ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈಲಿಗೆ ನುಗ್ಗಿ ಲೂಟಿ, ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ!

By Staff
|
Google Oneindia Kannada News

ರೈಲಿಗೆ ನುಗ್ಗಿ ಲೂಟಿ, ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ!
ಪುಷ್ಪಕ್‌ ಎಕ್ಸ್‌ಪ್ರೆಸ್‌ನಲ್ಲಿ ದರೋಡೆ, ರೈಲಿನಿಂದ ಹೊರಗೆ ಎಸೆಯಲ್ಪಟ್ಟವರ ಸ್ಥಿತಿ ಚಿಂತಾಜನಕ...

ಭೋಪಾಲ್‌ : ಶಸ್ತ್ರಾಸ್ತ್ರಧಾರಿ ಪುರುಷರ ಗುಂಪೊಂದು ರೈಲಲ್ಲಿ ಪ್ರಯಾಣಿಕರ ಮೇಲೆ ಆಕ್ರಮಣ ನಡೆಸಿ, ಮಹಿಳೆಯಾಬ್ಬಳನ್ನು ಅತ್ಯಾಚಾರಗೈದ ಘಟನೆ ಗುರುವಾರ ವರದಿಯಾಗಿದೆ.

ಮುಂಬಯಿ ಹಾಗೂ ಲಖನೌ ನಡುವೆ ಸಂಚರಿಸುವ ಪುಷ್ಪಕ್‌ ಎಕ್ಸ್‌ಪ್ರೆಸ್‌ ರೈಲು, ಬುಧವಾರ ಮಧ್ಯರಾತ್ರಿ ಇಲ್ಲಿಗೆ ಬಂದಾಗ, ಶಸ್ತ್ರಸಜ್ಜಿತ ದರೋಡೆಕೋರರು ಸಾಮಾನ್ಯ ಬೋಗಿಯಲ್ಲಿ ಹತ್ತಿದ್ದಾರೆ. ಆನಂತರ ಇಲ್ಲಿಗೆ ಸಮೀಪದ ವಿದಿಶಾ ತಲುಪುವಷ್ಟರಲ್ಲಿ ಪ್ರಯಾಣಿಕರನ್ನು ಲೂಟಿ ಮಾಡಿದ್ದಾರೆ. ಇದಕ್ಕೆ ಪ್ರತಿಭಟಿಸಿದ ಮೂವರು ಪ್ರಯಾಣಿಕರನ್ನು ರೈಲಿನಿಂದ ಹೊರಗೆ ಎಸೆದಿದ್ದಾರೆ.

ಆನಂತರ ಮಹಿಳೆಯಾಬ್ಬಳನ್ನು ಶೌಚಾಲಯಕ್ಕೆ ಎಳೆದೊಯ್ದು ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ. ಲಲಿತ್‌ಪುತ್‌ ರೈಲು ನಿಲ್ದಾಣದ ಸಮೀಪ ಚೈನು ಎಳೆದು ರೈಲು ನಿಲ್ಲಿಸಿ, ಅಲ್ಲಿಂದ ಪರಾರಿಯಾಗಿದ್ದಾರೆ. ಗುಂಪಿನಲ್ಲಿ ಸುಮಾರು 8ರಿಂದ 10 ಜನ ದರೋಡೆಕೋರರಿದ್ದು, ಅವರ ಬಳಿ ಹರಿತವಾದ ಮಾರಕಾಸ್ತ್ರಗಳಿದ್ದವು ಎನ್ನಲಾಗಿದೆ.

ರೈಲಿನಿಂದ ಹೊರಗೆಸೆಯಲ್ಪಟ್ಟ ಅಖಿಲೇಶ್‌, ಅಜಯ್‌ ಮತ್ತು ಸಂಜಯ್‌ ಅವರನ್ನು ಝಾನ್ಸಿಯ ಆಸ್ಪತ್ರೆಯಾಂದರಲ್ಲಿ ದಾಖಲು ಮಾಡಲಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ. ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ತನಿಖೆ ಕೈಗೆತ್ತಿಕೊಂಡಿದ್ದಾರೆ.

(ಏಜನ್ಸೀಸ್‌)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X