ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಹ್ಯಾಕಾಶದಲ್ಲಿ ಮಾನವನ ನೆಲೆ : ಶಂಕರ್‌ ವಿಶ್ವಾಸ

By Staff
|
Google Oneindia Kannada News

ಬಾಹ್ಯಾಕಾಶದಲ್ಲಿ ಮಾನವನ ನೆಲೆ : ಶಂಕರ್‌ ವಿಶ್ವಾಸ
ಕನ್ನಡ ರಾಜೋತ್ಸವ ಸಮಿತಿಯಿಂದ ಕನ್ನಡ ತಾಂತ್ರಿಕ ಸಂಕಿರಣ-- -2005

ಬೆಂಗಳೂರು : ಮಾನವ ಕಳೆದ ಶತಮಾನದಲ್ಲೇ ಭೂಮಿತಿಯನ್ನು ದಾಟಿದ್ದು, ಈ ಶತಮಾನ ಮಾನವ ಬಾಹ್ಯಾಕಾಶದಲ್ಲಿ ವಾಸಿಸುವುದಕ್ಕೆ ಸಾಕ್ಷಿಯಾಗಲಿದೆ, ಎಂದು ಇಸ್ರೋ ನಿರ್ದೇಶಕ ಡಾ.ಕೆ.ಎನ್‌.ಶಂಕರ ಅಭಿಪ್ರಾಯಪಟ್ಟಿದ್ದಾರೆ.

ನಗರದಲ್ಲಿ ನಡೆದ ಕನ್ನಡ ತಾಂತ್ರಿಕ ಸಂಕಿರಣ-2005ರಲ್ಲಿ ಭಾಗವಹಿಸಿದ್ದ ಅವರು ಮಾತನಾಡುತ್ತ, ಮಾನವ ಕಳೆದ ಶತಮಾನದಲ್ಲೇ ಭೂಮಿಯಾಚೆಗೆ ಸಂಚಾರ ನಡೆಸಿದ್ದಾನೆ. ಸದ್ಯಕ್ಕೆ ಮಾನವ ಭೂಮಿ ಬಿಟ್ಟು ಬೇರೆಡೆ ಬದುಕುವ ಪ್ರಯತ್ಮದಲ್ಲಿದ್ದಾನೆ ಎಂದರು.

ಈ ನಿಟ್ಟಿನಲ್ಲಿ ಸಂಶೋಧನೆ ಇನ್ನೂ ಮುಂದುವರಿದಿದೆ ಮತ್ತು ಈಗಾಗಲೇ ಭಾರೀ ತಾಂತ್ರಿಕ ಬೆಳವಣಿಗೆಗಳನ್ನು ಸಾಧಿಸಲಾಗಿದೆ. ಹಾಗಾಗಿ ಈ ಶತಮಾನ ಮಾನವ ಅನ್ಯಗ್ರಹಗಳಲ್ಲಿ ವಾಸಿಸುವುದಕ್ಕೆ ಸಾಕ್ಷಿಯಾಗಲಿದೆ ಎಂದು ಹೇಳಿದರು.

ಇ.ಜನಾರ್ಧನ ಅವರು, ಮಾನವ ಸಹಿತ ಬಾಹ್ಯಾಕಾಶಯಾನಕ್ಕೆ ತಾಂತ್ರಿಕ ಸವಾಲುಗಳು ಎಂಬ ವಿಷಯದ ಕುರಿತು ಮಾತನಾಡಿದರು.

ಕನ್ನಡ ರಾಜ್ಯೋತ್ಸವ ಸಮಿತಿ ಈ ಕಾರ್ಯಕ್ರಮ ಹಮ್ಮಿಕೊಂಡಿತ್ತು.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X