• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹೋಟೆಲ್‌ ಟೇಬಲ್‌ನಿಂದ ನ್ಯಾಯಪೀಠದವರೆಗೆ, ನಾಯಕ್‌ ಸಾಧನೆ

By Staff
|

ಹೋಟೆಲ್‌ ಟೇಬಲ್‌ನಿಂದ ನ್ಯಾಯಪೀಠದವರೆಗೆ, ನಾಯಕ್‌ ಸಾಧನೆ

ಬಡತನದಲ್ಲಿ ಅರಳಿದ ಪ್ರತಿಭೆ...ಕನ್ನಡಿಗ ನಾಯಕ್‌ ಛತ್ತೀಸ್‌ಗಡದ ಮುಖ್ಯನ್ಯಾಯಮೂರ್ತಿ

ಬೆಂಗಳೂರು : ಒಂದು ಕಾಲದಲ್ಲಿ ಹೋಟೆಲ್‌ನಲ್ಲಿ ಪಾತ್ರೆ ತೊಳೆಯುತ್ತಿದ್ದ ಬಾಲಕ, ಇಂದು ಛತ್ತೀಸ್‌ಗಡದ ಮುಖ್ಯ ನ್ಯಾಯಮೂರ್ತಿಯಾಗಿ ಆಯ್ಕೆಯಾಗಿದ್ದಾರೆ.

ರಾಜ್ಯ ಹೈಕೋರ್ಟ್‌ನ ನ್ಯಾಯಮೂರ್ತಿ ಕನ್ನಡಿಗ ಎಸ್‌.ಆರ್‌.ನಾಯಕ್‌ ಈಗ ಛತ್ತೀಸ್‌ಗಡದ ಮುಖ್ಯನ್ಯಾಯಮೂರ್ತಿಯಾಗಿ ಆಯ್ಕೆಯಾಗಿದ್ದು, ನ.17ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

1945ರ ಜನವರಿ 1ರಂದು, ಉತ್ತರ ಕನ್ನಡ ಜಿಲ್ಲೆ ನಾಡಮಸ್ಕೇರಿ ಗ್ರಾಮದಲ್ಲಿ ಜನಿಸಿದ ನಾಯಕ್‌, ದಾಂಡೇಲಿಯಲ್ಲಿ ಪ್ರಾಥಮಿಕ ಶಾಲೆ ಕಲಿತವರು. ಶಾಲಾದಿನಗಳಲ್ಲಿ ಪ್ರತಿಭಾವಂತರಾಗಿದ್ದ ಅವರು, 7ನೇ ತರಗತಿಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದರು. ಮುಂದೆ ಓದಲಾಗಷ್ಟು ಬಡತನವಿದ್ದುದರಿಂದ, ಓದು ನಿಲ್ಲಿಸಿ ಹೋಟಲೊಂದರಲ್ಲಿ ಪಾತ್ರೆ ತೊಳೆಯುವ ಕೆಲಸ ಮಾಡಿದರು.

ಇವರ ಜಾಣತನವನ್ನು ಕಂಡ ಸಮಾಜ ಸೇವಕರೊಬ್ಬರು ಶಿಕ್ಷಣ ಮುಂದುವರಿಸಲು ನೆರವಾದರು. ಸತತ ಪರಿಶ್ರಮದಿಂದ ಅಧ್ಯಯನ ಮಾಡಿದ ಅವರು, ಬಿ.ಎಸ್ಸಿ., ಎಲ್‌ಎಲ್‌ಬಿ ಮತ್ತು ಎಲ್‌ಎಲ್‌ಎಮ್‌ ಪದವಿಗಳನ್ನು ಪಡೆದರು.

1974ರಲ್ಲಿ ವಕೀಲ ವೃತ್ತಿ ಆರಂಭಿಸಿದ ಅವರು ನ್ಯಾಯಾಂಗದಲ್ಲಿ ಪ್ರಮುಖ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಈಗ ಅವರನ್ನು ಅರಸಿಕೊಂಡು ಬಂದಿರುವ ಮುಖ್ಯನ್ಯಾಯಮೂರ್ತಿ ಪದವಿ ಸಾಧನೆಯ ಕಿರೀಟಕ್ಕೆ ಮತ್ತೊಂದು ಮಣಿಯನ್ನು ಅಲಂಕರಿಸಿದಂತಾಗಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more