ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಮೈಲ್‌ ಪ್ಲೀಸ್‌! ರೂ. 799ಕ್ಕೆ ಬದುಕಿಡೀ ಸ್ಪೈಸ್‌ ಮೊಬೈಲ್‌?

By Staff
|
Google Oneindia Kannada News

ಸ್ಮೈಲ್‌ ಪ್ಲೀಸ್‌! ರೂ. 799ಕ್ಕೆ ಬದುಕಿಡೀ ಸ್ಪೈಸ್‌ ಮೊಬೈಲ್‌?
ಏರ್‌ಟೆಲ್‌ ಬಾಣಕ್ಕೆ ಸ್ಪೈಸ್‌ ಮತ್ತು ಹಚ್‌ನಿಂದ ಪ್ರತಿಬಾಣ, ಬಿಎಸ್‌ಎನ್‌ಎಲ್‌ ಕತೆ?

ಬೆಂಗಳೂರು : ಕೇವಲ ರೂ.999ಕ್ಕೆ ಜೀವಿತಾವಧಿ ಮೊಬೈಲ್‌ ಹೊಂದುವ ಏರ್‌ಟೆಲ್‌ ಯೋಜನೆಗೆ, ಸ್ಪರ್ಧೆಯಾಡ್ಡುವಂತೆ ಸ್ಪೈಸ್‌ ಹೊಸ ಯೋಜನೆ ಪ್ರಕಟಿಸಿದೆ.

ಸ್ಪೈಸ್‌ ಟೆಲಿಕಾಮ್‌ ಹೊಸ ವರ್ಷದ ಕೊಡುಗೆ ರೂಪದಲ್ಲಿ , ಗ್ರಾಹಕರನ್ನು ಸೆಳೆಯಲು ಏರ್‌ಟೆಲ್‌ಗಿಂತಲೂ ಒಂದೆಜ್ಜೆ ಮುಂದೆ ಸಾಗಿದೆ. ಈ ಯೋಜನೆಯಡಿ, ಕೇವಲ ರೂ.799ಕ್ಕೆ ಪ್ರಿಪೇಯ್ಡ್‌ೆು ಕೂಪನ್‌ ಖರೀದಿಸಿ, ಜೀವನಪರ್ಯಂತ ಒಳಬರುವ ಕರೆಗಳನ್ನು ಉಚಿತವಾಗಿ ಸ್ವೀಕರಿಸಬಹುದು.

ನಂತರದ ದಿನಗಳಲ್ಲಿ ಯಾವುದೇ ಮೌಲ್ಯದ ರೀಚಾರ್ಜ್‌ ಕೂಪನ್‌ ಖರೀದಿಸಿದರೂ, ಗ್ರಾಹಕರು ಪೂರ್ಣ ಟಾಕ್‌ಟೈಮ್‌ ಪಡೆಯಬಹುದು.

ಹೆಚ್ಚಿನ ಮಾಹಿತಿಗಾಗಿ ಗ್ರಾಹಕರು 98440 98440 ಅಥವಾ 22098440ನ್ನು ಸಂಪರ್ಕಿಸಬಹುದು.

ಏರ್‌ಟೆಲ್‌ ಹಾದಿಯಲ್ಲಿ ಹಚ್‌ : ಜೀವನಪೂರ್ತಿ ಉಚಿತ ಕರೆ ಸ್ವೀಕರಿಸಬಹುದಾದ ರೂ.999ರ ಯೋಜನೆಯನ್ನು ಹಚ್‌ ಮೊಬೈಲ್‌ಕಂಪನಿಯೂ ಜಾರಿಗೆ ತಂದಿದೆ.

ಕೊಸರು : ಮೊಬೈಲ್‌ ಕಂಪನಿಗಳ ದರ ಸಮರದಿಂದ, ಎಲ್ಲರ ಜೇಬಲ್ಲಿ ಮೊಬೈಲ್‌ ಸದ್ದು ಕೇಳಿ ಬರಲಿದೆ! ‘ಐಲು ಐಲು ಐಲು ಕೈಲಿದ್ರೆ ಮೊಬೈಲ್‌...?’ ಅನ್ನೋ ಹಾಡು ಕೆಲವರಿಗೆ ನೆನಪಾಗಬಹುದು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X