ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಗರದಲ್ಲಿ ತಲೆಬುರುಡೆ ಮತ್ತು ಮೂಳೆಗಳ ಮಾರಾಟ ಜಾಲ

By Staff
|
Google Oneindia Kannada News

ನಗರದಲ್ಲಿ ತಲೆಬುರುಡೆ ಮತ್ತು ಮೂಳೆಗಳ ಮಾರಾಟ ಜಾಲ
ಇಡೀ ದೇಹಕ್ಕೆ ರೂ.3000, ತಲೆಬುರುಡೆಗೆ ರೂ.500, ಕಾಲಿನ ಮೂಳೆಗೆ 600ರೂ.!!!

ಬೆಂಗಳೂರು : ಸತ್ತ ಮನುಷ್ಯನ ತಲೆಬುರುಡೆ ಮತ್ತು ಮೂಳೆಗಳನ್ನು ಮಾರಾಟ ಮಾಡುತ್ತಿದ್ದ ಜಾಲವನ್ನು ನಗರದ ಪೊಲೀಸರು ಪತ್ತೆಹಚ್ಚಿದ್ದಾರೆ

ಈ ಸಂಬಂಧ ಬನಶಂಕರಿ ಮತ್ತು ಶ್ರೀರಾಮಪುರ ಪೊಲೀಸ್‌ ಠಾಣೆಯಲ್ಲಿ ಎರಡು ಪ್ರಕರಣಗಳು ದಾಖಲಾಗಿವೆ. ಸ್ಮಶಾನದಲ್ಲಿ ವಾಸಿಸುವ ಗುಂಪೊಂದನ್ನು ಪೊಲೀಸರು ಬಂಧಿಸಿದ್ದು, ಅವರಿಂದ ಮಾನವ ದೇಹದ ಅವಶೇಷಗಳನ್ನು ವಶಪಡಿಸಿಕೊಂಡಿದ್ದಾರೆ.

ಸಮಾಧಿಯಿಂದ ಶವಗಳನ್ನು ಹೊರತೆಗೆದು, ಮೂಳೆ ಮತ್ತು ತಲೆಬುರುಡೆಗಳನ್ನು ಈ ಗುಂಪು ಮಾರಾಟ ಮಾಡುತ್ತಿತ್ತು. ವೈದ್ಯಕೀಯ ವಿದ್ಯಾರ್ಥಿಗಳಿಂದ ಮತ್ತು ವಾಮಾಚಾರ ಮಾಡುವ ಮಂತ್ರವಾದಿಗಳಿಂದ ಈ ಅವಶೇಷಗಳಿಗೆ ಹೆಚ್ಚಿನ ಬೇಡಿಕೆ ಇತ್ತು ಎಂಬ ಅಂಶ ಪತ್ತೆಯಾಗಿದೆ.

ದರ ಸೂಚಿ : ತಲೆಬುರುಡೆಯನ್ನು 500ರೂ.ಗಳಿಗೆ, ಕೈ ಮೂಳೆಯನ್ನು 200ರೂ.ಗಳಿಗೆ, ಕಾಲಿನ ಮೂಳೆಯನ್ನು 600ರೂ.ಗಳಿಗೆ ಈ ತಂಡ ಮಾರಾಟ ಮಾಡುತ್ತಿತ್ತು. 3000ಸಾವಿರ ಕೊಟ್ಟರೇ ಸಂಪೂರ್ಣ ಶವವನ್ನು ಈ ತಂಡ ನೀಡುತ್ತಿದ್ದ ಅಂಶ ಬೆಳಕಿಗೆ ಬಂದಿದೆ.

(ಇನ್ಫೋ ವಾರ್ತೆ)

ಮುಖಪುಟ / ಬೆಂಗಳೂರು ಡೈರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X