ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮರಾಠಿ‘ಮೋರೆ’ಗೆ ಮಸಿ : ಶನಿವಾರ ಬೆಳಗಾವಿ ಬಂದ್‌

By Staff
|
Google Oneindia Kannada News

ಮರಾಠಿ‘ಮೋರೆ’ಗೆ ಮಸಿ : ಶನಿವಾರ ಬೆಳಗಾವಿ ಬಂದ್‌
ಕರ್ನಾಟಕ ರಕ್ಷಣಾ ವೇದಿಕೆ ದಾಳಿಗೆ ಮೆಚ್ಚುಗೆ ಮತ್ತು ಟೀಕೆಗಳ ಮಹಾಪೂರ

ಬೆಂಗಳೂರು : ಮಹಾರಾಷ್ಟ್ರ ಪರ ಧೋರಣೆಗಳನ್ನು ವ್ಯಕ್ತಪಡಿಸಿದ್ದ ಬೆಳಗಾವಿ ಮೇಯರ್‌ ವಿಜಯ ಪಾಂಡುರಂಗ ಮೋರೆ ಅವರ ಮೇಲೆ, ಕಪ್ಪು ಬಣ್ಣ ಸುರಿದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ತಮ್ಮ ಅಸಮಾಧಾನವನ್ನು ಪ್ರದರ್ಶಿಸಿದ್ದಾರೆ.

ಶುಕ್ರವಾರ ಸಂಜೆ ನಡೆದ ಈ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಮಹಾರಾಷ್ಟ್ರ ಏಕೀಕರಣ ಸಮಿತಿ ಶನಿವಾರ ಬೆಳಗಾವಿ ಜಿಲ್ಲಾ ಬಂದ್‌ಗೆ ಕರೆ ನೀಡಿದೆ. ಪ್ರಸ್ತುತ ಬೆಳಗಾವಿಯಲ್ಲಿ ಉದ್ರಿಕ್ತ ವಾತಾವರಣ ಉಂಟಾಗಿತ್ತು, ಸಣ್ಣಪುಟ್ಟ ಕಲ್ಲು ತೂರಾಟದ ಪ್ರಕರಣಗಳು ವರದಿಯಾಗಿವೆ.

ಘಟನೆಯ ಹಿನ್ನೆಲೆ : ಬೆಳಗಾವಿ ಸೇರಿದಂತೆ ಕೆಲ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂಬ ವಿವಾದಾತ್ಮಕ ನಿರ್ಣಯವನ್ನು ಇಲ್ಲಿನ ಮಹಾನಗರ ಪಾಲಿಕೆ ಮಂಡಿಸಿತ್ತು. ಪಾಲಿಕೆ ಮತ್ತು ಮೇಯರ್‌ ವಿಜಯ ಮೋರೆ ಅವರ ಧೋರಣೆ ಬಗೆಗೆ ರಾಜ್ಯದೆಲ್ಲೆಡೆಯಿಂದ ಖಂಡನೆಗಳು ವ್ಯಕ್ತವಾಗಿದ್ದವು.

ಈ ಮಧ್ಯೆ ಬೆಳಗಾವಿ ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿದಂತೆ ಬೆಂಗಳೂರಿನ ಶಾಸಕರ ಭವನಕ್ಕೆ ಬಂದಿದ್ದ ಮೋರೆ ಮತ್ತು ಅವರೊಂದಿಗಿದ್ದ ಮಾಜಿ ಮೇಯರ್‌ ಶಿವಾಜಿ ಸುಂಠಕರ್‌ ಮತ್ತು ಮಾಜಿ ಶಾಸಕ ಬಿ.ಐ.ಪಾಟೀಲ್‌ ಮೇಲೆ ವೇದಿಕೆಯಿಂದ ದಾಳಿ ನಡೆದಿದೆ.

ಮೋರೆ ಅವರ ಬಟ್ಟೆ ಹರಿದು, ಅರೆ ಬೆತ್ತಲೆಗೊಳಿಸಿ, ಮಸಿ ಬಳಿದು ತಮ್ಮ ಆಕ್ರೋಶವನ್ನು ವೇದಿಕೆ ಕಾರ್ಯಕರ್ತರು ವ್ಯಕ್ತಪಡಿಸಿದ್ದಾರೆ.

ದಾಳಿಯನ್ನು ವೇದಿಕೆ ಮತ್ತು ಕನ್ನಡ ಪರ ಸಂಘಟನೆಗಳು ಸಮರ್ಥಿಸಿಕೊಂಡಿದೆ. ಮತ್ತೊಂದು ಕಡೆ ಪೊಲೀಸರು, ಈ ಪ್ರಕರಣದಲ್ಲಿ ಪಾಲ್ಗೊಂಡಿರುವ ಆರೋಪಿಗಳ ಬಂಧನಕ್ಕೆ ಮುಂದಾಗಿದ್ದಾರೆ.

ಖಂಡನೆ : ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಡಾ.ಹಂಪ ನಾಗರಾಜಯ್ಯಘಟನೆಯನ್ನು ಖಂಡಿಸಿದ್ದಾರೆ. ಇದು ಅವಿವೇಕದ ಪರಮಾವಧಿ, ಇಂತಹ ಘಟನೆಗಳಿಂದ ಮಹಾರಾಷ್ಟ್ರದಲ್ಲಿರುವ 19 ಲಕ್ಷ ಕನ್ನಡಿಗರಿಗೆ ತೊಂದರೆಯಾಗುವ ಸಾಧ್ಯತೆಗಳಿವೆ ಎಂದಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X