ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೆ.13ರಿಂದ ಬೆಂಗಳೂರಿನಲ್ಲಿ ಡಬ್ಲ್ಯೂಟಿಒ ಟೆನಿಸ್‌ ಟೂರ್ನಿ

By Staff
|
Google Oneindia Kannada News

ಫೆ.13ರಿಂದ ಬೆಂಗಳೂರಿನಲ್ಲಿ ಡಬ್ಲ್ಯೂಟಿಒ ಟೆನಿಸ್‌ ಟೂರ್ನಿ
ಡಬ್ಲ್ಯೂಟಿಎ ಟೆನಿಸ್‌ ಟೂರ್ನಿ ಹೈದರಾಬಾದ್‌ನಿಂದ ಬೆಂಗಳೂರಿಗೆ ವರ್ಗಾವಣೆ, ಪಂದ್ಯಾವಳಿಗೆ ತಾರಾ ಮೆರುಗು...

ಬೆಂಗಳೂರು : ಮೊಟ್ಟಮೊದಲ ಬಾರಿಗೆ ರಾಜ್ಯಕ್ಕೆ ಡಬ್ಲ್ಯೂಟಿಎ ಟೆನಿಸ್‌ ಪಂದ್ಯಾವಳಿ ನಡೆಸಿಕೊಡುವ ಅವಕಾಶ ದೊರೆತಿದೆ. 2006ನೇ ಸಾಲಿನ ಫೆಬ್ರವರಿ 13ರಿಂದ 19ರವರೆಗೆ ಪಂದ್ಯಾವಳಿ ನಡೆಯಲಿದೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮುಖ್ಯಮಂತ್ರಿ ಎನ್‌. ಧರ್ಮಸಿಂಗ್‌ ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ.

ಟೆನಿಸ್‌ ತಾರೆ ಮಹೇಶ್‌ ಭೂಪತಿ ಈ ಸಂದರ್ಭದಲ್ಲಿ ಮಾತನಾಡಿ, ದೇಶದ ವಿವಿಧ ನಗರಗಳಲ್ಲೂ ಟೆನಿಸ್‌ ಆಸಕ್ತಿ ಬೆಳೆಸುವ ಉದ್ದೇಶದಿಂದ ಹೈದರಾಬಾದ್‌ನಿಂದ ನಗರಕ್ಕೆ ವರ್ಗಾಯಿಸಲಾಗಿದೆ ಎಂದರು.

ಕಳೆದ ವರ್ಷ ಹೈದರಾಬಾದ್‌ನಲ್ಲಿ ನಡೆದ ಪಂದ್ಯಾವಳಿ ಸಾನಿಯಾ ಮಿರ್ಜಾಗೆ ಪ್ರಚಂಡ ಯಶಸ್ಸು ನೀಡಿತ್ತು. ಈ ವರ್ಷವೂ ಪಂದ್ಯಾವಳಿಗೆ ತಾರಾಮೆರುಗು ಸಿಕ್ಕಲಿದೆ. ಸಾನಿಯಾ ಮಿರ್ಜಾ, ಶಿಖಾ ಓಬೇರಾಯ್‌, ನೇಹಾ ಓಬೇರಾಯ್‌, ಸುನೀತಾರಾವ್‌ ಮೊದಲಾದವರು ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆ ಎಂದರು.

ಪಂದ್ಯಾವಳಿಯ ಒಟ್ಟು ಬಹುಮಾನದ ಮೊತ್ತ 1ಲಕ್ಷ 75ಸಾವಿರ ಅಮೆರಿಕನ್‌ ಡಾಲರ್‌.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X