ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೆಕ್ಕದಲ್ಲಿ ನಂಬರ್‌ ಒನ್‌ : ಅನಿವಾಸಿ ಭಾರತೀಯನ ಸಾಧನೆ

By Staff
|
Google Oneindia Kannada News

ಲೆಕ್ಕದಲ್ಲಿ ನಂಬರ್‌ ಒನ್‌ : ಅನಿವಾಸಿ ಭಾರತೀಯನ ಸಾಧನೆ
ರಾಷ್ಟ್ರಪತಿ ಪದಕದ ಗೌರವ, ಏಳು ವರ್ಷಗಳವರೆಗೆ ಸ್ಕಾಲರ್‌ಶಿಪ್‌...

ಪೋರ್ಟ್‌ ಆಫ್‌ ಸ್ಪೇನ್‌(ಟ್ರಿನಿಡ್ಯಾಡ್‌) : ಅಮ್ರಿಕ್‌ಸಿಂಗ್‌ ಕೊಚಾರ್‌ ಎಂಬ ಭಾರತೀಯ ಮೂಲದ ಟ್ರಿನಿಡ್ಯಾಡ್‌ ವಿದ್ಯಾರ್ಥಿ, ಕೇಂಬ್ರಿಜ್‌ ಯೂನಿವರ್ಸಿಟಿ ಅಂತರಾಷ್ಟ್ರೀಯ ಪರೀಕ್ಷೆಯಲ್ಲಿ ಗಣಿತ ವಿಷಯದಲ್ಲಿ ಗರಿಷ್ಠ ಅಂಕ ಪಡೆದಿದ್ದಾರೆ.

ಟ್ರಿನಿಡ್ಯಾಡ್‌ನ ತುನಾಪುನಾದಲ್ಲಿರುವ ಹಿಲ್‌ವ್ಯೂ ಕಾಲೇಜು ವಿದ್ಯಾರ್ಥಿಯಾಗಿರುವ ಇವರು, ಅಡ್ವಾನ್ಸ್‌ಡ್‌-ಲೆವೆಲ್‌ ಕೇಂಬ್ರಿಜ್‌ ಯೂನಿವರ್ಸಿಟಿ ಇಂಟರ್‌ನ್ಯಾಷನಲ್‌ ಪರೀಕ್ಷೆಯಲ್ಲಿ ಗಣಿತ ವಿಷಯದಲ್ಲಿ ಪ್ರಥಮ ಸ್ಥಾನ ಪಡೆದುದಲ್ಲದೆ, ಭೌತಶಾಸ್ತ್ರದಲ್ಲಿ ನಾಲ್ಕನೇ ಸ್ಥಾನ ದಕ್ಕಿಸಿಕೊಂಡಿದ್ದಾರೆ.

ಈ ಸಾಧನೆಗಾಗಿ ಅವರಿಗೆ ರಾಷ್ಟ್ರಪತಿ ಪದಕದ ಗೌರವವೂ ಲಭಿಸಿದೆ. ಅಲ್ಲದೆ ರಾಷ್ಟ್ರೀಯ ಸ್ಕಾಲರ್‌ಶಿಪ್‌ಗೂ ಆಯ್ಕೆಯಾಗಿದ್ದಾರೆ. ಪಿಎಚ್‌ಡಿ ವಿದ್ಯಾರ್ಥಿಗೆ ಕೊಡಲಾಗುವ ಮೊತ್ತವನ್ನೇ ನೀಡಲಾಗುತ್ತಿದ್ದು, ಇದು ಮುಂದಿನ ಏಳು ವರ್ಷಗಳವರೆಗೆ ಲಭ್ಯವಾಗಲಿದೆ.

ಅಮ್ರಿಕ್‌ ತಂದೆ ಗುರುಮೋಹನ್‌ ಕೊಚಾರ್‌, 30 ವರ್ಷಗಳ ಹಿಂದೆ ಭಾರತದಿಂದ ಅಮೆರಿಕಾಗೆ ವಲಸೆ ಬಂದವರು. ಆನಂತರ ಟ್ರಿನಿಡ್ಯಾಡ್‌ಗೆ ಬಂದು ನೆಲೆಸಿದ್ದಾರೆ. ಪ್ರಸ್ತುತ ಗುರುಮೋಹನ್‌ ಸೇಂಟ್‌ ಆಗಸ್ಟಿನ್‌ ಕ್ಯಾಂಪಸ್‌ ಉಪಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಕಾಲೇಜು ವೆಸ್ಟ್‌ ಇಂಡೀಸ್‌ ವಿಶ್ವವಿದ್ಯಾಲಯಕ್ಕೆ ಒಳಪಟ್ಟಿದೆ.

ಇವರ ಹಿರಿಯ ಮಗಳಾದ ಅಮೃತಾ ಕೊಚಾರ್‌ ಕೂಡ ಪ್ರತಿಭಾವಂತೆಯಾಗಿದ್ದು, 1997ರಲ್ಲಿ ಹೆಚ್ಚುವರಿ ರಾಷ್ಟ್ರೀಯ ಸ್ಕಾಲರ್‌ಶಿಪ್‌ ಪಡೆದವರು. ಇನ್ನೊಬ್ಬ ಮಗಳಾದ ಆರತಿ ಫ್ಲೋರಿಡಾ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡುತ್ತಿದ್ದಾರೆ.

(ಏಜನ್ಸೀಸ್‌)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X