ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಲ್‌ಸೆಂಟರ್‌ ಹುಡುಗಿ ಚಾಲಕನಿಂದಲೇ ಕೊಲೆಯಾದಳು!

By Staff
|
Google Oneindia Kannada News

ಕಾಲ್‌ಸೆಂಟರ್‌ ಹುಡುಗಿ ಚಾಲಕನಿಂದಲೇ ಕೊಲೆಯಾದಳು!
ಸಿಟಿ ಕ್ರೆೃಮ್‌ : ಹಣದಾಸೆಗೆ ಚಾಲಕನಿಂದ ಕೊಲೆ, ಅದಕ್ಕೂ ಮೊದಲು ಅತ್ಯಾಚಾರ?

ಬೆಂಗಳೂರು : ಕಾಲ್‌ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದ ಹುಡುಗಿಯಾಬ್ಬಳ ಹತ್ಯೆಯಾಗಿದ್ದು, ಈ ಸಂಬಂಧ ಚಾಲಕನೊಬ್ಬನನ್ನು ಬಂಧಿಸಲಾಗಿದೆ ಎಂದು ಪೊಲೀಸ್‌ ಉಪ ಆಯುಕ್ತ ಅಲೋಕ್‌ಕುಮಾರ್‌ ತಿಳಿಸಿದ್ದಾರೆ.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಕಾಲ್‌ಸೆಂಟರ್‌ನಲ್ಲಿ ಉದ್ಯೋಗದಲ್ಲಿದ್ದ 24ವರ್ಷದ ಯುವತಿ, ಕಂಪನಿ ಗುತ್ತಿಗೆ ಪಡೆದಿದ್ದ ವಾಹನದಲ್ಲಿ ಮನೆಗೆ ತೆರಳುವಾಗ ಕೊಲೆಯಾಗಿದ್ದಾಳೆ ಎಂದರು.

ಡಿ.13ರಂದು ಮಾರ್ಗ ಮಧ್ಯೆ ವಾಹನ ನಿಲ್ಲಿಸಿದ ಚಾಲಕ, ಹುಡುಗಿಯನ್ನು ಬಲವಂತವಾಗಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾನೆ. ಆಮೇಲೆ ಆಕೆಯ ಗಂಟಲನ್ನು ಸೀಳಿ ಕೊಲೆಮಾಡಿ, ಅಂಜನಾಪುರ ಲೇಔಟ್‌ ಸಮೀಪದ ತಗ್ಗೊಂದರಲ್ಲಿ ಎಸೆದಿದ್ದಾನೆ. ಕೊಲೆಮಾಡುವ ಮೊದಲು ಆರೋಪಿ ಅತ್ಯಾಚಾರ ಎಸಗಿರುವ ಸಂದೇಹವಿದೆ. ಮರಣೋತ್ತರ ಪರೀಕ್ಷೆ ನಂತರವಷ್ಟೇ ಈ ಕುರಿತು ಖಚಿತವಾಗಿ ಹೇಳಬಹುದು ಎಂದರು.

ಆರೋಪಿಯು ತಪ್ಪೊಪ್ಪಿಕೊಂಡಿದ್ದು, ಹಣಕ್ಕಾಗಿ ಈ ಕೃತ್ಯ ಎಸಗಿದ್ದೇನೆ ಎಂದಿದ್ದಾನೆ. ಎಟಿಎಂ ಕಾರ್ಡ್‌ನಿಂದ ಹಣ ತೆಗೆದುಕೊಡುವಂತೆ ಮೃತ ಹುಡುಗಿಯನ್ನು ಬಲವಂತಪಡಿಸಿದ್ದಾಗಿ ಹೇಳಿದ್ದಾನೆ ಎಂದು ಅಲೋಕ್‌ಕುಮಾರ್‌ ಹೇಳಿದರು.

(ಪಿಟಿಐ)

ಮುಖಪುಟ / ಬೆಂಗಳೂರು ಡೈರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X