ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದುಬೈ ಚಲನಚಿತ್ರೋತ್ಸವದಲ್ಲಿ 5 ಭಾರತೀಯ ಚಿತ್ರಗಳು

By Staff
|
Google Oneindia Kannada News

ದುಬೈ ಚಲನಚಿತ್ರೋತ್ಸವದಲ್ಲಿ 5 ಭಾರತೀಯ ಚಿತ್ರಗಳು
ಯಶ್‌ ಚೋಪ್ರಾ, ಅದೆಲ್‌ ಇಮಾಮ್‌, ಮೋರ್ಗನ್‌ ಫ್ರೀಮನ್‌ಗೆ ಗೌರವ...

ದುಬೈ : ಡಿಸೆಂಬರ್‌ 11ರಿಂದ 17ರವರೆಗೆ ನಡೆಯಲಿರುವ ಎರಡನೇ ದುಬೈ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಐದು ಭಾರತೀಯ ಚಿತ್ರಗಳು ಪ್ರದರ್ಶನಗೊಳ್ಳಲಿವೆ.

ಬಾಲಿವುಡ್‌ನ ಹೆಸರಾಂತ ನಿರ್ಮಾಪಕ-ನಿರ್ದೇಶಕ ಯಶ್‌ ಛೋಪ್ರಾ ಅವರು ಚಿತ್ರೋತ್ಸವದಲ್ಲಿ ಏಷ್ಯಾವನ್ನು ಪ್ರತಿನಿಧಿಸುವರು. ಅರಬ್‌ ರಾಷ್ಟ್ರಗಳನ್ನು ಇಜಿಪ್ಷಿಯನ್‌ ನಟ ಅದೆಲ್‌ ಇಮಾಮ್‌ ಹಾಗೂ ಹಾಲಿವುಡ್‌ನ್ನು ಅಮೆರಿಕಾದ ಸೂಪರ್‌ಸ್ಟಾರ್‌ ಮೋರ್ಗನ್‌ ಫ್ರೀಮನ್‌ ಪ್ರತಿನಿಧಿಸುವರು.

ಚಿತ್ರೋತ್ಸವದಲ್ಲಿ ಕಿರುಚಿತ್ರಗಳು, ವಿಶಿಷ್ಟ ಚಿತ್ರಗಳು ಸೇರಿದಂತೆ ಕನಿಷ್ಠ ನೂರು ಚಿತ್ರಗಳು ಪ್ರದರ್ಶನಗೊಳ್ಳಲಿವೆ. ಚಿತ್ರೋತ್ಸವವನ್ನು 12 ವಿಭಿನ್ನ ಭಾಗಗಳಾಗಿ ವಿಂಗಡಿಸಲಾಗಿದೆ.

ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿರುವ ಭಾರತೀಯ ಚಿತ್ರಗಳು :

1 ಶೃಂಗಾರಮ್‌/ ಡ್ಯಾನ್ಸ್‌ ಆಫ್‌ ಲವ್‌(ವಲ್ಡ್‌ ರ್ ಪ್ರೀಮಿಯರ್‌)
2. ಮೈ ಗಾಂಧಿ ಕೋ ನಹೀ ಮಾರಾ/ ಐ ಡಿಡ್‌ ನಾಟ್‌ ಕಿಲ್‌ ಗಾಂಧಿ (ಇಂಟರ್‌ನ್ಯಾಷನಲ್‌ ಪ್ರೀಮಿಯರ್‌)
3 ರಿಫ್ಲೆಕ್ಷನ್‌ (ಇಂಟರ್‌ನ್ಯಾಷನಲ್‌ ಪ್ರೀಮಿಯರ್‌)
4 ನಿಶ್ಶಬ್ದ್‌/ರೀಚೀಂಗ್‌ ಸೈಲೈನ್ಸ್‌ ( ಮಿಡಲ್‌ ಈಸ್ಟ್‌ ಪ್ರೀಮಿಯರ್‌)
5 ವಾಟರ್‌(ಮಿಡಲ್‌ ಈಸ್ಟ್‌ ಪ್ರೀಮಿಯರ್‌) .

ಚಿತ್ರೋತ್ಸವದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : www.dubaifilmfest.com

(ಏಜನ್ಸೀಸ್‌)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X