ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಲಿಕಾನ್‌ ನಗರಿಗೆ ಡಿ.9ರಂದು ಬಿಲ್‌ ಗೇಟ್ಸ್‌ ಭೇಟಿ

By Staff
|
Google Oneindia Kannada News

ಸಿಲಿಕಾನ್‌ ನಗರಿಗೆ ಡಿ.9ರಂದು ಬಿಲ್‌ ಗೇಟ್ಸ್‌ ಭೇಟಿ
ಐಟಿ ವೃತ್ತಿಪರರೊಂದಿಗೆ ಮಹತ್ವದ ಸಂವಾದ, ಐಟಿ ಪರಿಕರಗಳ ಬಿಡುಗಡೆ

ಬೆಂಗಳೂರು : ಮೈಕ್ರೋಸಾಫ್ಟ್‌ ಕಾರ್ಫೋರೇಷನ್‌ನ ಅಧ್ಯಕ್ಷ ಬಿಲ್‌ಗೇಟ್ಸ್‌ ಅವರು ಬೆಂಗಳೂರಿಗೆ ಡಿ.9ರಂದು ಭೇಟಿ ನೀಡಲಿದ್ದಾರೆ.

‘ಬಿಲ್‌ಗೇಟ್ಸ್‌ ಲೈವ್‌ ಇನ್‌ ಬೆಂಗಳೂರು-ರೆಡಿ 2005’ ಕಾರ್ಯಕ್ರಮದಲ್ಲಿ ಅವರು ಎಸ್‌.ಕ್ಯೂ.ಎಲ್‌ ಸರ್ವರ್‌ 2005, ಬಿಜ್‌ ಟಾಕ್‌ ಸರ್ವರ್‌ 2006 ಸೇರಿದಂತೆ ಐಟಿ ಕ್ಷೇತ್ರದ ವಿವಿಧ ಪರಿಕರಗಳನ್ನು ಬಿಡುಗಡೆ ಮಾಡಲಿದ್ದಾರೆ.

ನಗರದ ಅರಮನೆ ಮೈದಾನದಲ್ಲಿ ನಡೆವ ಕಾರ್ಯಕ್ರಮದಲ್ಲಿ , ಐಟಿ ಕ್ಷೇತ್ರದ ವೃತ್ತಿಪರರನ್ನು ಉದ್ದೇಶಿಸಿ ಬಿಲ್‌ಗೇಟ್ಸ್‌ ಮಾತನಾಡಲಿದ್ದಾರೆ ಎಂದು ಮೈಕ್ರೋಸಾಫ್ಟ್‌ ಇಂಡಿಯಾದ ಅಧಿಕಾರಿಗಳು ಸುದ್ದಿಗಾರರಿಗೆ ತಿಳಿಸಿದ್ದಾರೆ.

(ಪಿಟಿಐ)

ಮುಖಪುಟ / ಐಟಿ - ಬಿಟಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X