ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ಯಾನರೀಸ್‌ ಆಟೋಮೇಶನ್ಸ್‌ ಬಳಗದಿಂದ ‘ಕನ್ನಡ ಹಬ್ಬ’

By Staff
|
Google Oneindia Kannada News

ಕ್ಯಾನರೀಸ್‌ ಆಟೋಮೇಶನ್ಸ್‌ ಬಳಗದಿಂದ ‘ಕನ್ನಡ ಹಬ್ಬ’
ಸಂಗೀತ, ನೃತ್ಯಗಳ ಸಂಗಮ, ನಗೆ ಬೆಡಗಿನ ಸಂಭ್ರಮ...

ಬೆಂಗಳೂರು : ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮಂಚೂಣಿಯಲ್ಲಿರುವ ಬೆಂಗಳೂರಿನ ಕ್ಯಾನರೀಸ್‌ ಆಟೋಮೇಶನ್ಸ್‌ ಪ್ರೈ. ಲಿ., ಸ0ಸ್ಥೆಯು ತನ್ನ ಐದನೇ ಕನ್ನಡ ಹಬ್ಬ- ಕನ್ನಡ ರಾಜ್ಯೋತ್ಸವವನ್ನು ಸಡಗರದಿಂದ ಆಚರಿಸಿತು.

ಆರ್‌.ವಿ.ದಂತ ಮಹಾವಿದ್ಯಾಲಯದ ಸಭಾಂಗಣ, ಕ್ಯಾನರೀಸ್‌ ಸಂಸ್ಥೆಯ ಕನ್ನಡ ಪ್ರೇಮಿಗಳ ಕಲರವದಿಂದ ಡಿ.10ರಂದು ತುಂಬಿ ಸಂಭ್ರಮ ಸೂಸುತ್ತಿತ್ತು. ಸುಮಾರು ಮೂರೂವರೆ ಗಂಟೆಗಳ ಕಾಲ ಕನ್ನಡನಾಡು ನುಡಿಯನ್ನು ಪ್ರತಿಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರೆದವರ ಮನ ಸೆಳೆದವು.

ವರ್ಷವಿಡೀ ತಮ್ಮ ತಮ್ಮ ಕೆಲಸದಲ್ಲಿ ಮಗ್ನವಾಗಿರುವ ಕ್ಯಾನರೀಸ್‌ ಬಳಗಕ್ಕೆ ಈ ರಾಜ್ಯೋತ್ಸವ ಸಮಾರಂಭವು, ಅವರ ಬಹುಮುಖ ಪ್ರತಿಭಾ ಪ್ರದರ್ಶನಕ್ಕೆ ಎಡೆಮಾಡಿಕೊಟ್ಟಿತು. ಭಾವಗೀತೆ, ಜನಪದಗೀತೆ, ಚಲನಚಿತ್ರಗೀತೆ, ವೃಂದಗಾನ, ಭರತನಾಟ್ಯ ಒಂದು ತೆರನಾಗಿ ಪ್ರೇಕ್ಷಕರನ್ನು ರಂಜಿಸಿದರೆ, ಇನ್ನೊಂದೆಡೆ ಕ್ಯಾನರೀಸ್‌ ಹುಡುಗರ ಹಾಸ್ಯ, ಮಿಮಿಕ್ರಿ, ಸಮೂಹ ನೃತ್ಯಗಳು ಪ್ರೇಕ್ಷಕರ ಮನ ಗೆದ್ದವು.

ಇಷ್ಟಲ್ಲದೆ ಕರ್ನಾಟಕದ ವಿವಿಧ ಪ್ರದೇಶಗಳ ಸಾಂಪ್ರದಾಯಿಕ ಉಡುಗೆ ತೊಡುಗೆಗಳ ಪ್ರದರ್ಶನ ಹಾಗೂ ಮೈಸೂರು ಮಹಾರಾಜರ ಉಡುಗೆ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗು ನೀಡಿತು. ಒಟ್ಟಾರೆ ಕ್ಯಾನರೀಸ್‌ ಬಳಗ ಪ್ರಸ್ತುತ ಪಡಿಸಿದ ವಿವಿಧ ಕಾರ್ಯಕ್ರಮಗಳ ಹೂಗುಚ್ಛ ಬಲು ಸುಂದರವಾಗಿತ್ತು.

ಕಾರ್ಯಕ್ರಮದ ನಂತರ ಕರ್ನಾಟಕದ ಸಾಂಪ್ರದಾಯಿಕ ತಿನಿಸುಗಳಾದ ನುಚ್ಚಿನುಂಡೆ, ಒಬ್ಬಟ್ಟು, ಅಕ್ಕಿರೊಟ್ಟಿ, ಚಿತ್ರಾನ್ನ ಮುಂತಾದವುಗಳನ್ನೊಳಗೊಂಡ ಸವಿಯಾದ ಊಟ ನೆರೆದವರ ಮೆಚ್ಚುಗೆ ಗಳಿಸಿತು.

ಪರಿಚಯ : ರಾಮನ್‌ ಸುಬ್ಬರಾವ್‌ ಮೇಟಿಕುರ್ಕೆ, ರಘು ಚಂದ್ರಶೇಖರಯ್ಯ, ಶ್ರೀಹರಿ ಬೋರೇಗೌಡ ಮತ್ತು ಅರುಣ್‌ ದಾನವಾಡಿಯವರ ಮಹತ್ವಾಕಾಂಕ್ಷೆಯ ಕೂಸು‘ಕ್ಯಾನರೀಸ್‌ ಆಟೋಮೇಶನ್ಸ್‌’, 1988ರಲ್ಲಿ ಜನ್ಮ ತಾಳಿ ಸೊಂಪಾಗಿ ಬೆಳೆಯುತ್ತಿದೆ.

ಸುಮಾರು 150 ಜನ ಕೆಲಸ ಮಾಡುವ ಈ ಸಂಸ್ಥೆಯು ಬೆಂಗಳೂರು, ಬರೋಡಾ ಮತ್ತು ಅಮೆರಿಕಾದ ಸಿಯಾಟಲ್‌ ನಗರಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X