ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನವೆಂಬರ್‌ 17ರಿಂದ ಐದು ದಿನಗಳ ಚಿಣ್ಣರ ಹಬ್ಬ...

By Staff
|
Google Oneindia Kannada News

ನವೆಂಬರ್‌ 17ರಿಂದ ಐದು ದಿನಗಳ ಚಿಣ್ಣರ ಹಬ್ಬ...
ದೇಶದ ಸಂಸ್ಕೃತಿ ಪರಿಚಯಿಸುವ ಉದ್ದೇಶ, 50ಸಾವಿರ ಮಕ್ಕಳು ಪಾಲ್ಗೊಳ್ಳುವ ನಿರೀಕ್ಷೆ

ಬೆಂಗಳೂರು : ನಗರದಲ್ಲಿ ನವೆಂಬರ್‌ 17ರಿಂದ 20ರವರೆಗೆ‘ಚಿಣ್ಣರ ಹಬ್ಬ’ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ವಸ್ತು ಪ್ರದರ್ಶನ ನಡೆಯಲಿದೆ.

ಕಾರ್ಯಕ್ರಮವು ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ. ಚಿಣ್ಣರ ಹಬ್ಬದಲ್ಲಿ ಮಕ್ಕಳ ಅಗತ್ಯ ವಸ್ತುಗಳು(ಆಟ-ಪಾಠ)ಒಂದೇ ಮಳಿಗೆಯಲ್ಲಿ ಲಭ್ಯವಾಗಲಿವೆ. ಅಲ್ಲದೆ ಪ್ರತಿ ದಿನ, ಡೊಳ್ಳು ಕುಣಿತ, ಹುಲಿ ವೇಷ, ಯಕ್ಷಗಾನ, ಜಾನಪದ ನೃತ್ಯ, ಗಾಯನ ಮೊದಲಾದ ಕಾರ್ಯಕ್ರಮಗಳೂ ನಡೆಯಲಿದ್ದು, ಇದರಲ್ಲಿ ವಿವಿಧ ಶಾಲೆಗಳ 50ಸಾವಿರ ಮಕ್ಕಳು ಪಾಲ್ಗೊಳ್ಳುವ ನಿರೀಕ್ಷೆ ಇದೆ.

ದೇಶದ ಸಂಸ್ಕೃತಿ ಪರಂಪರೆಯನ್ನು ಇಂದಿನ ಯುವ ಪೀಳಿಗೆಗೆ ಪರಿಚಯಿಸುವ ಮೂಲ ಉದ್ದೇಶದಿಂದ ಈ ಕಾರ್ಯಕ್ರಮ ನಡೆಸಲಾಗುತ್ತಿದೆ. ಚಿಣ್ಣರಿಗಾಗಿ ‘ನಂದಿನಿ ಚಿಣ್ಣರ ಹಬ್ಬ ಚಿತ್ರ ಬಿಡಿಸುವ ಸ್ಪರ್ಧೆ’ ಮತ್ತು ‘ಬುದ್ಧಿ ಸಾಮರ್ಥ್ಯ ಪರೀಕ್ಷಿಸುವ ಸ್ಪರ್ಧೆ’ ನಡೆಯಲಿವೆ.

ಚಿಣ್ಣರ ಹಬ್ಬಕ್ಕೆ ಪೂರ್ವಿಯಾಗಿ ನಗರದ 75ಶಾಲೆಗಳಲ್ಲಿ ಮನರಂಜನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. 70ಕ್ಕೂ ಹೆಚ್ಚು ಕಂಪನಿಗಳು ಮಾರಾಟ ಮಳಿಗೆಯಲ್ಲಿ ಪಾಲ್ಗೊಳ್ಳಲಿವೆ. ಹಬ್ಬದ ಉದ್ಘಾಟನೆಯ ದಿನ ಒಂದು ಲಕ್ಷ ಬಲೂನುಗಳನ್ನು ಹಾರಿಬಿಡಲಾಗುವುದು. ಮೇಳದಲ್ಲಿ ಪಾಲ್ಗೊಳ್ಳುವ ಮಕ್ಕಳಿಗೆ ತಲಾ 20ರೂ ಹಾಗೂ ಪಾಲಕರಿಗೆ ತಲಾ 30ರೂ ಶುಲ್ಕವನ್ನು ನಿಗದಿಪಡಿಸಲಾಗಿದೆ.

(ಇನ್ಫೋ ವಾರ್ತೆ)

ಮುಖಪುಟ / ಬೆಂಗಳೂರು ಡೈರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X