ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನವವಧುವಾಗಲಿದ್ದಾಳೆ... ಕಬ್ಬನ್‌ ಪಾರ್ಕ್‌ ಎಂಬ ಬೆಡಗಿ

By Super
|
Google Oneindia Kannada News

ಬೆಂಗಳೂರು : ಕಬ್ಬನ್‌ ಪಾರ್ಕ್‌ ನವೀಕರಣಕ್ಕಾಗಿ ಯೋಜನೆಯಾಂದನ್ನ್ನು ರೂಪಿಸಲಾಗಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭವಾಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಬ್ಬನ್‌ ಪಾರ್ಕ್‌ ತೋಟಗಾರಿಕೆ ವಿಭಾಗದ ಉಪನಿರ್ದೇಶಕ ವೇಣುಗೋಪಾಲ್‌, ಭಾನುವಾರ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ಬಾಲಭವನದ ಹಿಂಭಾಗದಲ್ಲಿರುವ ರಾಣಿ ಉದ್ಯಾನವನ, ಇಂದಿರಾಗಾಂಧಿ ಪ್ರಿಯದರ್ಶಿನಿ ಗ್ರಂಥಾಲಯದ ಸುತ್ತಮುತ್ತಲಿನ ಪ್ರದೇಶ ಹಾಗೂ ಕಸ್ತೂರ್ಬಾ ರಸ್ತೆಗೆ ಹೊಂದಿಕೊಂಡಿರುವ ಉದ್ಯಾನವನಕ್ಕೂ ಆದ್ಯತೆ ನೀಡುತ್ತಿದೆ ಎಂದು ಹೇಳಿದರು.

ಇತ್ತೀಚೆಗಷ್ಟೇ ಕೊಳಚೆ ನೀರು ಶುದ್ಧೀಕರಣ ಘಟಕ ಸ್ಥಾಪಿಸಲಾಗಿದ್ದು, ಈ ಘಟಕದ ನೀರು ಬಳಸಿ ಉದ್ಯಾನಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರುಣಿಸಬಹುದಾಗಿದೆ. ಅಲ್ಲದೆ, ಶುದ್ಧೀಕರಣಗೊಂಡ ನೀರು ಬಳಸಿ ಪಾರ್ಕ್‌ನ ನಾನಾ ಭಾಗಗಳಲ್ಲಿ ಕಾರಂಜಿ ಸ್ಥಾಪಿಸಲಾಗುವುದು. ನವೀಕರಣ ಕಾರ್ಯದಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವೂ ಕೈ ಜೋಡಿಸಿದೆ ಎಂದು ವಿವರಿಸಿದರು.(ಇನ್ಫೋ ವಾರ್ತೆ)

English summary
A new plan has been ready to renovate the Cubbon Park in Bangalore. The construction work will begin soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X