ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಟಿ ಕಂಪನಿಗಳಲ್ಲಿ ತಲ್ಲಣ, ಉಗ್ರರ ಮದ್ದು ಗುಂಡು ವಶ

By Staff
|
Google Oneindia Kannada News

ಐಟಿ ಕಂಪನಿಗಳಲ್ಲಿ ತಲ್ಲಣ, ಉಗ್ರರ ಮದ್ದು ಗುಂಡು ವಶ
ಉಗ್ರರು ಈ ಕುಕೃತ್ಯಕ್ಕೆ ವಾಹನ ಬಳಸಿಲ್ಲ -ನಾರಾಯಣ ಗೌಡ

ಬೆಂಗಳೂರು : ಉಗ್ರರ ಬೆದರಿಕೆ ಹಿನ್ನೆಲೆಯಲ್ಲಿ ಭಾರತೀಯ ಬಾಹ್ಯಕಾಶ ಸಂಶೋಧನಾ ಸಂಸ್ಥೆ(ಇಸ್ರೋ)ಯ ಆವರಣಕ್ಕೆ ಬಿಗಿ ಭದ್ರತೆ ಒದಗಿಸಲಾಗಿದೆ ಎಂದು ಇಸ್ರೋ ಅಧ್ಯಕ್ಷ ಜಿ.ಮಾಧವನ್‌ ನಾಯರ್‌ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಗುರುವಾರ ಮಾತನಾಡುತ್ತಿದ್ದ ಅವರು, ಮಾಹಿತಿ ತಂತ್ರಜ್ಞಾನದ ಪ್ರಮುಖ ನಗರವಾದ ಬೆಂಗಳೂರು ಮೇಲೆ ಉಗ್ರರ ಕಣ್ಣು ಬಿದ್ದಿದೆ. ಈ ದಾಳಿಗಳ ಮೂಲಕ ವಿಶ್ವದ ಗಮನ ಸೆಳೆಯಲು ಉಗ್ರರು ಪ್ರಯತ್ನಸಿದ್ದಾರೆ ಎಂದರು.

ಬುಧವಾರ ನಡೆದ ಉಗ್ರರ ದಾಳಿ ಬಗ್ಗೆ ಪ್ರತಿಕ್ರಿಯಿಸಿದ ನಾಯರ್‌, ಪ್ರಸ್ತುತ ಜಗತ್ತಿನಲ್ಲಿನ ಯಾವ ವ್ಯಕ್ತಿಯೂ ಸುರಕ್ಷಿತವಾಗಿಲ್ಲ ಎಂದಿದ್ದಾರೆ.

ಐಟಿ-ಬಿಟಿ ರಂಗದಲ್ಲಿ ತಲ್ಲಣ : ಸುರಕ್ಷತೆಯ ದೃಷ್ಟಿಯಿಂದ ಬೆಂಗಳೂರನ್ನು ಕಾರ್ಯಕ್ಷೇತ್ರವಾಗಿಸಿಕೊಂಡಿದ್ದ ಐಟಿ-ಬಿಟಿ ಕಂಪನಿಗಳು ಈಗ ತಲ್ಲಣಗೊಂಡಿವೆ. ಅಮಾಯಕರನ್ನು ಬಲಿಪಶು ಮಾಡುವ ಉಗ್ರರ ಯತ್ನವನ್ನು ಅವು ಖಂಡಿಸಿವೆ.

ಮದ್ದು-ಗುಂಡು ವಶ : ವಿಜ್ಞಾನಿ ಎಂ.ಸಿ.ಪುರಿ ಹತ್ಯೆಯ ಬಗ್ಗೆ ಪೊಲೀಸರು ವ್ಯಾಪಕ ತನಿಖೆ ಆರಂಭಿಸಿದ್ದು, ಈ ಸಂಬಂಧ ಗುರುವಾರ ಬೆಳಗ್ಗೆ, ಎರಡು ಗ್ರೆನೇಡುಗಳನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೇ ಎ.ಕೆ.47 ರೈಫಲ್‌, 11 ಸ್ಪೋಟಕ ವಸ್ತುಗಳು ಮತ್ತು ಆರು ಮ್ಯಾಗಜಿನ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಅಪರಾಧ ವಿಭಾಗದ ಜಂಟಿ ಪೊಲೀಸ್‌ ಆಯುಕ್ತ ನಾರಾಯಣ ಗೌಡ ಈ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ. ಉಗ್ರರು ಭಾರತೀಯ ವಿಜ್ಞಾನ ಸಂಸ್ಥೆಗೆ ವಾಹನದಲ್ಲಿ ಬಂದಿದ್ದರು ಎಂಬ ಅಂಶವನ್ನು ಅವರು ತಳ್ಳಿ ಹಾಕಿದ್ದಾರೆ. ಉಗ್ರರು ಕುಕೃತ್ಯದ ನಂತರ ಗೋಡೆ ಹಾರಿ ತಪ್ಪಿಸಿಕೊಂಡಿದ್ದಾರೆ ಎಂದು ನಾರಾಯಣಗೌಡ ಅಭಿಪ್ರಾಯಪಟ್ಟಿದ್ದಾರೆ.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X