ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ್‌ ಪೆಟ್ರೋಲಿಯಂನ 800 ಹೊಸ ಶಾಖೆಗಳು ಶುರು

By Staff
|
Google Oneindia Kannada News

ಭಾರತ್‌ ಪೆಟ್ರೋಲಿಯಂನ 800 ಹೊಸ ಶಾಖೆಗಳು ಶುರು
ಕಳೆದ ಮೂರು ವರ್ಷಗಳಿಂದ ಶೇ.33ರಷ್ಟು ವಿಸ್ತರಣೆ - ಬಿಪಿಸಿಎಲ್‌

ಬೆಂಗಳೂರು : ಭಾರತ್‌ ಪೆಟ್ರೋಲಿಯಂ ಸಂಸ್ಥೆ (ಬಿಪಿಸಿಎಲ್‌)ದೇಶಾದ್ಯಂತ 800 ಹೊಸ ಮಳಿಗೆಗಳನ್ನು ಆರಂಭಿಸಲಿದೆ.

ಸಂಸ್ಥೆಯ ಕಾರ್ಯ ನಿರ್ವಾಹಕ ನಿರ್ದೇಶಕ ಸಂಜಯ್‌ ಕೃಷ್ಣಮೂರ್ತಿ, ಬುಧವಾರ ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಸಂಸ್ಥೆ ಸುಮಾರು 800 ಹೊಸ ಚಿಲ್ಲರೆ ಮಾರಾಟ ಮಳಿಗೆಗಳನ್ನು ತೆರೆಯಲು ಉದ್ದೇಶಿಸಿದೆ. ಇವುಗಳ ಪೈಕಿ ಉತ್ತರ ಮತ್ತು ಪಶ್ಚಿಮ ವಲಯಗಳಲ್ಲಿ ತಲಾ 250 ಮಳಿಗೆ, ದಕ್ಷಿಣದಲ್ಲಿ 200, ಪೂರ್ವದಲ್ಲಿ 100 ಮಳಿಗೆಗಳನ್ನು ತೆರೆಯಲಾಗುವುದು ಎಂದು ವಿವರಿಸಿದರು.

2003ನೇ ಸಾಲಿನಲ್ಲಿ ಒಟ್ಟು 2000 ಚಿಲ್ಲರೆ ಮಾರಾಟ ಮಳಿಗೆಗಳಿದ್ದವು. ಪ್ರಸ್ತುತ ಅವುಗಳ ಸಂಖ್ಯೆ6600 ತಲುಪಿದೆ. ಕಳೆದ ಮೂರು ವರ್ಷಗಳಲ್ಲಿ ಸಂಸ್ಥೆಯು ಶೇ.33ರಷ್ಟು ವಿಸ್ತರಣೆಯಾಗಿದೆ ಎಂದು ಹೇಳಿದರು.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X