ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರಿನ ಜಯಲಕ್ಷ್ಮೀವಿಲಾಸ್‌ಗೆ ‘ಮ್ಯೂಜಿಯಂ’ ರೂಪ

By Staff
|
Google Oneindia Kannada News

ಮೈಸೂರಿನ ಜಯಲಕ್ಷ್ಮೀವಿಲಾಸ್‌ಗೆ ‘ಮ್ಯೂಜಿಯಂ’ ರೂಪ
ಈ ಅರಮನೆಗೀಗ ಶತಮಾನೋತ್ಸವ ಸಂಭ್ರಮ, ಮೈಸೂರು ವಿಶ್ವವಿದ್ಯಾಲದಿಂದ ಹೊಸ ರೂಪ

ಮೈಸೂರು : ನಗರದ ಸುಂದರ ವಾಸ್ತುಶಿಲ್ಪಗಳಲ್ಲೊಂದಾದ ಜಯಲಕ್ಷ್ಮೀ ವಿಲಾಸ್‌ ಭವನ ಇನ್ನು ಮುಂದೆ ಜಾನಪದ ಸಂಗ್ರಹಾಲಯವಾಗಲಿದೆ.

ಮೈಸೂರು ವಿಶ್ವವಿದ್ಯಾಲಯ ಅರಮನೆಯನ್ನು ಆಜೀವ ಭೋಗ್ಯಕ್ಕೆ ತೆಗೆದುಕೊಂಡಿದ್ದು, ಇನ್ನು ಮುಂದೆ ಅದು ಜಾನಪದ ಸಂಗ್ರಹಾಲಯವಾಗಿ ಮಾರ್ಪಡಲಿದೆ.

ನಗರದ 11 ಅರಮನೆಗಳ ಪೈಕಿ ಒಂದಾದ ಇದು, ನಿರ್ಮಾಣವಾಗಿದ್ದು 1905ರಲ್ಲಿ. ಜಯಚಾಮರಾಜ ಒಡೆಯರು, ತಮ್ಮ ಹಿರಿಯ ಮಗಳಾದ ಜಯಲಕ್ಷ್ಮಮ್ಮಣ್ಣಿ ಅವರಿಗೋಸ್ಕರ ಈ ಅರಮನೆ ಕಟ್ಟಿಸಿದ್ದರು. 1959ರಲ್ಲಿ, ಮೈಸೂರಿನ ಡೆಪ್ಯೂಟಿ ಕಮಿಷನರ್‌ ನರಸರಾಜ ಕೆಂಪರಾಜ ಅರಸು ಅವರೊಂದಿಗೆ ಜಯಲಕ್ಷ್ಮಮ್ಮಣ್ಣಿ ಅವರ ವಿವಾಹವಾಯಿತು.

ಶತಮಾನೋತ್ಸವದ ಸಂದರ್ಭದಲ್ಲಿ ಇದೀಗ ಜಾನಪದ ಸಂಗ್ರಹಾಲಯವಾಗಿ ರೂಪಾಂತರಗೊಳ್ಳುತ್ತಿದೆ. ಐದು ವರ್ಷಗಳ ಹಿಂದೆ ಇನ್ಫೋಸಿಸ್‌ ಪ್ರತಿಷ್ಠಾನ ಇದನ್ನು ನವೀಕರಿಸಿ ಮತ್ತೊಮ್ಮೆ ವೈಭವಯುತವಾಗುವಂತೆ ಮಾಡಿರುವುದನ್ನು ಇಲ್ಲಿ ಸ್ಮರಿಸಬಹುದು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X