• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೃಗಾಯಲದ ಪ್ರಾಣಿಗಳಿಗೆ ನಂಜುಣಿಸಿದ ನಿಷ್ಕರುಣಿಗಳು

By Staff
|

ಮೃಗಾಯಲದ ಪ್ರಾಣಿಗಳಿಗೆ ನಂಜುಣಿಸಿದ ನಿಷ್ಕರುಣಿಗಳು

ಚಾಮರಾಜೇಂದ್ರ ಮೃಗಾಯಲದಲ್ಲಿನ ಪ್ರಾಣಿ ಹಂತಕರು ಪೊಲೀಸರ ಬಲೆಗೆ

ಮೈಸೂರು : ನಗರದ ಚಾಮರಾಜೇಂದ್ರ ಮೃಗಾಲಯದಲ್ಲಿ ಪ್ರಾಣಿಗಳಿಗೆ ವಿಷ ಉಣಿಸಿದ, ನಾಲ್ಕು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಸಿಂಹ, ಬಿಳಿಹುಲಿ ಸ್ಮಿತಾ, ಆನೆಗಳಾದ ಗಣೇಶ, ರೂಪ, ಕೋಮಲ ಮತ್ತು ಸಿಂಗಳೀಕ ಸೇರಿದಂತೆ ಪ್ರಾಣಿಗಳ ಸರಣಿ ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ವಂಚಕರ ಜಾಲವನ್ನು ಪತ್ತೆಹಚ್ಚಿದ್ದಾರೆ. ಈ ಪ್ರಕರಣದಲ್ಲಿ ಮೃಗಾಲಯದ ಹತ್ತು ಮಂದಿ ನೌಕರರು ಭಾಗಿಗಳೆಂಬ ಅಂಶ ಪತ್ತೆಯಾಗಿದೆ.

ಮೃಗಾಲಯದ ಮಾಜಿ ನೌಕರ ಪುಂಡಲೀಕ(ಪ್ರಾಣಿಗಳ ಆರೈಕೆಗೆ ಸಂಬಂಧಿಸಿದಂತೆ ರಾಷ್ಟ್ರಪ್ರಶಸ್ತಿ ಈತನಿಗೆ ಸಂದಿದೆ!) ಮತ್ತು ಮೇಸ್ತ್ರಿ ನಂಜುಂಡಪ್ಪ, ಈ ಪ್ರಾಣಿ ಹಂತಕರಲ್ಲಿ ಪ್ರಮುಖರು.

ಊಟದ ಜೊತೆ ಪ್ರಾಣಿಗಳಿಗೆ ನೀಡುತ್ತಿದ್ದ ವಿಟಮಿನ್‌ ಕ್ಯಾಪ್ಸೊಲ್‌ಗಳಲ್ಲಿ ಇಲಿಪಾಷಾಣ ತುಂಬಿ, ಪ್ರಾಣಿಗಳನ್ನು ಈ ಪ್ರಾಣಿ ಹಂತಕರು ಕೊಲ್ಲುತ್ತಿದ್ದರು. ಆನೆಗಳಿಗೆ ರಾಗಿಮುದ್ದೆಯಲ್ಲಿ, ಬಿಳಿಹುಲಿ ಸ್ಮಿತಾಳಿಗೆ ಮಾಂಸದಲ್ಲಿ ವಿಷವಿಟ್ಟು ಕೊಂದಿರುವ ಅಂಶ ಬೆಳಕಿಗೆ ಬಂದಿದೆ.

ಕಾರಣ ಸುಸ್ಪಷ್ಟ : ಪ್ರಾಣಿಗಳ ಆಹಾರ ಪದಾರ್ಥಗಳ ಖರೀದಿಯಲ್ಲಿ , ಈ ಪ್ರಾಣಿಹಂತಕರು ಹಣ ದೋಚುತ್ತಿದ್ದರು. ಈ ಕೃತ್ಯಕ್ಕೆ ಕಡಿವಾಣ ಹಾಕಿದ ಅಧಿಕಾರಿಗಳಿಗೆ ಕೆಟ್ಟ ಹೆಸರು ತರಲು, ಪ್ರಾಣಿಗಳ ಪ್ರಾಣ ತೆಗೆಯುತ್ತಿದ್ದ ವಿಚಾರ ತನಿಖೆಯಿಂದ ಬಯಲಾಗಿದೆ.

ಈ ಪ್ರಕರಣದ ಎಲ್ಲಾ ಆರೋಪಿಗಳನ್ನು ಬಂಧಿಸಲಾಗಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more