ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವರ್ಷಕ್ಕೆ100ದಿನ ಉದ್ಯೋಗ ಖಾತ್ರಿ : ಶೀಘ್ರದಲ್ಲೇ ಜಾರಿ

By Staff
|
Google Oneindia Kannada News

ವರ್ಷಕ್ಕೆ100ದಿನ ಉದ್ಯೋಗ ಖಾತ್ರಿ : ಶೀಘ್ರದಲ್ಲೇ ಜಾರಿ
ಮೊದಲು ಹಂತದಲ್ಲಿ ಐದು ಜಿಲ್ಲೆಗಳಲ್ಲಿ ಜಾರಿ, ನಿರುದ್ಯೋಗಿಗಳಿಗೆ ಭರವಸೆ

ಬೆಂಗಳೂರು : ನಿರುದ್ಯೋಗಿಗಳಿಗೆ ಇನ್ನು ಮುಂದೆ ವರ್ಷಕ್ಕೆ 100ದಿನಗಳ ಉದ್ಯೋಗ ಖಾತ್ರಿಯಾಗಿ ದೊರೆಯಲಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಸಚಿವ ಬಸವರಾಜ ಹೊರಟ್ಟಿ ಹೇಳಿದ್ದಾರೆ.

ಶನಿವಾರ ಅವರು ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ಉದ್ಯೋಗ ಭರವಸೆ ಯೋಜನೆಯನ್ನು ಜನವರಿ 16ರಿಂದ ಜಾರಿಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಯಾವುದೇ ನಿರುದ್ಯೋಗಿಗಳು ಕೆಲಸಕ್ಕಾಗಿ ಜಿಲ್ಲಾಡಳಿತವನ್ನು ಸಂಪರ್ಕಿಸಿದರೆ, ಅವರಿಗೆ ವರ್ಷದಲ್ಲಿ 100ದಿನಗಳ ಕೆಲಸ ಖಾತ್ರಿಯಾಗಿ ದೊರೆಯಲಿದೆ.

ಮೊದಲ ಹಂತದಲ್ಲಿ ಚಿತ್ರದುರ್ಗ, ದಾವಣಗೆರೆ, ಬೀದರ್‌, ಗುಲ್ಬರ್ಗಾ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಯೋಜನೆ ಜಾರಿಯಾಗಲಿದೆ ಎಂದು ವಿವರಿಸಿದರು.

ರಾಜ್ಯದ ಕನಿಷ್ಠ ವೇತನ 62.50ರೂಪಾಯಿಯಾಗಿದ್ದು, ಪ್ರತಿಯಾಬ್ಬರಿಗೂ ಇದೇ ಮೊತ್ತವನ್ನು ನೀಡಲಾಗುವುದು. ಆದರೆ ಇದರಲ್ಲಿ ಶೇ.60ರಷ್ಟು ಮೊತ್ತವನ್ನು ನಗದು ರೂಪದಲ್ಲಿ ನೀಡಲಾಗುವುದು. ಉಳಿದ ಶೇ. 40ರಷ್ಟು ಭಾಗವನ್ನು ವಸ್ತುಗಳ ರೂಪದಲ್ಲಿ ನೀಡಲಾಗುವುದು ಎಂದು ತಿಳಿಸಿದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X