ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಇನ್ಮುಂದೆ ನೀವ್‌ ಕೊಳ್ಳುವುದು ಅಪ್ಪಟ ಮೈಸೂರ್‌ ಸಿಲ್ಕೇ!’

By Staff
|
Google Oneindia Kannada News

‘ಇನ್ಮುಂದೆ ನೀವ್‌ ಕೊಳ್ಳುವುದು ಅಪ್ಪಟ ಮೈಸೂರ್‌ ಸಿಲ್ಕೇ!’
ಕೆಎಸ್‌ಎಫ್‌ಸಿಗೆ ಭೌಗೋಳಿಕ ನೋಂದಣಿ ಪತ್ರ, ನಕಲಿ ಮೈಸೂರು ಸಿಲ್ಕ್‌ ಮಾರಾಟಗಾರರಿಗೆ ಕಡಿವಾಣ

ಬೆಂಗಳೂರು : ಮೈಸೂರು ಸಿಲ್ಕ್‌ ಹೆಸರಲ್ಲಿ ಕಳಪೆ ಸೀರೆ ಕೊಂಡು, ಬೇಸರಪಡುವ ಆತಂಕ ಇನ್ನಿಲ್ಲ. ಗ್ರಾಹಕರು ಈಗ ನೆಮ್ಮದಿಯಿಂದ ಮೈಸೂರ್‌ ಸಿಲ್ಕ್‌ ಸೀರೆಯನ್ನು ಖರೀದಿಸಬಹುದು!

ಹೌದು, ರಾಜ್ಯ ಸರ್ಕಾರದ ಮೈಸೂರು ರೇಷ್ಮೆ ಕೈಗಾರಿಕಾ ನಿಗಮ(ಕೆಎಸ್‌ಎಫ್‌ಸಿ)ಕ್ಕೆ ಮೈಸೂರು ಸಿಲ್ಕ್‌ನ ಸಂಪೂರ್ಣ ಒಡೆತನ ಈಗ ದಕ್ಕಿದೆ. ಅದೀಗ ಮೈಸೂರ್‌ ಸಿಲ್ಕ್‌ಗೆ ಸಂಬಂಧಿಸಿದಂತೆ ಭೌಗೋಳಿಕ ನೋಂದಣಿ ಪತ್ರ ಪಡೆದಿದೆ. ಹೀಗಾಗಿ ಬೇರೆ ಯಾರಾದರೂ ಮೈಸೂರ್‌ ಸಿಲ್ಕ್‌ ಹೆಸರಲ್ಲಿ ಸೀರೆಗಳ ಮಾರಾಟ ಮಾಡಿದರೆ ಶಿಕ್ಷೆ ತಪ್ಪಿದ್ದಲ್ಲ.

ಮೈಸೂರು ಸಿಲ್ಕ್‌ಗೆ ಉತ್ತಮ ಬೇಡಿಕೆಯಿದ್ದು, ಕಳೆದ ನವೆಂಬರ್‌ ತಿಂಗಳಲ್ಲಿಯೇ 51ಸಾವಿರ ಸೀರೆಗಳು ಗ್ರಾಹಕರ ಮನೆ ತಲುಪಿವೆ. ನಕಲಿ ಸೀರೆಗಳ ಹಾವಳಿಗೆ ಕಡಿವಾಣ ಬಿದ್ದರೆ, ಮೈಸೂರ್‌ ಸಿಲ್ಕ್‌ ಮತ್ತಷ್ಟು ಮಿಂಚಲಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X