• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪುಟ್ಟಪರ್ತಿ ಸಾಯಿಬಾಬಾಗೀಗ ಎಂಭತ್ತು! ಭಕ್ತರಿಗೆ ಪುಳಕ!

By Staff
|

ಪುಟ್ಟಪರ್ತಿ ಸಾಯಿಬಾಬಾಗೀಗ ಎಂಭತ್ತು! ಭಕ್ತರಿಗೆ ಪುಳಕ!

ನ.18ರಿಂದಲೇ ಹುಟ್ಟುಹಬ್ಬಕ್ಕೆ ಚಾಲನೆ, ಇಂದು ಆಚರಣೆ ; ದೇಶ-ವಿದೇಶಗಳ ಸಾವಿರಾರು ಭಕ್ತರ ಆಗಮನ...

ಪುಟ್ಟಪರ್ತಿ : ಭಗವಾನ್‌ ಸತ್ಯ ಸಾಯಿಬಾಬಾ ಬುಧವಾರ 80ನೇ ವರ್ಷಕ್ಕೆ ಪದಾರ್ಪಣೆ ಮಾಡಿದ್ದು, ಭಕ್ತಾದಿಗಳು ಸಡಗರದಿಂದ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.

ಸಾಯಿ ಕುಲ್‌ವಂತ್‌ ಹಾಲ್‌ನಲ್ಲಿ ನವೆಂಬರ್‌ 18ರಂದು ಹುಟ್ಟುಹಬ್ಬಕ್ಕೆ ಅಧಿಕೃತ ಚಾಲನೆ ಸಿಕ್ಕಿದ್ದು, ಇಂದು(ನ.23) ಕ್ರೀಡಾಂಗಣದಲ್ಲಿ ಲಕ್ಷಾಂತರ ಜನರ ಸಮ್ಮುಖದಲ್ಲಿ ಹುಟ್ಟುಹಬ್ಬಕ್ಕೆ ಕಳೆದ ಕೆಲವು ದಿನಗಳಿಂದ ಭಾರಿ ಸಿದ್ಧತೆ ನಡೆಸಲಾಗಿತ್ತು. ಕಾರ್ಯಕ್ರಮದ ಹಿನ್ನೆಲೆ ಲಕ್ಷಾಂತರ ಜನ ಇಲ್ಲಿಗೆ ಆಗಮಿಸಿದ್ದು, ಪ್ರಶಾಂತಿ ನಿಲಯದ ಆವರಣ ಜನರಿಂದ ಭರ್ತಿಯಾಗಿದೆ. ಹೀಗಾಗಿ ಅನೇಕ ಜನ ಹೊರಗಡೆಯೇ ವಾಸ್ತವ್ಯ ಹೂಡಿದ್ದಾರೆ.

Sai Babaಹುಟ್ಟುಹಬ್ಬದ ಅಂಗವಾಗಿ ಕಳೆದ ವಾರದಿಂದ ನಾನಾ ಕಾರ್ಯಕ್ರಮಗಳು ಜರುಗುತ್ತಿವೆ. ನವೆಂಬರ್‌ 20ರಂದು ನಡೆದ ಕಾರ್ಯಕ್ರಮದಲ್ಲಿ 45ಕ್ಕೂ ಹೆಚ್ಚು ದೇಶಗಳ ಗಾಯಕ-ಗಾಯಕಿಯರು ಆಧ್ಯಾತ್ಮಿಕ ಗೀತೆಗಳನ್ನು ಹಾಡಿದರು.

ನವೆಂಬರ್‌ 20 ಮತ್ತು 21ರಂದು, ಶ್ರೀಸತ್ಯ ಸಾಯಿಬಾಬಾ ಸಂಸ್ಥೆಗಳ 8ನೇ ವಿಶ್ವಸಮಾವೇಶ ನಡೆಯಿತು. ಇದರಲ್ಲಿ 9,500 ಭಾರತೀಯ ಪ್ರತಿನಿಧಿಗಳು, 180ಕ್ಕೂ ಹೆಚ್ಚು ದೇಶಗಳ 3,500 ಪ್ರತಿನಿಧಿಗಳು ಭಾಗವಹಿಸಿದ್ದರು. ಐಕ್ಯತೆ, ಪರಿಶುದ್ಧತೆ ಮತ್ತು ದಿವ್ಯತೆ ಈ ವರ್ಷದ ಸಮಾವೇಶದ ವಿಷಯವಾಗಿತ್ತು.

ನವೆಂಬರ್‌ 23, 1926ರಂದು ಪುಟ್ಟಪರ್ತಿ ಎಂಬ ಹಳ್ಳಿಯಲ್ಲಿ ಜನಿಸಿದ ಬಾಬಾ, ತಮ್ಮ 15ನೇ ವಯಸ್ಸಿನಲ್ಲಿಯೇ ದೇವಮಾನವ ಎಂದು ಸ್ವಯಂ ಘೋಷಿಸಿಕೊಂಡರು. ಸಂತರು ಹಾಗೂ ಋಷಿಗಳ ಆಶಯಗಳನ್ನು ಈಡೇರಿಸಲು, ಜಗತ್ತನ್ನು ಉದ್ಧರಿಸಲು ಜನ್ಮವೆತ್ತಿರುವುದಾಗಿ ಹೇಳಿಕೊಂಡಿದ್ದರು. ವಿವಾದಗಳ ನಡುವೆಯೂ ಬಾಬಾ ಜನಪ್ರಿಯರು. ಉಚಿತ ಆಸ್ಪತ್ರೆ, ಉನ್ನತ ಶಿಕ್ಷಣ ನೀಡುವ ಶಾಲಾಕಾಲೇಜುಗಳು ಸೇರಿದಂತೆ ಅನೇಕ ಸಂಸ್ಥೆಗಳು ಜನಪರವಾಗಿ ನಿಂತಿವೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more