ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಲೂ ಪ್ರಸಾದ್‌ ‘ಹಾರ’ಗಯೆ, ನಿತೀಶ್‌ ಕೊರಳಿಗೆ ಬಿ‘ಹಾರ’

By Staff
|
Google Oneindia Kannada News

ಲಾಲೂ ಪ್ರಸಾದ್‌ ‘ಹಾರ’ಗಯೆ, ನಿತೀಶ್‌ ಕೊರಳಿಗೆ ಬಿ‘ಹಾರ’
ಬದಲಾವಣೆಗಾಗಿ ಮತದಾರ ನಮ್ಮನ್ನು ಬೆಂಬಲಿಸಿದ್ದಾನೆ - ನಿತೀಶ್‌

ನವದೆಹಲಿ : ಬಿಹಾರದಲ್ಲಿನ ಎನ್‌ಡಿಎ ಮೈತ್ರಿಕೂಟದ ದಿಗ್ವಿಜಯವನ್ನು, ಜನಶಕ್ತಿಗೆ ದಕ್ಕಿದ ಜಯ ಎಂದು ಮುಖ್ಯಮಂತ್ರಿ ಸ್ಥಾನದ ಅಭ್ಯರ್ಥಿ ನಿತೀಶ್‌ ಕುಮಾರ್‌ಬಣ್ಣಿಸಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಜನರ ವಿಶ್ವಾಸ ಹುಸಿಯಾಗದಂತೆ ಉತ್ತಮ ಆಡಳಿತ ನೀಡುವುದು ನಮ್ಮ ಮುಂದಿನ ಗುರಿ. ಪ್ರತಿಯಾಂದು ಜಾತಿ, ಸಮುದಾಯ ಬದಲಾವಣೆಗಾಗಿ ನಮ್ಮನ್ನು ಬೆಂಬಲಿಸಿದೆ ಎಂದರು.

ಅತಂತ್ರ ವಿಧಾನಸಭೆ ನಿರ್ಮಾಣವಾಗಲಿದೆ ಎಂಬ ಮತಗಟ್ಟೆಯ ಸಮೀಕ್ಷೆಗಳನ್ನು ಬಿಹಾರದ ಮತದಾರ ಹುಸಿಗೊಳಿಸಿದ್ದಾನೆ. ಅಲ್ಲದೇ ಲಾಲೂ-ರಾಬ್ಡಿ ದರ್ಬಾರಿಗೆ ಕಡಿವಾಣ ಹಾಕಿದ್ದಾನೆ.

ಬಿಹಾರದ ಮುಖ್ಯಮಂತ್ರಿಯಾಗಿ ನಿತೀಶ್‌ಕುಮಾರ್‌ ಅವರು ಗುರುವಾರ ಪ್ರಮಾಣವಚನ ಸ್ವೀಕರಿಸುವರು .

ಬಿಹಾರ ಚುನಾವಣೆ-2005 : ಪಕ್ಷಗಳ ಬಲಾಬಲ

ಒಟ್ಟು ಸ್ಥಾನಗಳು : 243

ಪ್ರಕಟಿತ ಫಲಿತಾಂಶ : 242

  • ಬಿಜೆಪಿ-ಜೆಡಿ(ಯು)-ಮೈತ್ರಿಪಕ್ಷಗಳು : 147
  • ಆರ್‌ಜೆಡಿ-ಕಾಂಗ್ರೆಸ್‌-ಮೈತ್ರಿ ಪಕ್ಷಗಳು : 64
  • ಸಮತಾ ಪಕ್ಷ -ಮೈತ್ರಿ ಪಕ್ಷಗಳು : 14
  • ಇತರೆ ಪಕ್ಷ -17
(ಏಜನ್ಸೀಸ್‌)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X