ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯಕ್ಕೆ ಅಮೆರಿಕಾ ರಾಜಕೀಯ ಯುವ ನೇತಾರರ ಭೇಟಿ

By Staff
|
Google Oneindia Kannada News

ರಾಜ್ಯಕ್ಕೆ ಅಮೆರಿಕಾ ರಾಜಕೀಯ ಯುವ ನೇತಾರರ ಭೇಟಿ
ರಾಜಕೀಯ ಪ್ರಜ್ಞೆ ನೀಡುವ ವಿಶಿಷ್ಟ ಕಾರ್ಯಕ್ರಮಕ್ಕೆ ಕಾಂಗ್ರೆಸ್‌, ಬಿಜೆಪಿ, ಡಿಎಂಕೆ ಸಹಪ್ರಾಯೋಜಕತ್ವ...

ಬೆಂಗಳೂರು : ಅಮೆರಿಕಾ ದೇಶದ ಯುವ ರಾಜಕೀಯ ನೇತಾರರ ನಿಯೋಗವೊಂದು, ನವೆಂಬರ್‌ 11 ಮತ್ತು 12ರಂದು ರಾಜ್ಯಕ್ಕೆ ಭೇಟಿ ನೀಡಲಿದೆ.

ನಿಯೋಗವು ಬೆಂಗಳೂರು ಹಾಗೂ ಮೈಸೂರು ನಗರಗಳಿಗೆ ಕ್ರಮವಾಗಿ ನವೆಂಬರ್‌ 11 ಹಾಗೂ 12ರಂದು ಭೇಟಿ ನೀಡಲಿದೆ. ಅಮೆರಿಕನ್‌ ಕೌನ್ಸಿಲ್‌ ಆಫ್‌ ಯಂಗ್‌ ಪೊಲಿಟಿಕಲ್‌ ಲೀಡರ್ಸ್‌ (ಎಸಿವೈಪಿಎಲ್‌) ಸಂಸ್ಥೆಯು ಪಕ್ಷಾತೀತ ಯುವ ನಾಯಕರ ಪರಸ್ಪರ ವಿನಿಮಯ ಕಾರ್ಯಕ್ರಮದಡಿಯಲ್ಲಿ ಈ ಭೇಟಿ ನಡೆಯುತ್ತಿದೆ.

ಓಹಿಯೋ, ವ್ಯೊಮಿಂಗ್‌ ಹಾಗೂ ಉತ್ತರ ಡಕೋಟಾ ರಾಜ್ಯಗಳ ಶಾಸಕರೂ ಸೇರಿದಂತೆ ಒಟ್ಟು ಎಂಟು ಯುವ ರಾಜಕೀಯ ನೇತಾರರು ಈ ದ್ವಿಪಕ್ಷೀಯ ನಿಯೋಗದಲ್ಲಿದ್ದಾರೆ.

ಎಸಿವೈಪಿಎಲ್‌ ಸಂಸ್ಥೆಯ ಈ ಹಿಂದಿನ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದ ರಾಷ್ಟ್ರೀಯ ಕಾಂಗ್ರೆಸ್‌ ಪಕ್ಷ, ಭಾರತೀಯ ಜನತಾ ಪಾರ್ಟಿ ಹಾಗೂ ದ್ರಾವಿಡ ಮುನ್ನೇತ್ರ ಕಳಗಂ ಪಕ್ಷಗಳು ಈ ಕಾರ್ಯಕ್ರಮದ ಸಹ ಪ್ರಾಯೋಜಕರಾಗಿದ್ದಾರೆ.

ನಿಯೋಗವು ನವೆಂಬರ್‌ 8ರಂದು ನವದೆಹಲಿಗೆ ಆಗಮಿಸಿಲಿದ್ದು, ಚೆನ್ನೈ ಭೇಟಿಯ ಬಳಿಕ ಬೆಂಗಳೂರಿಗೆ ನವೆಂಬರ್‌ 11ರಂದು ಆಗಮಿಸಲಿದೆ. ನಿಯೋಗವು ಮೈಸೂರಿಗೆ ನವೆಂಬರ್‌ 12ರಂದು ಭೇಟಿ ನೀಡಲಿದೆ. ಆನಂತರ, ಗೋವೆಗೆ ತೆರಳಲಿದೆ.

ನಿಯೋಗವು ವಿವಿಧ ಪಕ್ಷಗಳ ಹಿರಿಯ ನಾಯಕರು ಹಾಗೂ ಉದಯೋನ್ಮುಖ ನಾಯಕರುಗಳನ್ನು ಭೇಟಿ ಮಾಡಿ, ಪರಸ್ಪರ ಹಿತಾಸಕ್ತಿಯ ಹಲವಾರು ವಿಷಯಗಳನ್ನು ಚರ್ಚಿಸಲಿದೆ. ಯುವ ಉದ್ಯಮಿಗಳೊಂದಿಗೂ ಮಾತುಕತೆ ನಡೆಸಲಿದೆ. ಬೆಂಗಳೂರಿನ ಪ್ರಖ್ಯಾತ ಕಾನೂನು ಕಾಲೇಜೊಂದರ ವಿದ್ಯಾರ್ಥಿಗಳೊಂದಿಗೆ ಭಾರತ -ಅಮೆರಿಕಾ ದ್ವಿಪಕ್ಷೀಯ ಸಂಬಂಧಗಳ ಕುರಿತ ಸಂವಾದ ಗೋಷ್ಠಿಯಲ್ಲಿ ಪಾಲ್ಗೊಳ್ಳಲಿದೆ. ಹಲವಾರು ಐತಿಹಾಸಿಕ ಸ್ಥಳಗಳಿಗೂ ಈ ನಿಯೋಗ ಭೇಟಿ ನೀಡಲಿದೆ.

ಅಮೆರಿಕ ಪ್ರಾಯೋಜಿತ ಸ್ವಯಂ ಸೇವಾ ಸಂಸ್ಥೆಯಾಗಿರುವ ಎಸಿವೈಪಿಎಲ್‌, ಅಮೆರಿಕಾ ಹಾಗೂ ಇತರ ದೇಶಗಳ ರಾಜಕೀಯ ವ್ಯವಸ್ಥೆ, ವಿವಿಧ ಸಂಸ್ಕೃತಿ- ಆದರ್ಶಗಳ ತೌಲನಿಕ ಅಧ್ಯಯನಕ್ಕೆ ಒತ್ತು ನೀಡುತ್ತದೆ. ಪ್ರತಿ ವರ್ಷವೂ ಈ ಸಂಸ್ಥೆಯು 25-40 ವಯೋಮಾನದಲ್ಲಿರುವ ಅಮೆರಿಕಾದ ಯುವ ನೇತಾರರ ನಿಯೋಗವನ್ನ್ನು ರಾಜಕೀಯ ವ್ಯವಸ್ಥೆಯ ಅಧ್ಯಯನಕ್ಕಾಗಿ ಪ್ರವಾಸ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತದೆ.

ಅಂತೆಯೇ ವಿವಿಧ ದೇಶಗಳ ಯುವ ನಾಯಕರಿಗಾಗಿ ಅಮೆರಿಕಾ ದೇಶದ ಪ್ರವಾಸ ಕಾರ್ಯಕ್ರಮವನ್ನೂ ಏರ್ಪಡಿಸುತ್ತದೆ. ಇಂಥ ಪ್ರವಾಸಗಳ ಮೂಲಕ ಯುವ ನಾಯಕರು ವಿದೇಶಾಂಗ ವ್ಯವಹಾರ ಕೌಶಲ್ಯ, ದ್ವಿಪಕ್ಷೀಯ ವಿಷಯಗಳ ಕುರಿತು ಮಾತುಕತೆಯ ವಿಧಾನ ಹಾಗೂ ಇನ್ನು ಹಲವು ವಿಷಯಗಳ ಕುರಿತು ವಿಶೇಷ ಜ್ಞಾನ ಪಡೆಯುತ್ತಾರೆ.

ಭಾರತದ 7ಮಂದಿ ಯುವ ನಾಯಕರ ಪಕ್ಷಾತೀತ ನಿಯೋಗವು 2004ರಲ್ಲಿ ಅಮೆರಿಕಾಕ್ಕೆ ಭೇಟಿ ನೀಡಿ ಮೆರಿಲ್ಯಾಂಡ್‌ ಹಾಗೂ ಕ್ಯಾಲಿಫೋರ್ನಿಯಾ ರಾಜ್ಯಗಳಲ್ಲಿ ಪ್ರವಾಸ ಮಾಡಿತ್ತು. ಈ ಸಂಸ್ಥೆಯು 1966ರಿಂದಲೂ ಈ ಕ್ಷೇತ್ರದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು, ಸುಮಾರು 90ಕ್ಕೂ ಹೆಚ್ಚು ದೇಶಗಳು ಪಾಲ್ಗೊಳ್ಳುತ್ತಿವೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X