ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮ್ಮನೋ ಗುಮ್ಮನೋ? 3 ಹೆಣ್ಣು ಮಕ್ಕಳ ಕಗ್ಗೊಲೆ

By Super
|
Google Oneindia Kannada News

ಅಮ್ಮನೋ ಗುಮ್ಮನೋ? 3 ಹೆಣ್ಣು ಮಕ್ಕಳ ಕಗ್ಗೊಲೆ ಶಿರಾ ತಾಲೂಕಿನಲ್ಲೊಂದು ದುರಂತ ಕಥೆ, ಬಡವರ ಕಷ್ಟಕ್ಕೆ ಹೀಗೊಂದು ತಿರುವು!

ತುಮಕೂರು : ಬಡತನ ಮತ್ತು ಅನಾರೋಗ್ಯದ ಸುಳಿಗೆ ಸಿಲುಕಿದ ಮಹಿಳೆಯಾಬ್ಬಳು ತನ್ನ ಮೂರು ಮಕ್ಕಳನ್ನು ಜಲಸಮಾಧಿ ಮಾಡಿ, ತಾನೂ ಆತ್ಮಹತ್ಯೆಗೆ ವಿಫಲಯತ್ನ ನಡೆಸಿದ ಪ್ರಕರಣ ತುಮಕೂರು ಜಿಲ್ಲೆಯ ಶಿರಾ ತಾಲೂಕಿನಿಂದ ವರದಿಯಾಗಿದೆ.

ಮಕ್ಕಳನ್ನು ಕೆರೆಗೆ ತಳ್ಳಿದ ಮಹಾತಾಯಿ(?)ಯನ್ನು ಗೌರಮ್ಮ(35) ಎಂದು ಗುರ್ತಿಸಲಾಗಿದೆ. ಕೆರೆಯಲ್ಲಿ ಸಾಕಷ್ಟು ನೀರಿಲ್ಲದ ಕಾರಣ ಗೌರಮ್ಮ ಅವರ ಆತ್ಮಹತ್ಯೆ ಯತ್ನ ವಿಫಲಗೊಂಡಿದ್ದು, ಈಗ ಪೊಲೀಸರ ಅತಿಥಿಯಾಗಿದ್ದಾರೆ.

ಶಿರಾ ತಾಲೂಕಿನ ಲಕ್ಷ್ಮೀಸಾಗರದ ಗೌರಮ್ಮನಿಗೆ ಸಾಲಾಗಿ ನಾಲ್ಕು ಜನ ಹೆಣ್ಣುಮಕ್ಕಳು. ಇದರಿಂದ ಕುಗ್ಗಿದ್ದ ಆಕೆಗೆ ಆಸ್ತಮಾ ಕಾಟ ಬೇರೆ. ಬಡತನದ ಬೇಗೆ ಸಹಾ ಜೊತೆಯಲ್ಲಿತ್ತು. ಇವು ಸಾಯುವುದಕ್ಕೆ ಒಂದು ಕಾರಣ. ಇತ್ತೀಚೆಗೆ ಆಕೆ ಮಾನಸಿಕವಾಗಿ ಕುಗ್ಗಿಹೋಗಿದ್ದಳು. ಎಲ್ಲ ಕಷ್ಟ ಮತ್ತು ನೋವುಗಳಿಗೆ ವಿದಾಯ ಹೇಳಲು ಆಕೆ ನಿರ್ಧರಿಸಿ, ಈ ದುರಂತವನ್ನು ಸೃಷ್ಟಿಸಿದ್ದಾಳೆ.

ಹರೇನಹಳ್ಳಿ ಕೆರೆಯ ಬಳಿಗೆ ಯಾವುದೋ ನೆಪ ಹೇಳಿ ಮಕ್ಕಳನ್ನು ಕರೆತಂದ ಗೌರಮ್ಮ, ತನ್ನ ಮಕ್ಕಳಾದ ಸುಷ್ಮಾ(9), ಕವನ(6) ಮತ್ತು ಹತ್ತು ತಿಂಗಳ ಕೂಸನ್ನು ಕೆರೆಗೆ ತಳ್ಳಿದಳು. ತವರಿನಲ್ಲಿದ್ದ ಆಕೆಯ ಹಿರಿಯ ಮಗಳು ಅಪಾಯದಿಂದ ಪಾರಾಗಿದ್ದಾಳೆ.

ಕೆರೆಯಲ್ಲಿದ್ದ ಕಡಿಮೆ ನೀರಿನಲ್ಲಿ ಸಾಯಲು ಸಾಧ್ಯವಾಗದೆಯೋ ಅಥವಾ ಸಾವಿಗೆ ಹೆದರಿಯೋ ಗೌರಮ್ಮ ಬೆಳಗ್ಗೆಯವರೆಗೆ ಕೆರೆಯ ದಂಡೆಯಲ್ಲಿ ಕುಳಿತೇ ಇದ್ದಳು. ಯಾಕೋ?
ಶಿರಾ ಸಿಪಿಐ ಮರಿಯಪ್ಪ ಪ್ರಕರಣ ದಾಖಲಿಸಿದ್ದಾರೆ.
(ಇನ್ಫೋ ವಾರ್ತೆ)

English summary
Fed up with poverty and ill health, a mother of four pushed three of her daughters into a tank and made a vain bid to commit suicide at Harenahalli in Sira Taluk.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X