ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊಬೈಲ್‌-ದರ ಸಮರ : ರಿಲಯನ್ಸ್‌ನಿಂದ ಹೊಸ ಸ್ಕೀಮ್‌!

By Staff
|
Google Oneindia Kannada News

ಮೊಬೈಲ್‌-ದರ ಸಮರ : ರಿಲಯನ್ಸ್‌ನಿಂದ ಹೊಸ ಸ್ಕೀಮ್‌!
2999ರೂ.ಗೆ ಹ್ಯಾಂಡ್‌ಸೆಟ್‌ ಪಡೆಯಿರಿ, 3ವರ್ಷ ಉಚಿತ ಒಳಕರೆಗಳನ್ನು ಸ್ವೀಕರಿಸಿ!

ಬೆಂಗಳೂರು : ಗ್ರಾಹಕರನ್ನು ಸೆಳೆಯಲು ಮೊಬೈಲ್‌ ಕಂಪನಿಗಳು ನಾನಾ ಕಸರತ್ತುಗಳನ್ನು ಮಾಡುತ್ತಿವೆ. ಸದ್ಯದ ಬೆಲೆ ಸಮರಕ್ಕೆ ರಿಲಯನ್ಸ್‌ ಸಹಾ ಮುನ್ನುಗ್ಗಿದೆ.

ಟಾಟಾ ಇಂಡಿಕಾಮ್‌ನ ಎರಡು ವರ್ಷಗಳ ಉಚಿತ ಒಳಕರೆಗಳ ಯೋಜನೆಗೆ, ಸ್ಪರ್ಧೆಯಾಡ್ಡುವಂತೆ ರಿಲಯನ್ಸ್‌ ಹೊಸ ಯೋಜನೆಯನ್ನು ಶುಕ್ರವಾರದಿಂದ ಆರಂಭಿಸಿದೆ.

ಏನಿದು? : ಈ ಯೋಜನೆ ಪ್ರಕಾರ - LG 2530 ಹ್ಯಾಂಡ್‌ಸೆಟ್‌ನ್ನು 2999 ರೂ.ಗಳಿಗೆ ಖರೀದಿಸಿ, ಮೂರು ವರ್ಷಗಳ ಕಾಲ ಉಚಿತ ಒಳಕರೆಗಳ ಸೇವೆಯನ್ನು ಪಡೆಯಬಹುದು. ಅಲ್ಲದೇ 50 ರೂ.ಗಳ ಟಾಕ್‌ ಟೈಮ್‌ ಪಡೆಯಬಹುದು. ಡಿ.31ರವರೆಗೆ ಯೋಜನೆ ಲಭ್ಯ.

ಸ್ಪೈಸ್‌ನಿಂದ ಮತ್ತೊಂದು ಕೊಡುಗೆ :

ಸ್ಪೈಸ್‌ ಟಿಲಿಕಾಂನ ಹೊಸ ಯೋಜನೆ ಪ್ರಕಾರ -ರೂ.799 ಪಾವತಿಸಿ, ರೂ.50 ಟಾಕ್‌ಟೈಮ್‌ ಜೊತೆ ವರ್ಷಪೂರ್ತಿ ಉಚಿತ ಒಳಕರೆಗಳ ಸ್ವೀಕರಿಸಬಹುದು. ರೂ.25ರ ತಿಂಗಳ ಬಾಡಿಗೆ ಮೂಲಕ ಸ್ಥಳೀಯ ಎಸ್‌ಎಂಎಸ್‌ಗಳನ್ನು 1ಪೈಸೆಗೆ ಕಳುಹಿಸುವ ಸೌಲಭ್ಯವಿದೆ.

ಮೊಬೈಲ್‌ ಲೋಕದಲ್ಲಿ ದರ ಸಮರ ಆರಂಭಗೊಂಡಿದೆ. ಇನ್ನು ಏರ್‌ಟೆಲ್‌ ಮತ್ತು ಬಿಎಸ್‌ಎನ್‌ಎಲ್‌, ಗ್ರಾಹಕರ ಮೇಲೆ ಯಾವ ಬಾಣ ಪ್ರಯೋಗಿಸುತ್ತವೆಯೇ ಕಾದುನೋಡಬೇಕು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X