ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

800 ಎಸ್‌ಡಿಎ ಹುದ್ದೆಗಳ ಮೇಲೆ ಲಕ್ಷಾಂತರ ಮಂದಿಯ ಕಣ್ಣು

By Staff
|
Google Oneindia Kannada News

800 ಎಸ್‌ಡಿಎ ಹುದ್ದೆಗಳ ಮೇಲೆ ಲಕ್ಷಾಂತರ ಮಂದಿಯ ಕಣ್ಣು
ಕೆಪಿಎಸ್‌ಸಿಯಿಂದ ಅರ್ಜಿ ಅಹ್ವಾನ, ಅರ್ಜಿ ಸಲ್ಲಿಕೆಗೆ ಫೆ.8 ಕಡೆಯ ದಿನ

ಬೆಂಗಳೂರು : ವಿವಿಧ ಇಲಾಖೆಯಲ್ಲಿ ಖಾಲಿ ಇರುವ ಕಿರಿಯ ಸಹಾಯಕ/ ಎಸ್‌ಡಿಎ ಹುದ್ದೆಗಳನ್ನು ತುಂಬಲು ಒಂಭತ್ತು ವರ್ಷಗಳ ನಂತರ ಸರ್ಕಾರ ಮುಂದಾಗಿದೆ. 800 ಹುದ್ದೆಗಳಿಗೆ ಪ್ರಸ್ತುತ ಅರ್ಜಿ ಆಹ್ವಾನಿಸಲಾಗಿದೆ.

ಡಿಸೆಂಬರ್‌ 17ರಿಂದ ಅರ್ಜಿ ವಿತರಣೆ ಪ್ರಕ್ರಿಯೆ ಆರಂಭವಾಗಲಿದೆ ಎಂದು ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷ ಎಚ್‌.ಎನ್‌. ಕೃಷ್ಣ ತಿಳಿಸಿದ್ದಾರೆ.

ಪೂರ್ಣ ವಿವರ :

  • ಹುದ್ದೆಯ ಹೆಸರು -ಕಿರಿಯ ಸಹಾಯಕ/ಎಸ್‌ಡಿಎ

  • ಹುದ್ದೆಗಳ ಸಂಖ್ಯೆ -800

  • ಅರ್ಜಿ ವಿತರಣೆ -ಡಿ.17ರಿಂದ ಆರಂಭ

  • ಅರ್ಜಿ ಪಡೆಯಲು ಕಡೆಯ ದಿನ -ಫೆಬ್ರವರಿ 3

  • ಅರ್ಜಿ ಸಲ್ಲಿಸಲು ಕಡೆಯ ದಿನ -ಫೆಬ್ರವರಿ 8.

  • ವಿದ್ಯಾರ್ಹತೆ -ಎಸ್‌ಎಲ್‌ಎಲ್‌ಸಿ

  • ವಯೋಮಿತಿ -18ರಿಂದ 33ವರ್ಷಗಳ ಒಳಗಿನವರು(ಮೀಸಲಾತಿಯನ್ವಯ ವಯೋಮಿತಿಯಲ್ಲಿ ಸಡಿಲಿಕೆ ಇದೆ)

  • ಅರ್ಜಿ ದೊರೆಯುವ ಸ್ಥಳಗಳು - ಆಯೋಗದ ಕಛೇರಿ, ಅಫೆಕ್ಸ್‌ ಬ್ಯಾಂಕ್‌ ಮತ್ತು ಎಲ್ಲಾ ಜಿಲ್ಲೆಗಳ ಡಿಸಿಸಿ ಬ್ಯಾಂಕ್‌ಗಳು(ಭರ್ತಿ ಮಾಡಿದ ಅರ್ಜಿಗಳನ್ನು ಅಲ್ಲಿಯೇ ಸ್ವೀಕರಿಸಲಾಗುತ್ತದೆ )

  • ಅರ್ಜಿ ಶುಲ್ಕ - ಪರಿಶಿಷ್ಟ ಜಾತಿ ಪಂಗಡದವರಿಗೆ 100ರೂ., ಇತರರಿಗೆ 200ರೂ.

  • ಪರೀಕ್ಷೆಯ ಪಠ್ಯ -150+150 ಸೇರಿದಂತೆ 300 ಅಂಕಗಳಿಗೆ ಎರಡು ಪತ್ರಿಕೆಗಳು(ಪ್ರತಿ ಪತ್ರಿಕೆಗೆ ಉತ್ತರಿಸಲು ಕಾಲಾವಕಾಶ -2ಗಂಟೆ)
  • ಪರೀಕ್ಷೆಯ ದಿನಾಂಕ - 2006ರ ಜೂನ್‌.

  • ಫಲಿತಾಂಶ -ಸೆಪ್ಟೆಂಬರ್‌ ಅಥವಾ ಅಕ್ಟೋಬರ್‌.

  • ಕಳೆದ ಸಲ 1996ರಲ್ಲಿ 900 ಎಸ್‌ಡಿಎ ಹುದ್ದೆಗಳಿಗೆ ಆಯೋಗ ಅರ್ಜಿ ಆಹ್ವಾನಿಸಿತ್ತು. ಆಗ 6ಲಕ್ಷಮಂದಿ ಅರ್ಜಿ ಸಲ್ಲಿಸಿದ್ದರು. ಈ ಸಲ ಈ ಸಂಖ್ಯೆ ದ್ವಿಗುಣವಾಗುವ ಸಾಧ್ಯತೆಗಳಿವೆ.

    (ಇನ್ಫೋ ವಾರ್ತೆ)

    ಮುಖಪುಟ / ಧರ್ಮ-ಕಾರಣ

    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X