ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಬೆಂಗಳೂರು ಹಬ್ಬ’ಕ್ಕೆ ಭರದ ಸಿದ್ಧತೆ, ಡಿ.2ರಿಂದ ಮಜಾ...

By Staff
|
Google Oneindia Kannada News

‘ಬೆಂಗಳೂರು ಹಬ್ಬ’ಕ್ಕೆ ಭರದ ಸಿದ್ಧತೆ, ಡಿ.2ರಿಂದ ಮಜಾ...
ಧಾರವಾಡ, ಚಿಕ್ಕಮಗಳೂರು, ತುಮಕೂರು, ಮಂಡ್ಯ ಜಿಲ್ಲೆಗಳಿಗೂ ಹಬ್ಬದ ಸಂಭ್ರಮ

ಬೆಂಗಳೂರು : ನಾಡಿನ ಕಲೆ, ಸಂಸ್ಕೃತಿಯನ್ನು ಪ್ರತಿಬಿಂಬಿಸುವ ‘ಬೆಂಗಳೂರು ಹಬ್ಬ’ ಡಿಸೆಂಬರ್‌ 2ರಿಂದ ನಗರದಲ್ಲಿ ಆರಂಭಗೊಳ್ಳಲಿದೆ.

ಈ ಬಗ್ಗೆ ಸುದ್ದಿಗಾರರಿಗೆ ಹಬ್ಬದ ರೂವಾರಿಗಳಾದ ನಂದಿನಿ ಆಳ್ವ ಮತ್ತು ಪದ್ಮಿನಿ ರವಿ ಮಾಹಿತಿ ಒದಗಿಸಿದ್ದಾರೆ. ಬೆಂಗಳೂರು ಹಬ್ಬವನ್ನು ಈ ವರ್ಷ ವಿಭಿನ್ನವಾಗಿ ಮತ್ತು ವಿಜೃಂಭನೆಯಿಂದ ಆಚರಿಸಲು ಸಿದ್ಧತೆಗಳು ನಡೆದಿವೆ. ಡಿ.11ರವರೆಗೆ ಹಬ್ಬ ನಡೆಯಲಿದೆ.

ಈ ಅವಧಿಯಲ್ಲಿ ಹತ್ತು ದಿನಗಳ ಕಾಲ ನಾನಾ ಕಾರ್ಯಕ್ರಮಗಳು ನಡೆಯಲಿವೆ. ನಾಟಕ, ಬೀದಿ ನಾಟಕ, ಚಿತ್ರಕಲಾ ಪ್ರದರ್ಶನ, ಆಹಾರ ಮೇಳ, ಕ್ರೀಡೆ, ಮನರಂಜನೆ, ಫ್ಯಾಷನ್‌, ಚಲನಚಿತ್ರ -ಹೀಗೆ ನಾನಾ ವೈವಿಧ್ಯಗಳು ಬೆಂಗಳೂರು ಜನರನ್ನು ರಂಜಿಸಲಿವೆ.

ಕರ್ನಾಟಕದ 2750 ಕಲಾವಿದರು, ರಾಷ್ಟ್ರದ ವಿವಿಧ ಭಾಗಗಳಿಂದ 250ಕಲಾವಿದರು ಬೆಂಗಳೂರು ಹಬ್ಬದಲ್ಲಿ ರಂಜನೆ ನೀಡಲಿದ್ದಾರೆ. ನಗರದ 60 ಸ್ಥಳಗಳಲ್ಲಿ 125ಕಾರ್ಯಕ್ರಮಗಳನ್ನು ಹಬ್ಬದ ಅಂಗವಾಗಿ ಹಮ್ಮಿಕೊಳ್ಳಲಾಗಿದೆ.

ಕರ್ನಾಟಕ ಸುವರ್ಣ ಮಹೋತ್ಸವದ ಅಂಗವಾಗಿ ಹಬ್ಬವನ್ನು ಧಾರವಾಡ, ಚಿಕ್ಕಮಗಳೂರು, ತುಮಕೂರು, ಮಂಡ್ಯಜಿಲ್ಲೆಗಳಿಗೂ ವಿಸ್ತರಿಸಲಾಗಿದೆ. ಇಲ್ಲೆಲ್ಲ ನ.26ರಿಂದಲೇ ಹಬ್ಬ ಆರಂಭಗೊಳ್ಳಲಿದೆ.

ಜೆಎನ್‌ಎಸ್‌ ಸಭಾಂಗಣ, ಅಂಬೇಡ್ಕರ್‌ ಭವನ, ಗಾಯನ ಸಮಾಜ, ಸಂಸ ರಂಗಮಂದಿರ, ಚೌಡಯ್ಯ ಸ್ಮಾರಕ ಭವನ, ರಂಗಶಂಕರ ಸೇರಿದಂತೆ ವಿವಿಧೆಡೆ ಹಬ್ಬದ ಸಂದರ್ಭದಲ್ಲಿ ಪ್ರತಿದಿನ ಸಂಜೆ 6.30ಕ್ಕೆವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಹಬ್ಬದ ಅಂಗವಾಗಿ ಹಮ್ಮಿಕೊಳ್ಳಲಾಗಿರುವ ಕಾರ್ಯಕ್ರಮಗಳಿಗೆ ಯಾವುದೇ ಪ್ರವೇಶ ಶುಲ್ಕವನ್ನು ನಿಗದಿಪಡಿಸಿಲ್ಲ.

(ಇನ್ಫೋ ವಾರ್ತೆ)

ಮುಖಪುಟ / ಬೆಂಗಳೂರು ಡೈರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X