ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನವೆಂಬರ್‌ 23ರಿಂದ ಡೈರಿ ಉದ್ಯಮದ 34ನೇ ಸಭೆ

By Staff
|
Google Oneindia Kannada News

ನವೆಂಬರ್‌ 23ರಿಂದ ಡೈರಿ ಉದ್ಯಮದ 34ನೇ ಸಭೆ
ವೈಟ್‌ಫಿಲ್ಡ್‌ನಲ್ಲಿ 100ಕೋಟಿ ವೆಚ್ಚದಲ್ಲಿ ಹಾಲು ಸಂಗ್ರಹ ಘಟಕ ನಿರ್ಮಾಣ- ರೇವಣ್ಣ

ಬೆಂಗಳೂರು : ಡೈರಿ ಉದ್ಯಮದ 34ನೇ ಸಮ್ಮೇಳನ ನವೆಂಬರ್‌ 23ರಿಂದ 25ರವರೆಗೆ ನಡೆಯಲಿದೆ, ಎಂದು ಲೋಕೋಪಯೋಗಿ ಸಚಿವ ಹಾಗೂ ಕೆ.ಎಂ.ಎಫ್‌ ಅಧ್ಯಕ್ಷ ಎಚ್‌.ಡಿ.ರೇವಣ್ಣ ತಿಳಿಸಿದ್ದಾರೆ.

ಸೋಮವಾರ ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಸಮಾವೇಶ ನಗರದಲ್ಲೇ ನಡೆಯಲಿದ್ದು, 1200ಕ್ಕೂ ಅಧಿಕ ಗಣ್ಯರು ಭಾಗವಹಿಸಲಿದ್ದಾರೆ. ಹಲವಾರು ಜನ ದೇಶದ ವಿವಿಧೆಡೆಗಳಿಂದ ಬರುತ್ತಿದ್ದು, ಕೆಲವರು ಇತರ ದೇಶಗಳಿಂದಲೂ ಆಗಮಿಸುತ್ತಿದ್ದಾರೆ ಎಂದು ತಿಳಿಸಿದರು.

ಪ್ರಸ್ತುತ ದೇಶದ ಡೈರಿ ಉದ್ಯಮದ ಮುಂದಿರುವ ಸವಾಲುಗಳು, ಅದಕ್ಕೆ ಬೇಕಾಗುವ ಉಪಕರಣ ಕಾರ್ಯತಂತ್ರಗಳ ಕುರಿತು ಸಭೆಯಲ್ಲಿ ಚರ್ಚಿಸಲಾಗುವುದು. ದೇಶೀಯ ಮತ್ತು ಜಾಗತಿಕ ಮಾರುಕಟ್ಟೆ ಹಿನ್ನೆಲೆಯಲ್ಲಿ ಈ ಸಮಾವೇಶಕ್ಕೆ ಹೆಚ್ಚಿನ ಮಹತ್ವ ಇದೆ ಎಂದು ಹೇಳಿದರು.

ನಗರದ ಡೈರಿ ಹಾಗೂ ಕೋಲಾರ ಡೈರಿಗಳನ್ನು ವಿಸ್ತರಿಸಲಾಗುವುದು. 75ಕೋಟಿ ರೂಪಾಯಿ ವೆಚ್ಚದಲ್ಲಿ , ಚಾಮರಾಜನಗರದಲ್ಲಿ ಹೊಸ ಸ್ಥಾವರವನ್ನು ಸ್ಥಾಪಿಸಲಾಗುವುದು ಎಂದು ವಿವರಿಸಿದರು.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X