ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಡಿಯಲ್ಲಿ ಎಂಇಎಸ್‌ ಗದ್ದಲ, ಕನ್ನಡದ ಮೇಲೆ ಕಿಡಿ

By Staff
|
Google Oneindia Kannada News

ಗಡಿಯಲ್ಲಿ ಎಂಇಎಸ್‌ ಗದ್ದಲ, ಕನ್ನಡದ ಮೇಲೆ ಕಿಡಿ
ಸರ್ವಪಕ್ಷಗಳ ನಿಯೋಗ ಕರೆದೊಯ್ಯಲು ಮಹಾರಾಷ್ಟ್ರ ಸರ್ಕಾರ ನಿರ್ಧಾರ

ಬೆಂಗಳೂರು : ‘ಮೋರೆ-ಮಸಿ’ ಪ್ರಕರಣ ದಿನೇದಿನೇ ಹೊಸ ತಿರುವು ಪಡೆಯುತ್ತಿದೆ. ರಾಜ್ಯದ ಗಡಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್‌) ಗದ್ದಲ ಎಬ್ಬಿಸುತ್ತಿದೆ. ಪಾಲಿಕೆಯನ್ನು ವಜಾಗೊಳಿಸಿದ ಕ್ರಮದಿಂದ ಮಹಾರಾಷ್ಟ್ರಕ್ಕೆ ಇರುಸುಮುರುಸಾಗಿದೆ.

ಮಹಾರಾಷ್ಟ್ರ ಸರ್ಕಾರ, ಸರ್ವಪಕ್ಷಗಳ ನಿಯೋಗವನ್ನು ಪ್ರಧಾನಿಗಳ ಬಳಿ ಕರೆದೊಯ್ದು, ಕರ್ನಾಟಕದ ಮೇಲೆ ದೂರು ನೀಡಲು ನಿರ್ಧರಿಸಿದೆ.

ರಾಜ್ಯಪಾಲ ಟಿ.ಎನ್‌.ಚತುರ್ವೇದಿ ಅವರನ್ನು ವಾಪಸ್‌ ಕರೆಸಿಕೊಳ್ಳಬೇಕು. ಕರ್ನಾಟಕದ ವಿಧಾನಸಭೆಯನ್ನು ವಿಸರ್ಜಿಸಬೇಕೆಂದು ಎಂಇಎಸ್‌ ಒತ್ತಾಯಿಸುತ್ತಿದೆ. ಬೆಳಗಾವಿ ಸೇರಿದಂತೆ ರಾಜ್ಯದ ಗಡಿಭಾಗದಲ್ಲಿ ಕನ್ನಡ ಪತ್ರಿಕೆಗಳನ್ನು ಅದು ಸುಟ್ಟು, ತನ್ನ ಅಸಮಾಧಾನವನ್ನು ವ್ಯಕ್ತಪಡಿಸುತ್ತಿದೆ.

ರಾಜ್ಯದಲ್ಲೂ ಬಿಸಿ : ಕನ್ನಡ ಪತ್ರಿಕೆಗಳನ್ನು ಸುಟ್ಟ ಘಟನೆ ಖಂಡಿಸಿ, ಹುಬ್ಬಳ್ಳಿಯಲ್ಲಿ ಶ್ರೀ ಗಜಾನನ ಮಹಾಮಂಡಳದ ಕಾರ್ಯಕರ್ತರು ಮರಾಠಿ ಪತ್ರಿಕೆಗಳನ್ನು ಸುಟ್ಟು, ಪ್ರತಿಕಾರ ತೀರಿಸಿಕೊಂಡಿದ್ದಾರೆ.

ಎಂಇಎಸ್‌ ವಜಾಗೊಳಿಸಬೇಕು. ವಿಜಯಮೋರೆ ಮೇಲೆ ಕ್ರಿಮಿನಲ್‌ ಪ್ರಕರಣ ದಾಖಲಿಸಬೇಕೆಂಬ ಒತ್ತಾಯ, ಕನ್ನಡ ಪರ ವೇದಿಕೆಗಳಿಂದ ಕೇಳಿ ಬರುತ್ತಿದೆ.

(ಇನ್ಫೋ ವಾರ್ತೆ)

ಮುಖಪುಟ / ಧರ್ಮ-ಕಾರಣ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X