ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಬು ಧಾಬಿ ಪ್ರಶಸ್ತಿ ವಿಜೇತ ಡಾ.ಬಿ.ಆರ್‌.ಶೆಟ್ಟಿಗೆ ಸನ್ಮಾನ

By Staff
|
Google Oneindia Kannada News

ಅಬು ಧಾಬಿ ಪ್ರಶಸ್ತಿ ವಿಜೇತ ಡಾ.ಬಿ.ಆರ್‌.ಶೆಟ್ಟಿಗೆ ಸನ್ಮಾನ
ಕನ್ನಡವೇ ಸತ್ಯ ತಂಡದಿಂದ ಭಾರತೀಯ ವಿದ್ಯಾಭವನದಲ್ಲಿ ಸನ್ಮಾನ ಸಮಾರಂಭ

ಬೆಂಗಳೂರು : 2005ನೇ ಸಾಲಿನ ಅಬು ಧಾಬಿ ಪ್ರಶಸ್ತಿ ವಿಜೇತ ಹೊರನಾಡ ಕನ್ನಡಿಗ ಡಾ.ಬಿ.ಆರ್‌.ಶೆಟ್ಟಿ ಅವರನ್ನು ‘ಕನ್ನಡವೇ ಸತ್ಯ’ ತಂಡ ಗುರುವಾರ ಸನ್ಮಾನಿಸುತ್ತಿದೆ.

ಪ್ರತಿಷ್ಠಿತ ಪ್ರಶಸ್ತಿ ಪಡೆದ ನಂತರ ಪ್ರಥಮ ಬಾರಿಗೆ ಶೆಟ್ಟಿ ಅವರು ತವರಿಗೆ ಭೇಟಿ ನೀಡುತ್ತಿದ್ದಾರೆ. ಈ ನಿಮಿತ್ತ ಅವರನ್ನು ಭಾರತೀಯ ವಿದ್ಯಾಭವನದಲ್ಲಿ ಸಂಜೆ 6.30ಕ್ಕೆ ಸನ್ಮಾನಿಸಿ ಗೌರವಿಸುವ ಶ್ಲಾಘನೀಯ ಕಾರ್ಯಕ್ಕೆ, ‘ಕನ್ನಡವೇ ಸತ್ಯ’ ಖ್ಯಾತಿಯ ಗ್ಲೋಬಲ್‌ ಕನ್ಸಲ್ಟಂಟ್ಸ್‌ ಸಂಸ್ಥೆ ಮುಂದಾಗಿದೆ.

ಪೇಜಾವರ ಮಠದ ಶ್ರೀ ವಿಶ್ವೇಶ್ವರತೀರ್ಥ ಸ್ವಾಮಿಗಳ ಸಾನ್ನಿಧ್ಯದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ವಿಧಾನ ಪರಿಷತ್‌ ಸಭಾಪತಿ ವಿ.ಆರ್‌.ಸುದರ್ಶನ್‌ ಭಾಗವಹಿಸಲಿದ್ದಾರೆ.

ವಿಜಯ ಕರ್ನಾಟಕ ದಿನಪತ್ರಿಕೆಯ ಸಂಪಾದಕ ವಿಶ್ವೇಶ್ವರ ಭಟ್‌ ಮತ್ತು ಕನ್ನಡಪ್ರಭ ದಿನಪತ್ರಿಕೆಯ ಸಂಪಾದಕ ರಂಗನಾಥ್‌ ಅವರು ಅಭಿನಂದನಾ ಭಾಷಣ ಮಾಡಲಿದ್ದಾರೆ.

ಶಾಸಕ ಜಮೀರ್‌ ಅಹ್ಮದ್‌, ಭಾವಗೀತೆಗಳ ಸರದಾರ-ಸಂಗೀತಗಾರ ಸಿ.ಅಶ್ವತ್ಥ, ರಾಷ್ಟ್ರಪ್ರಶಸ್ತಿ ವಿಜೇತ ನಟಿ ತಾರಾ ಹಾಗೂ ದೂರದರ್ಶನ ನಿರ್ದೇಶಕ ಮಹೇಶ್‌ ಜೋಶಿ ಅವರು ಗೌರವಾನ್ವಿತ ಅತಿಥಿಗಳಾಗಿದ್ದು, ಅಬು ಧಾಬಿ ಕನ್ನಡ ಸಂಘದ ಅಧ್ಯಕ್ಷ ಸವೋತ್ತಮ ಶೆಟ್ಟಿ ವಿಶೇಷ ಆಹ್ವಾನಿತರಾಗಿ ಆಗಮಿಸಲಿದ್ದಾರೆ.shetty.

ಗ್ಲೋಬಲ್‌ ಕನ್ಸಲ್ಟಂಟ್ಸ್‌ನ ಪ್ರಭಾಕರರಾವ್‌, ಕೆ.ಆರ್‌.ರಂಗನಾಥ್‌, ಬಿ.ಜಿ.ಮಂಜುನಾಥ್‌ ಹಾಗೂ ಲ್ಯಾಂಡ್‌ ಡೆವಲಪರ್‌ ಮಲ್ಲಿಕಾರ್ಜುನ್‌, ಕೆಪಿಸಿಸಿ ಸದಸ್ಯ ಕೆ.ಕೆ.ಜಯದೇವ್‌ ಮತ್ತು ಕಾವೇರಿ ಹ್ಯಾಂಡಿಕ್ರ್ಯಾಪ್ಟ್ಸ್‌ನ ಎಂ.ಜಿ.ಮಂಜುನಾಥ್‌ ಅವರೂ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು.

ಹೆಮ್ಮೆಯ ಸಾಧಕ : ಕಳೆದ ಮೂರು ದಶಕಗಳಿಂದ ಅಬು ಧಾಬಿಯಲ್ಲಿ ನೆಲೆಸಿರುವ ಡಾ.ಬಿ.ಆರ್‌.ಶೆಟ್ಟಿ ಅವರು ಆರೋಗ್ಯ ಸೇವಾ ಕ್ಷೇತ್ರದಲ್ಲಿ ಖ್ಯಾತಿ ಗಳಿಸಿದ್ದಾರೆ. ಪ್ರಸ್ತುತ ನ್ಯೂ ಮೆಡಿಕಲ್‌ ಸೆಂಟರ್‌ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕರಾಗಿರುವ ಅವರು, ಒಂದು ಚಿಕ್ಕ ಕೋಣೆಯ ಕ್ಲಿನಿಕ್‌ನಿಂದ ವೃತ್ತಿ ಆರಂಭಿಸಿದವರು.

ಆರೋಗ್ಯ ಕ್ಷೇತ್ರದಲ್ಲಿನ ಅವರ ಸಮಾಜ ಸೇವೆ ಪರಿಗಣಿಸಿ ಪ್ರಸಕ್ತ ಸಾಲಿನ ಅಬು ಧಾಬಿ ಪ್ರಶಸ್ತಿ ನೀಡಲಾಗಿದೆ. ಡಾ.ಶೆಟ್ಟಿ ಅವರಿಗೆ ಈಗಾಗಲೇ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯ ಗೌರವವೂ ಸಂದಿದೆ.

ಸನ್ಮಾನ ನಡೆಯುವ ಸ್ಥಳ :
ಭಾರತೀಯ ವಿದ್ಯಾಭವನ, ರೇಸ್‌ ಕೋರ್ಸ್‌ ರಸ್ತೆ, ಬೆಂಗಳೂರು-01.

ದಿನಾಂಕ ಮತ್ತು ಸಮಯ :
ಡಿಸೆಂಬರ್‌ 15, 2005. ಸಂಜೆ 6.30 ಗಂಟೆ

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X