    ಕೋಬ್ರಾಪೋಸ್ಟ್‌- ಆಜ್‌ ತಕ್‌ ಜಂಟಿಯಾಗಿ ಕೈಗೊಂಡ ಕಾರ್ಯಾಚರಣೆ. ಸಂಸತ್ತಿನಲ್ಲಿ ಪ್ರಶ್ನೆ ಕೇಳಲು ಲೋಕಸಭೆಯು 10ಹಾಗೂ ರಾಜ್ಯಸಭೆಯ ಒಬ್ಬ ಸಂಸದ ಲಂಚ ಪಡೆದ ವಿಡಿಯೋ ಚಿತ್ರಣ ಪ್ರಸಾರ. ದೇಶಾದ್ಯಂತ ಸಂಚಲನ. ತನಿಖೆಗೆ ಆದೇಶ. ವರದಿ ಬಂದ ನಂತರ ಸಂಸತ್ತಿನಿಂದ ಬಿಜೆಪಿಯ ಏಳು, ಬಿಎಸ್ಪಿಯ ಇಬ್ಬರು, ಆರ್‌ಜೆಡಿ ಹಾಗೂ ಕಾಂಗ್ರೆಸ್‌ನ ತಲಾ ಒಬ್ಬರು ಸದಸ್ಯರ ವಜಾ.

  • ‘ಆಪರೇಷನ್‌ ಚಕ್ರವ್ಯೂಹ’ಕ್ಕೆ ಸಿಲುಕಿದ ಜನನಾಯಕರು:
    ಮತ್ತೊಂದು ನಾಚಿಕೆಗೇಡಿನ ಪ್ರಸಂಗ. ಸಂಸದರ ಪ್ರದೇಶಾಭಿವೃದ್ಧಿ ವತಿಯಿಂದ ಯೋಜನೆಗಳನ್ನು ಮಂಜೂರು ಮಾಡಲು ಕಮಿಷನ್‌ ಕೇಳಿದ ಆರು ಸಂಸದರು. ಸ್ಟಾರ್‌ ನ್ಯೂಸ್‌-ಡಿಟಿಕ್ಟಿವ್‌ ಇಂಟೆಲಿಜೆನ್ಸ್‌ ಗಿಲ್ಡ್‌ ಜಂಟಿಯಾಗಿ ನಡೆಸಿದ ಕಾರ್ಯಾಚರಣೆ. ಬಿಜೆಪಿಯ 3, ಕಾಂಗ್ರೆಸ್‌ ಮತ್ತು ಸಮಾಜವಾದೀ ಪಕ್ಷದ ತಲಾ ಒಬ್ಬ ಸದಸ್ಯ ಹಾಗೂ ಸಮಾಜವಾದೀ ಪಕ್ಷ ಬೆಂಬಲಿತ ಸಂಸದರ ಕುಕೃತ್ಯ ಬಯಲು.

  • ವೀಸಾಗಾಗಿ ಸುಳ್ಳು ಮಾಹಿತಿ:
    ಉತ್ತರ ಪ್ರದೇಶದ ಬಿಎಸ್ಪಿ ಸಂಸದರಾದ ರಮಾಕಾಂತ ಯಾದವ್‌ ಹಾಗೂ ಬಾಲಚಂದ್ರ ಯಾದವ್‌ ಅವರ ‘ಸಾಹಸಗಾಥೆ’ ಇದು. ಪಾಸ್‌ ಪೋರ್ಟ್‌ ಕಳೆದಿದೆ ಎಂಬುದಾಗಿ ಪೊಲೀಸ್‌ ಠಾಣೆಯಲ್ಲಿ ಸುಳ್ಳು ದೂರು ದಾಖಲು ಮಾಡಿ ಹೊಸ ಪಾಸ್‌ಪೋರ್ಟ್‌ ಪಡೆದ ಭೂಪರಿವರು. ಆನಂತರ, ರಾಜತಾಂತ್ರಿಕ ವೀಸಾ ನೀಡುವಂತೆ ಕೆನಡಾ ರಾಯಭಾರ ಕಚೇರಿಗೆ ಅರ್ಜಿ ಸಲ್ಲಿಕೆ. ಅರ್ಜಿಯ ಪರಿಶೀಲನೆ ನಡೆಸಿದಾಗ ಸಂಸದರ ‘ಸಾಚಾತನ’ ಬಯಲು.

    ಮರೆಯಬಯಸುವ ಘಟನೆ:

  • ವಿಜಾಪುರ ನಿಡಗುಂದಿ ಬಳಿಯ ಆಲಮಟ್ಟಿ ನಾಲೆಗೆ ಬಸ್‌ ಉರುಳಿ 58ಮಂದಿಯ ಸಾವು
  • ನೆಲಮಂಗಲದಲ್ಲಿ ಕಳ್ಳಬಟ್ಟಿ ಸೇವಿಸಿ 21 ಸಾವು
  • ಕಾಲ್‌ಸೆಂಟರ್‌ ಉದ್ಯೋಗಿ ಪ್ರತಿಭಾ ಮೇಲಿನ ಅತ್ಯಾಚಾರ, ಕೊಲೆ
  • ವಂಚಕ ವಿನಿವಿಂಕ್‌ ಶ್ರೀನಿವಾಸಶಾಸ್ತ್ರಿ ಬಂಧನ

    ಮುಜುಗರ ಪ್ರಕರಣ:

  • ಬಿಐಎಎಲ್‌ ಅಧ್ಯಕ್ಷ ಸ್ಥಾನಕ್ಕೆ ಎನ್‌.ಆರ್‌. ನಾರಾಯಣಮೂರ್ತಿ ರಾಜೀನಾಮೆ
  • ಲೋಕಾಯುಕ್ತ ಎನ್‌. ವೆಂಕಟಾಚಲ ಹಾಗೂ ಉಪಲೋಕಾಯುಕ್ತ ಪತ್ರಿ ಬಸವನಗೌಡರ
  • ನಡುವೆ ವಾಕ್‌ ಸಮರ

    ಪ್ರಕೃತಿ ಪ್ರಕೋಪ

  • ವಿಜಾಪುರ, ಬಾಗಲಕೋಟೆ, ಬೆಳಗಾವಿ, ಗದಗ ಜಿಲ್ಲೆಗಳಲ್ಲಿ ನೆರೆಹಾವಳಿ, ಮನೆ-ನಷ್ಟದ ಅಂದಾಜು
  • ಬೆಂಗಳೂರಿನಲ್ಲಿ ಭಾರಿ ಮಳೆ

    ಪ್ರಗತಿಗೆ ಮಾರಕ :

  • ಭಾರತದಲ್ಲಿ ನಿಲ್ಲದ ಜನಸಂಖ್ಯಾ ಸ್ಫೋಟ. 2050ರ ವೇಳೆಗೆ ಭಾರತದ ಜನಸಂಖ್ಯೆ
  • ಚೀನಾವನ್ನೂ ಮೀರಿಸಲಿದೆ ಎಂಬುದಾಗಿ ವಿಶ್ವಸಂಸ್ಥೆಯ ವರದಿ.

    ಕ್ರೀಡೆಯ ಹೆಗ್ಗಳಿಕೆ :

  • ಭಾರತ ಕ್ರಿಕೆಟ್‌ ತಂಡದ ನಾಯಕ ಪಟ್ಟವೇರಿದ ರಾಹುಲ್‌ ದ್ರಾವಿಡ್‌
  • 100ನೇ ಟೆಸ್ಟ್‌ ಕ್ರಿಕೆಟ್‌ ಪಂದ್ಯವಾಡಿ ದಾಖಲೆ ನಿರ್ಮಿಸಿದ ಅನಿಲ್‌ಕುಂಬ್ಳೆ

    (ಸ್ನೇಹಸೇತು: ವಿಜಯ ಕರ್ನಾಟಕ)

    ಮುಖಪುಟ / ವಾರ್ತೆಗಳು

    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X