ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೇಯರ್‌-ಉಪಮೇಯರ್‌ ಸ್ಥಾನಕ್ಕೆ ಭಾರಿ ಕಸರತ್ತು

By Staff
|
Google Oneindia Kannada News

ಮೇಯರ್‌-ಉಪಮೇಯರ್‌ ಸ್ಥಾನಕ್ಕೆ ಭಾರಿ ಕಸರತ್ತು
ನ.29ರಂದು ಚುನಾವಣೆ : ಮಮ್ತಾಜ್‌ಗೆ ಮೇಯರ್‌ ಸ್ಥಾನ? ಲಕ್ಷ್ಮಿನಾರಾಯಣ್‌ಗೆ ಉಪಮೇಯರ್‌ ಸ್ಥಾನ?

ಬೆಂಗಳೂರು : ಬೆಂಗಳೂರು ಮಹಾನಗರ ಪಾಲಿಕೆ ಮೇಯರ್‌ ಸ್ಥಾನಕ್ಕೆ ಭಾರಿ ಸ್ಪರ್ಧೆ ಕಂಡು ಬಂದಿದ್ದು, ನ.29ರಂದು ಚುನಾವಣೆ ನಡೆಯಲಿದೆ.

ಹಿಂದುಳಿದ 2(ಎ)ವರ್ಗದ ಮಹಿಳೆಗೆ ಮೇಯರ್‌ ಸ್ಥಾನದ ಮೀಸಲಾತಿಯನ್ನು ಪ್ರಕಟಿಸಲಾಗಿದೆ. ಕಾಂಗ್ರೆಸ್‌ನ ಮಮ್ತಾಜ್‌ ಬೇಗಂ ಮತ್ತು ಉಪ ಮೇಯರ್‌ ಶಾಂತಕುಮಾರಿ ನಡುವೆ ಪೈಪೋಟಿ ಕಂಡುಬಂದಿದೆ. ಮಮ್ತಾಜ್‌ ಪರ ಹೆಚ್ಚಿನ ಒಲವು ವ್ಯಕ್ತವಾಗಿದೆ.

ಉಪ ಮೇಯರ್‌ ಸ್ಥಾನ ಸಾಮಾನ್ಯ ವರ್ಗಕ್ಕೆ ಲಭಿಸಿದೆ. ಹೀಗಾಗಿ ಸ್ಪರ್ಧೆ ಏರ್ಪಟ್ಟಿದೆ. ಎಂ.ಲಕ್ಷ್ಮಿನಾರಾಯಣ್‌, ಜಯರಾಂ, ಬಿ.ಟಿ.ಶ್ರೀನಿವಾಸ ಮೂರ್ತಿ, ವೆಂಕಟೇಶರೆಡ್ಡಿ ಅವರ ಹೆಸರುಗಳು ಸದ್ಯಕ್ಕೆ ಕೇಳಿ ಬರುತ್ತಿವೆ.

(ಇನ್ಫೋ ವಾರ್ತೆ)

ಮುಖಪುಟ / ಬೆಂಗಳೂರು ಡೈರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X