ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದ ಅಭಿವೃದ್ಧಿಗಾಗಿ ಕಲಾಂರ 11ಸೂತ್ರಗಳು

By Staff
|
Google Oneindia Kannada News

ಕರ್ನಾಟಕದ ಅಭಿವೃದ್ಧಿಗಾಗಿ ಕಲಾಂರ 11ಸೂತ್ರಗಳು
ಸುವರ್ಣ ಮಹೋತ್ಸವದ ಹಿನ್ನೆಲೆ ವಿಧಾನ ಮಂಡಲದ ವಿಶೇಷ ಜಂಟಿ ಅಧಿವೇಶನ

ಬೆಂಗಳೂರು : ರಾಷ್ಟ್ರಪತಿ ಡಾ.ಎ.ಪಿ.ಜೆ.ಅಬ್ದುಲ್‌ ಕಲಾಂ ಅವರು ಕರ್ನಾಟಕದ ಅಭಿವೃದ್ಧಿಗೆ ಹನ್ನೊಂದು ಅಂಶಗಳ ಸೂತ್ರವನ್ನು ಪ್ರಕಟಿಸಿದ್ದಾರೆ.

ಕರ್ನಾಟಕದ ಸುವರ್ಣ ಮಹೋತ್ಸವದ ಅಂಗವಾಗಿ ಏರ್ಪಡಿಸಲಾಗಿದ್ದ ರಾಜ್ಯ ವಿಧಾನಮಂಡಲದ ಜಂಟಿ ಸದನವನ್ನು ಉದ್ದೇಶಿಸಿ ಅವರು ಭಾನುವಾರ ಮಾಡಿದ ಐತಿಹಾಸಿಕ ಭಾಷಣ, ಕನ್ನಡ ನಾಡು-ನುಡಿ, ಸಂಸ್ಕೃತಿಯನ್ನು ಪ್ರತಿಬಿಂಬಿಸಿತು.

ನಾಲ್ಕು ವರ್ಷಗಳಲ್ಲಿ ಕರ್ನಾಟಕದ ಸಮಗ್ರ ಪರಿವರ್ತನೆಗೆ ಪೂರಕವಾದ ಕಲಾಂರ ಅಭಿವೃದ್ಧಿ ಸೂತ್ರಗಳು :

  • ಜವಳಿ

  • ಇಂಧನ (ಜೈವಿಕ ಇಂಧನ ಮತ್ತು ತ್ಯಾಜ್ಯ ಬಳಸಿ ವಿದ್ಯುತ್‌ ಉತ್ಪಾದನೆ) ತೋಟಗಾರಿಕೆ

  • ಆಹಾರ ಸಂಸ್ಕರಣೆ

  • ಜಲ ನಿರ್ವಹಣೆ

  • ಪ್ರವಾಸೋದ್ಯಮ

  • ಗುಣಮಟ್ಟದ ಶುಶ್ರೂಷಕಿಯರು ಮತ್ತು ತಂತ್ರಜ್ಞರ ಸಿದ್ಧಗೊಳಿಸುವುದು

  • ಜ್ಞಾನಾಧಾರಿತ ಉದ್ದಿಮೆಗಳ ಸ್ಥಾಪನೆಗೆ ಒತ್ತು

  • ಸುಸ್ಥಿರ ಅಭಿವೃದ್ಧಿಗಾಗಿ ಸಂಪರ್ಕ ಜಾಲ

  • ಗ್ರಾಮೀಣ ಸಮೃದ್ಧಿಗಾಗಿ ‘ಪುರ’ ಸ್ಥಾಪನೆ (ಗ್ರಾಮಗಳಿಗೂ ನಗರ ಪ್ರದೇಶದ ಸೌಲಭ್ಯಗಳನ್ನು ಒದಗಿಸುವುದು)

  • ರಾಜ್ಯದ 2ನೇ ದರ್ಜೆ ನಗರಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿ.
  • ಅಧಿವೇಶನದ ಮಿಂಚುಗಳು :

  • ಕಲಾಂ ಕನ್ನಡದಲ್ಲಿ ಭಾಷಣ ಆರಂಭಿಸಿ, ಇಂಗ್ಲಿಷ್‌ನಲ್ಲಿ ಮುಂದುವರೆಸಿದರು. ಮುಖ್ಯಮಂತ್ರಿ ಎನ್‌.ಧರ್ಮಸಿಂಗ್‌ ಕನ್ನಡ ಸಂಭ್ರಮ ಮರೆತು, ಇಂಗ್ಲಿಷ್‌ನಲ್ಲಿಯೇ ಭಾಷಣ ಬಿಗಿದರು.

  • ಕನ್ನಡದ ಕೂಗು ಹಾಕುತ್ತ ವಾಟಾಳ್‌ನಾಗರಾಜ್‌ ಸಭಾತ್ಯಾಗ ಮಾಡಿದರು. ವಿಧಾನ ಮಂಡಲದಲ್ಲಿ ಕಲಾಂ ಭಾಷಣ ಐತಿಹಾಸಿಕವೆಂದು ಗುರ್ತಿಸಲ್ಪಟ್ಟಿದೆ. ಈ ಹಿಂದೆ ರಾಧಾಕೃಷ್ಣನ್‌ ಭಾಷಣ ಮಾಡಿದ್ದರು.

  • ರಾಷ್ಟ್ರಪತಿ ತಮ್ಮ ಭಾಷಣದಲ್ಲಿ ರಾಜ್ಯದ ವಿಶೇಷಗಳಾದ ಮೈಸೂರುಪಾಕ್‌, ಮದ್ದೂರು ವಡೆ, ಬಿಸಿ ಬೇಳೆ ಬಾತ್‌, ಒಬ್ಬಟ್ಟನ್ನು ನೆನೆದರು.

  • ದೇವೇಗೌಡ, ಬಂಗಾರಪ್ಪ ಮತ್ತಿತರ ರಾಜಕೀಯ ಗಣ್ಯರು, ಡಾ.ರಾಜ್‌ಕುಮಾರ್‌, ವಿಷ್ಣುವರ್ಧನ್‌ ಮತ್ತಿತರ ಸಿನಿ ಪ್ರಮುಖರು ಗೈರು.

    (ಇನ್ಫೋ ವಾರ್ತೆ)

    ಮುಖಪುಟ / ಧರ್ಮ-ಕಾರಣ

    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X