ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುಟ್ಟ ಹೃದಯವನ್ನು ಹಿಸುಕಿಯೇ ಬಿಟ್ಟನಲ್ಲ ಜವರಾಯ!

By Staff
|
Google Oneindia Kannada News

ಪುಟ್ಟ ಹೃದಯವನ್ನು ಹಿಸುಕಿಯೇ ಬಿಟ್ಟನಲ್ಲ ಜವರಾಯ!
ಪಾಕ್‌ ಮೂಲದ ಫಾತಿಮಾಗೆ ಮರುಜೀವ ಸಿಗಲೇ ಇಲ್ಲ... ಈ ಸಾವು ನ್ಯಾಯವೇ?

ಬೆಂಗಳೂರು : ಮಕ್ಕಳಿಗಾಗಿ ಹೆತ್ತವರು ಎಷ್ಟೆಲ್ಲ ಮಾಡುತ್ತಾರೆ! ಮಕ್ಕಳ ಮುಖದಲ್ಲಿ ನಗೆ ಅರಳಿಸಲು ವೈರತ್ವವಿದ್ದರೂ, ಎರಡು ದೇಶಗಳು ಕೈಜೋಡಿಸುತ್ತವೆ! ಆದರೆ ಜವರಾಯನ ಆಟ ಮಾತ್ರ ನಿಲ್ಲೋದಿಲ್ಲ! -ಈ ಮಾತಿಗೆ ನಿದರ್ಶನ; ಫಾತಿಮಾಳ ಸಾವು.

ನಗರದ ನಾರಾಯಣ ಹೃದಯಾಲಯದಲ್ಲಿ ಶಸ್ತ್ರ ಚಿಕಿತ್ಸೆ ಮೂಲಕ ಮರುಜೀವ ಪಡೆದು, ತವರು ಸೇರಿದ್ದ ಪಾಕಿಸ್ತಾನದ ಬಿಮಿಷ್‌ ಫಾತಿಮಾ ಎಂಬ ಎರಡು ವರ್ಷದ ಮಗು ಲಾಹೋರ್‌ನಲ್ಲಿ ಮೃತಪಟ್ಟಿದೆ.

ಕಳೆದ ಜೂನ್‌ನಲ್ಲಿ ಫಾತಿಮಾಳನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗಿತ್ತು. ಶಸ್ತ್ರಚಿಕಿತ್ಸೆ ಫಲಕಾರಿಯಾದ ಕಾರಣ ಫಾತಿಮಾಳ ಫೋಷಕರು ಸಂತೋಷದಿಂದ ತವರಿಗೆ ಮರಳಿದ್ದರು. ಆದರೆ ಮತ್ತೊಮ್ಮೆ ಹೃದಯದ ತೊಂದರೆಗೆ ಸಿಲುಕಿದ ಫಾತಿಮಾ ಬುಧವಾರ ಕೊನೆ ಉಸಿರೆಳೆದಿದ್ದಾಳೆ.

ನಾರಾಯಣ ಹೃದಯಾಲಯದಲ್ಲಿ ಇದುವರೆಗೆ 276 ಪಾಕಿಸ್ತಾನಿ ಮಕ್ಕಳು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಆ ಮೂಲಕ ಮರು ಜೀವ ಪಡೆದಿರುವುದು ಒಂದು ವಿಶೇಷ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X