ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನ.24ರವರೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಲಂಕೇಶ್‌ ನಾಟಕೋತ್ಸವ

By Staff
|
Google Oneindia Kannada News

ನ.24ರವರೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಲಂಕೇಶ್‌ ನಾಟಕೋತ್ಸವ
ಬೆಂಗಳೂರಿನಲ್ಲಿ ಈಗ ನಾಟಕಗಳ ಸುಗ್ಗಿ. ನಟ ಲೋಕೇಶ್‌ ಸಂಸ್ಮರಣೆಯ ನಾಟಕ ಸಪ್ತಾಹ ಇತ್ತೀಚೆಗಷ್ಟೇ ಮುಗಿದಿದೆ. ಮತ್ತೊಂದು ಕಡೆ ರಂಗಶಂಕರದಲ್ಲಿ ನಾಟಕಗಳ ಹಬ್ಬ ನಡೆಯುತ್ತಿರುವ ಮಧ್ಯೆಯೇ, ರವೀಂದ್ರ ಕಲಾಕ್ಷೇತ್ರದಲ್ಲಿ ಲಂಕೇಶ್‌ ನಾಟಕೋತ್ಸವ.

ಬೆಂಗಳೂರು : ಖ್ಯಾತ ಪತ್ರಕರ್ತ, ಬರಹಗಾರ ಪಿ.ಲಂಕೇಶ್‌ ಅವರ ಕೃತಿಗಳನ್ನಾಧರಿಸಿದ ‘ಲಂಕೇಶ್‌ ನಾಟಕೋತ್ಸವ’ವು ಮಂಗಳವಾರ ಸಂಜೆ ಅರಂಭಗೊಳ್ಳಲಿದೆ.

ರವೀಂದ್ರ ಕಲಾಕ್ಷೇತ್ರದಲ್ಲಿ ಸಂಜೆ 7ಗಂಟೆಗೆ ‘ಮುಸ್ಸಂಜೆಯ ಕಥಾ ಪ್ರಸಂಗ’ ನಾಟಕದ ಪ್ರಯೋಗದೊಂದಿಗೆ ನಾಟಕೋತ್ಸವಕ್ಕೆ ಚಾಲನೆ ದೊರೆಯಲಿದೆ ಎಂದು ನಾಟಕೋತ್ಸವ ಆಯೋಜಿಸಿರುವ ನಾಟಕ ಅಕಾಡೆಮಿ ಅಧ್ಯಕ್ಷ ಶ್ರೀನಿವಾಸ್‌ ಜಿ.ಕಪ್ಪಣ್ಣ ತಿಳಿಸಿದ್ದಾರೆ.

ನ.24ರವರೆಗೆ ನಾಟಕೋತ್ಸವವು ರವೀಂದ್ರ ಕಲಾಕ್ಷೇತ್ರದಲ್ಲಿ ಜರುಗಲಿದೆ. ನಾಟಕಗಳು ಪ್ರದರ್ಶನಗೊಳ್ಳುವ ಸಮಯ ಸಂಜೆ 7ಗಂಟೆ.

ನಾಟಕೋತ್ಸವದ ವಿವರ :

  • ನ. 08 : ‘ ಮುಸ್ಸಂಜೆಯ ಕಥಾ ಪ್ರಸಂಗ’ ಕೃತಿಯನ್ನು ಬಸಲರಾಜ ಸೂಳೇರಿಪಾಳ್ಯ ಅವರು ರಂಗ ರೂಪಾಂತರಗೊಳಿಸಿದ್ದಾರೆ. ಈ ತಂಡದ 30ಕ್ಕೂ ಹೆಚ್ಚು ಜನ ಕಲಾವಿದರೂ ಈ ನಾಟಕದಲ್ಲಿ ಅಭಿನಯಿಸಲಿದ್ದಾರೆ.

  • ನ. 18 : ಚಿತ್ರಾತಂಡದ ಕಲಾವಿದರು ಪ್ರಕಾಶ್‌ ಬೆಳವಾಡಿ ನಿರ್ದೇಶನದಲ್ಲಿ ‘ಸಂಕ್ರಾಂತಿ’ ನಾಟಕವನ್ನು ಪ್ರಸ್ತುತ ಪಡಿಸಲಿದ್ದಾರೆ.

  • ನ. 19 : ಸ್ನೇಹ ಸಮೂಹ ತಂಡ ನಟರಾಜ ಹೊನ್ನವಳ್ಳಿ ನಿರ್ದೇಶನದಲ್ಲಿ ‘ಬಿರುಕು’ ನಾಟಕವನ್ನು ಪ್ರಸ್ತುತಪಡಿಸಲಿದೆ.

  • P.Lankesh
  • ನ. 21: ಕೆ.ವಿ.ನಾಗರಾಜ ಮೂರ್ತಿ ನಿರ್ದೇಶನದಲ್ಲಿ ‘ಟಿ.ಪ್ರಸನ್ನನ ಗ್ರಹಸ್ತಾಶ್ರಮ’ ಪ್ರದರ್ಶನಗೊಳ್ಳಲಿದೆ.

  • ನ. 22 : ಬಿ.ಜೆ.ಶ್ರೀಧರಮೂರ್ತಿ ನಿರ್ದೇಶನದಲ್ಲಿ ಜನಸಂಸ್ಕೃತಿ ತಂಡದ ಕಲಾವಿದರಿಂದ ‘ಗುಣಮುಖ’ ಪ್ರದರ್ಶನ.

  • ನ. 23 : ರಂಗ ಸಮುದ್ರ ತಂಡವು ಆರ್‌.ನಾಗೇಶ್‌ ನಿರ್ದೇಶನದಲ್ಲಿ ‘ಸಿದ್ಧತೆ’ ನಾಟಕವನ್ನು ಪ್ರದರ್ಶಿಸಲಿದೆ.

  • ನ .24 : ಈ ದಿನ ಮೂರು ನಾಟಕಗಳು ಪ್ರದರ್ಶನಗೊಳ್ಳಲಿವೆ :

  • ವೇದಿಕೆ ತಂಡವು ಋತ್ವಿಕ ಸಿಂಹ ನಿರ್ದೇಶನದಲ್ಲಿ ಪ್ರಸ್ತುತಪಡಿಸುವ ನಾಟಕ - ‘ಪೊಲೀಸರಿದ್ದಾರೆ ಎಚ್ಚರಿಕೆ’
  • ಎಸ್‌.ಸುಬ್ರಮಣ್ಯ ನಿರ್ದೇಶನದಲ್ಲಿ ರಂಗಪ್ರಪಂಚ ಪ್ರಸ್ತುತಪಡಿಸುವ ನಾಟಕ -‘ತೆರೆಗಳು’.

  • ಕಲಾ ಗಂಗೋತ್ರಿ ಕಲಾವಿದರು ಡಾ.ಬಿ.ವಿ.ರಾಜಾರಾಂ ನಿರ್ದೇಶನದಲ್ಲಿ ಪ್ರಸ್ತುತಪಡಿಸುವ ನಾಟಕ -‘ದೊರೆ ಈಡಿಪಸ್‌’
  • ಸಂವಾದ : ನಾಟಕೋತ್ಸವದಲ್ಲಿ ಲಂಕೇಶ್‌ರ ಒಂಭತ್ತು ನಾಟಕಗಳು ಪ್ರದರ್ಶನಗೊಳ್ಳಲಿವೆ. ಪ್ರತಿ ನಾಟಕದ ಮಾರನೇ ದಿನ ಸಂಜೆ 6ಗಂಟೆಗೆ ನಾಟಕದ ನಿರ್ದೇಶಕರು, ಕಲಾವಿದರೊಂದಿಗೆ ಚರ್ಚೆ ನಡೆಸಲು ಪ್ರೇಕ್ಷಕರಿಗೆ ಅವಕಾಶ ಕಲ್ಪಿಸಲಾಗಿದೆ.

    ಬೀದಿ ನಾಟಕ : ಲಂಕೇಶ್‌ ನಾಟಕೋತ್ಸವದ ಜೊತೆಗೆ ನ.21, 22, 23ರ ಸಂಜೆ ಐದು ಗಂಟೆಗೆ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ‘ಇಪ್ಪಾ ಸಮುದಾಯ’ದ ಬೀದಿ ನಾಟಕಗಳು ಪ್ರದರ್ಶನವಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.

    (ಇನ್ಫೋ ವಾರ್ತೆ)

    ಮುಖಪುಟ / ವಾರ್ತೆಗಳು

    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X