ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನನ್ನ ಉಡುಪು-ನನ್ನಿಷ್ಟ , ನಿಮಗೇನು ಕಷ್ಟ -ಸಾನಿಯಾ

By Staff
|
Google Oneindia Kannada News

ನನ್ನ ಉಡುಪು-ನನ್ನಿಷ್ಟ , ನಿಮಗೇನು ಕಷ್ಟ -ಸಾನಿಯಾ
ನನ್ನ ಆಟದ ಬಗ್ಗೆ ಮಾತನಾಡಿ, ನನ್ನ ವೈಯಕ್ತಿಕ ಬದುಕಿನ ಬಗ್ಗೆ ನಿಮಗೆ ಯಾಕೆ ಕುತೂಹಲ? -ಸಾನಿಯಾ ಕಿಡಿ

ನವದೆಹಲಿ : ‘ನನ್ನ ಉಡುಪು ನನ್ನದು, ನಿಮಗೇನು ಕಷ್ಟ ’ ಎನ್ನುವ ಹೇಳಿಕೆಯ ಮೂಲಕ, ಧಾರ್ಮಿಕ ನಾಯಕರಿಗೆ ಸಾನಿಯಾ ಮಿರ್ಜಾ ತಿರುಗೇಟು ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಟೆನ್ನಿಸ್‌ ತಾರೆ ಸಾನಿಯಾ, ಈ ಹಿಂದೆ ನನಗೆ ಸ್ಕರ್ಟ್‌ ಧರಿಸದಂತೆ ಧಾರ್ಮಿಕ ನಾಯಕರು ತಾಕೀತು ಮಾಡಿದ್ದಾರೆ. ಆದರೆ ಟೆನಿಸ್‌ ಅಂಗಳದ ಹೊರಗೆ ನಾನು ಏನು ಮಾಡುತ್ತೇನೆ, ಏನು ತಿನ್ನುತ್ತೇನೆ, ಕುಡಿಯುತ್ತೇನೆ ಎಂಬುದಕ್ಕೆ ತಲೆಕೊಡುವುದು ಸಲ್ಲದು ಎಂದರು.

ನನ್ನ ವೈಯಕ್ತಿಕ ಬದುಕಿನ ಬಗ್ಗೆ ಚರ್ಚೆ ಬೇಡ. ಟೆನ್ನಿಸ್‌ಗೆ ಸಂಬಂಧಿಸಿದಂತೆ ಆಕ್ಷೇಪಣೆಗಳಿದ್ದರೆ ಹೇಳಲಿ, ನನ್ನ ಸ್ಕರ್ಟ್‌ ಆರಿಂಚಿರಲಿ ಅಥವಾ ಆರಡಿ ಇರಲಿ ಅದರಲ್ಲಿ ಯಾರೂ ಮೂಗು ತೂರಿಸಬಾರದು. ನಾನು ಆಟದಲ್ಲಿ ಗೆಲ್ಲುತ್ತಿರುವವರೆಗೆ ಜನ ನನ್ನ ಸ್ಕರ್ಟ್‌ ಅಳತೆ ಬಗ್ಗೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಸಾನಿಯಾ ಕಾರವಾಗಿ ಪ್ರತಿಕ್ರಿಯಿಸಿದ್ದಾರೆ.

(ಏಜನ್ಸೀಸ್‌)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X