ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೈವ್‌ಬ್ಯಾಂಡ್‌ ಪ್ರಕರಣ : 44 ಯುವತಿಯರ ಬಂಧನ

By Staff
|
Google Oneindia Kannada News

ಲೈವ್‌ಬ್ಯಾಂಡ್‌ ಪ್ರಕರಣ : 44 ಯುವತಿಯರ ಬಂಧನ
ಸಂಭ್ರಮ್‌ ರೂಸ್ಟ್‌ ರೆಸಾರ್ಟ್‌ ಮೇಲೆ ದಾಳಿ, ಸೋಲದೇವನಹಳ್ಳಿ ಎಸ್‌ಐ ಅಮಾನತು

ಬೆಂಗಳೂರು : ನಗರದಲ್ಲಿ ನಿಷೇಧವಿದ್ದರೂ ಲೈವ್‌ ಬ್ಯಾಂಡ್‌ ನಡೆಸಿತ್ತಿದ್ದ ಸಂಭ್ರಮ್‌ ರೂಸ್ಟ್‌ ರೆಸಾರ್ಟ್‌ನ ಮೇಲೆ ದಾಳಿ ನಡೆಸಿದ ಪೊಲೀಸರು 44 ಮಂದಿ ಯುವತಿಯರನ್ನು ಬಂಧಿಸಿದ್ದಾರೆ.

ಶನಿವಾರ ಬೆಳಗಿನ ಜಾವ ರೆಸಾರ್ಟ್‌ನಲ್ಲಿ ನಡೆಯುತ್ತಿದ್ದ ಲೈವ್‌ಬ್ಯಾಂಡ್‌ ಮೇಲೆ ದಾಳಿ ನಡೆಸಿದ ಪೊಲೀಸರು, ಲೈವ್‌ಬ್ಯಾಂಡ್‌ಗೆ ಬಳಸಲಾಗುತ್ತಿದ್ದ ವಾದ್ಯ ಪರಿಕರಗಳು, ಮದ್ಯದ ಬಾಟಲಿಗಳು, 11 ಮೊಬೈಲ್‌ಗಳು, 5758ರೂಪಾಯಿ ನಗದು ವಶಪಡಿಸಿಕೊಂಡಿದ್ದಾರೆ.

ಲೈವ್‌ ಬ್ಯಾಂಡ್‌ ನಡೆಸಲು ಅವಕಾಶ ನೀಡಿದ ಸೋಲದೇವನಹಳ್ಳಿಯ ಸಬ್‌ಇನ್ಸ್‌ಪೆಕ್ಟರ್‌ ಪುಟ್ಟರಾಜು ಎಂಬುವರನ್ನು ಆಯುಕ್ತ ಅಜಯ್‌ಕುಮಾರ್‌ ಸಿಂಗ್‌ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X